Wednesday, January 28, 2026

*ಸಾರಿಗೆ ನಿಯಮಗಳ ಪಾಲಿಸಿ : ಆರ್ ಟಿ ಓ ಆನಂದ ಗೌಡ ಕರೆ*

ಪುತ್ತೂರು : ಸಾರಿಗೆ ನಿಯಮಗಳ ಉಲ್ಲಂಘನೆಯಿಂದಾಗಿ ಭಾರತದಲ್ಲಿ ಅತೀ ಹೆಚ್ಚು ಅಪಘಾತಗಳು ನಡೆಯುತ್ತಿದ್ದು, ಈ ಕುರಿತಾಗಿ ಯುವ ಸಮೂಹ ಜಾಗೃತರಾಗಬೇಕಿದೆ ಎಂದು ಪುತ್ತೂರು ಪ್ರಾದೇಶಿಕ ಸಾರಿಗೆ ಅಧಿಕಾರಿ ರೊ.ಆನಂದ ಗೌಡ ಹೇಳಿದರು.

ರೋಟರಿ ಪುತ್ತೂರು ಸ್ವರ್ಣ, ರೋಟರಿ ಪುತ್ತೂರು ಸೆಂಟ್ರಲ್ ಹಾಗೂ ರೋಟರಿ ಪುತ್ತೂರು ಎಲೈಟ್ ನ ಆಶ್ರಯದಲ್ಲಿ ಗುರುವಾರ ಅಶ್ಮಿ ಕಂಫರ್ಟ್ಸ್ ನಲ್ಲಿ ನಡೆದ 32 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಪಘಾತದ ಅಂಕಿ ಅಂಶದಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದ್ದು, ಇದು ವಿಷಾದನೀಯ ಸಂಗತಿ ಎಂದ ಅವರು, ಪ್ರತಿಯೊಬ್ಬರ ಜಾಗೃತಿಯಿಂದ ಇದರ ನಿಯಂತ್ರಣ ಸಾಧ್ಯ ಎಂದರು.

ಆಗಾಗ್ಗೆ ಬದಲಾಗುತ್ತಿರುವ ಸಾರಿಗೆ ನಿಯಮಗಳ ಕುರಿತಾಗಿ ಪ್ರತಿಯೊಬ್ಬರೂ ಅರಿವು ಪಡೆಯುವುದರ ಜೊತೆಗೆ,

ಅವುಗಳನ್ನು ಪಾಲಿಸಬೇಕು ಎಂದ ಅವರು, ವಾಹನ ಚಲಾಯಿಸುವ ಹಿರಿಯರು ತಾವು ನಿಯಮಗಳನ್ನು ಪಾಲಿಸುವುದರ ಜೊತೆಗೆ, ಮುಂದಿನ ಪೀಳಿಗೆಗೂ ಮಾದರಿಯಾಗಬೇಕು ಎಂದರು.

ಇದೇ ಸಂದರ್ಭ ರೋಟರಿ ಪುತ್ತೂರು ಎಲೈಟ್ ವತಿಯಿಂದ‌ ಮೌನೇಶ ವಿಶ್ವಕರ್ಮ ರಚನೆಯ, ರಾಮಕೃಷ್ಣ ಪ್ರೌಢಶಾಲೆಯ ವಿದ್ಯಾರ್ಥಿನಿ ಆ್ಯನೆಟ್ ರಿಯಾರಾಮ್ ಹಾಡಿರುವ ರಸ್ತೆ ಸುರಕ್ಷತಾ ಜಾಗೃತಿ ಗೀತೆಯನ್ನು ಆರ್ ಟಿಓ ಆನಂದ ಗೌಡರು ಬಿಡುಗಡೆಗೊಳಿಸಿದರು.

ರೋಟರಿ ವಲಯ 5 ರ ಸಹಾಯಕ ಗವರ್ನರ್ ರೊ.ಸಚ್ಚಿದಾನಂದ.ಡಿಯವರು, ರೋಟರಿ ಸ್ವರ್ಣದ ನಿಯೋಜಿತ ಅಧ್ಯಕ್ಷ ರೊ.ಭಾಸ್ಕರ ಕೋಡಿಂಬಾಳ ರಿಗೆ ಪಿಹೆಚ್ಎಫ್ ಪದವಿ ಪ್ರದಾನ ಮಾಡಿ ಮಾತನಾಡಿ, ರಸ್ತೆ ಸುರಕ್ಷತೆ ಕುರಿತಾಗಿ ರೋಟರಿ ಎಲೈಟ್ ಬಿಡುಗಡೆಗೊಳಿಸಿದ ಜಾಗೃತಿ ಗೀತೆಯ ಕುರಿತಾಗಿ ಮೆಚ್ಚುಗೆ ವ್ಯಕ್ತಪಡಿಸಿದರು.

ರೋಟರಿ ಝೋನಲ್ ಲೆಫ್ಟಿನೆಂಟ್ ರೊ.ಮನೋಹರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರೋಟರಿ ಸೆಂಟ್ರಲ್ ಅಧ್ಯಕ್ಷ ರೊ.ವೆಂಕಟರಾಜ್ ಸ್ವಾಗತಿಸಿ, ರೋಟರಿ ಸ್ವರ್ಣದ ಅಧ್ಯಕ್ಷೆ ರೊ.ಸೆನೋರಿಟಾ ಆನಂದ್ ವಂದಿಸಿದರು.ರೋಟರಿ ಎಲೈಟ್ ನ ರೊ.ಈಶ್ವರ್ ಬೆಡೇಕರ್ ಕಾರ್ಯಕ್ರಮ ನಿರ್ವಹಿಸಿದರು.

More from the blog

Bantwal : ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಷನ್ – ಪದಾಧಿಕಾರಿಗಳ ಪದಾಪ್ರಧಾನ, ರಜತ ಸಂಭ್ರಮ ಸಮಾರೋಪ

ಬಂಟ್ವಾಳ :ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಷನ್ ರಿ, ಬಂಟ್ವಾಳ ವಲಯದ ನೂತನ ಪದಾಧಿಕಾರಿಗಳ ಪದಾಪ್ರಧಾನ ಸಮಾರಂಭ ಹಾಗು ರಜತ ಸಂಭ್ರಮದ ಸಮಾರೋಪ ಸಮಾರಂಭ ವು ಬಿಸಿ ರೋಡ್ ನ ಲಯನ್ಸ್ ಸೇವಾ...

B.C. Road : ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ನರೇಗಾ ಬಚಾವೋ ಸಂಗ್ರಾಮ ಕಾರ್ಯಕ್ರಮ

ಬಂಟ್ವಾಳ: ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ನರೇಗಾ ಬಚಾವೋ ಸಂಗ್ರಾಮ ಕಾರ್ಯಕ್ರಮ ಬಿಸಿರೋಡಿನ ರಕ್ತೇಶ್ವರಿ...

ಕಟೀಲು 7 ಮೇಳಗಳ ಜ.28ರ ಸೇವೆಯಾಟಗಳ ವಿವರ ಇಲ್ಲಿದೆ..

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇದರ 7 ಮೇಳಗಳ ಜ.28ರ ಸೇವೆಯಾಟಗಳ ವಿವರ ಈ ಕೆಳಗಿನಂತಿವೆ.. ಜ.28ರ ಸೇವೆಯಾಟಗಳ ವಿವರ : ಆನಂದ ಎಂ. ಶೆಟ್ಟಿ, ಏಳಿಂಜೆ ಅಂಗಡಿಗುತ್ತು,...

ಸಜೀಪ : ಜ.28, 29,30ರಂದು ಬೃಹತ್ 14ನೇ ವಾರ್ಷಿಕ ಜಲಾಲಿಯ್ಯಾ ರಾತೀಬ್

ಬಂಟ್ವಾಳ : ಜಲಾಲಿಯ್ಯಾ ಜುಮಾ ಮಸ್ಜಿದ್, ಚಟ್ಟೆಕ್ಕಲ್, ಸಜಿಪ ಇದರ ಆಶ್ರಯದಲ್ಲಿ ಬೃಹತ್ 14ನೇ ವಾರ್ಷಿಕ ಜಲಾಲಿಯ್ಯಾ ರಾತೀಬ್ ಬುರ್ದಾ ಮಜ್ಲಿಸ್ ಜಿಸ್ತಿಯಾ ಖುತ್‌ಬಿಯತ್ ಜ.28, 29,30 ರಂದು ಜಲಾಲಿಯ್ಯ ಜುಮಾ ಮಸೀದಿ...