ಬಂಟ್ವಾಳ: ಮನುಷ್ಯನ ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ವಾಹನ ಅಪಘಾತದಲ್ಲಿ ಮೃತಪಟ್ಟವರು ಹೆಚ್ಚು. ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿದರೆ ಅಮೂಲ್ಯವಾದ ಜೀವ ರಕ್ಷಣೆ ಮಾಡಲು ಸಾಧ್ಯ, ಎಂದು ಬಂಟ್ವಾಳ ಸಂಚಾರಿ ಪೊಲೀಸ್ ಉಪ ನಿರೀಕ್ಷಕರಾದ ಮಂಜುಳಾ ಕೆ.ಎಂ ಹೇಳಿದರು.
ಅವರು ರೋಟರಿ ಸಭಾಂಗಣ ಬಿ.ಸಿ.ರೋಡು ಇಲ್ಲಿ ನಡೆದ ರಸ್ತೆ ಸುರಕ್ಷತಾ ಸಪ್ತಾಹ – 2019 ಅಂಗವಾಗಿ ನಡೆದ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ರೋಟರಿ ಸದಸ್ಯರೊಂದಿಗೆ ಸಂವಾದ ನಡೆಸಿದರು. ಬಿ ಸಿ ರೋಡ್ ವಾಹನ ದಟ್ಟಣೆ ಸುಗಮವಾಗಿ ನಡೆಯಲು ಶಾಸಕರು ಹಾಗೂ ನಗರಸಭೆ ಜೊತೆಗೆ ಮಾತುಕತೆ ನಡೆಸಿ ಸಮಸ್ಯೆ ಬಗೆ ಹರಿಸಲು ಪ್ರಯತ್ನ ನಡೆದಿದೆ ಎಂದು ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಅವರು ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಹೇಳಿದರು. ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ಅಧ್ಯಕ್ಷ ರಾದ ಉಮೇಶ್ ನಿರ್ಮಲ್ ಅಧ್ಯಕ್ಷತೆ ಯಲ್ಲಿ ನಡೆದ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ರೋಟರಿ ವಲಯ 4ರ ಕಾರ್ಯದರ್ಶಿ ನಾರಾಯಣ ಹೆಗ್ಡೆ, ಕಾರ್ಯದರ್ಶಿ ಜಯರಾಜ್ ಎಸ್ ಬಂಗೇರ, ಪದಾಧಿಕಾರಿಗಳಾದ ಶಾಂತ್ ರಾಜ್, ವಿಂದ್ಯಾ ಎಸ್ ರೈ, ವಿಧ್ಯಾ ಚಂದ್ರಹಾಸ ಶೆಟ್ಟಿ, ಶಂಕರ್ ಶೆಟ್ಟಿ, ಪ್ರಕಾಶ್ ಆಳ್ವ, ಯಶವಂತ್ ವಿಟ್ಲ, ರಾಜ್ ಕುಮಾರ್ ಉಪಸ್ತಿತರಿದ್ದರು.