ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಟೌನ್ ಹಾಗೂ ರೋಟರಿ ಆನ್ಸ್ ನ ಜಂಟಿ ಸಭೆಯಲ್ಲಿ ಈ ಸಾಲಿನ ಎಸ್.ಎಸ್.ಯಲ್.ಸಿ. ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಬಿ.ಸಿ.ರೋಡಿನ ಕೈಕುಂಜೆಯಲ್ಲಿರುವ ಸಾಧನ ರೋಟರಿ ಸಭಾಭವನದಲ್ಲಿ ನಡೆದ ಈ ತಿಂಗಳ ಕೊನೆಯ ಸಭೆಯಲ್ಲಿ ವಿದ್ಯಾರ್ಥಿಗಳಾದ ವಂಶಿತ್ ಬಂಗೇರ, ಅಭಿಜಾತ ರೈ ಹಾಗೂ ವೈಷ್ಣವಿ ಸುವರ್ಣ ಅವರನ್ನು ರೋಟರಿ ಅಧ್ಯಕ್ಷ ಪದ್ಮನಾಭ ರೈ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ರೋ.ಜಯರಾಜ್ ಯೆಸ್. ಬಂಗೇರ,ಆ್ಯನ್ಸ್ ಅಧ್ಯಕ್ಷೆ ರೋ. ವಿಂದ್ಯಾ ಯೆಸ್ ರೈ, ರೋಟರಿ ಕಾರ್ಯದರ್ಶಿ ಕಿಶೋರ್ ಕುಮಾರ್, ಅ್ಯನ್ಸ್ ಕಾರ್ಯದರ್ಶಿ ರೋ .ಸುಜಾತ ರೈ.ರೋ.ಸೇಸಪ್ಪ ಮಾಸ್ಟರ್ ಹಾಗೂ ರೋಟರಿ ಕ್ಲಬ್ ಬಂಟ್ವಾಳ ಟೌನ್ ನ ಸದಸ್ಯರು ಉಪಸ್ಥಿತರಿದ್ದರು.

