ಬಂಟ್ವಾಳ: ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ 2019 ನೇ ಸಾಲಿನಲ್ಲಿ ಸಾಧನೆಗೈದ ವಿಧ್ಯಾರ್ಥಿಗಳಿಗೆ ರೋಟರಿ ಸಭಾಂಗಣದಲ್ಲಿ ನಡೆದ ರೋಟರಿ ಕ್ಲಬ್ ಬಂಟ್ವಾಳ ಟೌನ್ ಸರ್ವ ಸದಸ್ಯರ ಸಭೆಯಲ್ಲಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಹತ್ತನೇ ತರಗತಿಯಲ್ಲಿನ ಸಾಧನೆಗಾಗಿ ಡಾ.ಅನುರಾಧಾ ದಿನೇಶ್ ಕಾಮತ್ ದಂಪತಿಗಳ ಸುಪುತ್ರಿ ಕು.ಅನುಪಮ ಕಾಮತ್, ಪ್ರತಿಮಾ ಸುಧಾಕರ್ ಸಾಲಿಯಾನ್ ದಂಪತಿಗಳ ಸುಪುತ್ರ ಸುಜನ್, ಮೈತ್ರಿ ಗಣೇಶ್ ಸಾಲಿಯಾನ್ ದಂಪತಿಗಳ ಸುಪುತ್ರ ಗೌತಮ್ ಪೂಜಾರಿ, ಹೇಮಲತಾ ಸುರೇಶ್ ದಂಪತಿಗಳ ಸುಪುತ್ರಿ ಧಿಯಾ ಹಾಗೂ ಪಿಯುಸಿಯಲ್ಲಿ ಸಾಧನೆಗಾಗಿ ಪ್ರೀಮಾ ದಯಾನಂದ ಶೆಟ್ಟಿ ದಂಪತಿಗಳ ಸುಪುತ್ರ ಅನುಷ್ ಶೆಟ್ಟಿ ಯವರನ್ನು ಗೌರವಿಸಲಾಯಿತು. ಸಮಾರಂಭದಲ್ಲಿ ರೋಟರಿ ವಲಯ 4ರ ಕಾರ್ಯದರ್ಶಿ ನಾರಾಯಣ ಹೆಗ್ಡೆ, ರೋಟರಿ ಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷರಾದ ಉಮೇಶ್ ನಿರ್ಮಲ್, ನಿಕಟ ಪೂರ್ವ ಅಧ್ಯಕ್ಷರಾದ ಚಂದ್ರಹಾಸ ಶೆಟ್ಟಿ ರಂಗೋಲಿ, ಕಾರ್ಯದರ್ಶಿ ಜಯರಾಜ್ ಬಂಗೇರ ,ಕೋಶಾಧಿಕಾರಿ ಆಶಾಮಣಿ ರೈ , ಪದಾಧಿಕಾರಿಗಳಾದ ಪದ್ಮನಾಭ ರೈ, ಸುರೇಶ್ ಸಾಲಿಯಾನ್, ನರೇಂದ್ರ ನಾಥ ಭಂಡಾರಿ ಉಪಸ್ತಿತರಿದ್ದರು.