ಬಂಟ್ವಾಳ : ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ವತಿಯಿಂದ ಸರ್ವ ಸದಸ್ಯರ ಸ್ನೇಹಕೂಟ ಮಯ್ಯರ ಬೈಲ್ ನ ಸತೀಶ್ ಕುಮಾರ್ ಮನೆಯಲ್ಲಿ ನಡೆಯಿತು .
ಸಮಾರಂಭದ ಮುಖ್ಯ ಅತಿಥಿ ನಿಯೋಜಿತ ಅಸಿಸ್ಟೆಂಟ್ ಗವರ್ನರ್ ರಿತೇಶ್ ಬಾಳಿಗ ರೋಟರಿ ಸ್ನೇಹಕೂಟದ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ಅಧ್ಯಕ್ಷರಾದ ಉಮೇಶ್ ನಿರ್ಮಲ್ ವಹಿಸಿದ್ದರು. ಆತಿಥ್ಯ ವಹಿಸಿದ ರೊಟೇರಿಯನ್ ಸತೀಶ್ ಕುಮಾರ್ -ಹರಿಣಿ ದಂಪತಿಗಳ ವೈವಾಹಿಕ ದಿನದ ಅಂಗವಾಗಿ ಕೇಕ್ ಕತ್ತರಿಸಿ ಶುಭ ಹಾರೈಕೆ ಮಾಡಲಾಯಿತು. ಎಪ್ರಿಲ್ ತಿಂಗಳ ಸದಸ್ಯರಾದ ಮಹಾಬಲ, ರಮೇಶ್ ನಾಯಕ್, ಸತೀಶ್ ಕುಮಾರ್ ಹಾಗೂ ಹುಟ್ಟು ಹಬ್ಬ ಆಚರಿಸುವ ಸದಸ್ಯರಿಗೆ ಗೌರವಿಸಲಾಯಿತು. ಸಭೆಯ ಬಳಿಕ ರೋಟರಿ ಕುಟುಂಬ ಸದಸ್ಯರಿಗೆ ವಿವಿಧ ಮನರಂಜನಾ ಸ್ಪರ್ಧೆ ನಡೆಸಲಾಯಿತು. ಕಾರ್ಯದರ್ಶಿ ಜಯರಾಜ್ ಬಂಗೇರ ಧನ್ಯವಾದ ಸಲ್ಲಿಸಿದರು.