Thursday, June 26, 2025

ರೋಟರಿ ಕ್ಲಬ್ ಪರಂಗಿಪೇಟೆ ಯ ಪೂರ್ವ ತಯಾರಿ ಸಭೆ

ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ಪ್ರಾಯೋಜಕತ್ವದಲ್ಲಿ ನೂತನ ಕ್ಲಬ್ ಪರಂಗಿಪೇಟೆ ಯನ್ನು ಆರಂಭಿಸುವ ಪೂರ್ವ ತಯಾರಿ ಪ್ರಥಮ  ಸಭೆ ಪರಂಗಿಪೇಟೆ ಯ ಕಾಂತಪ್ಪ ಪೂಂಜ ಸಭಾಂಗಣದಲ್ಲಿ ನಡೆಯಿತು.
ನೂತನ ಕ್ಲಬ್ ನ ಪ್ರಥಮ ಸಭೆಯನ್ನು ಕಾಂತಪ್ಪ ಪೂಂಜ ಸಂಕೀರ್ಣ ಪರಂಗಿಪೇಟೆಯ ಪಾಲುದಾರರಾದ ಅರ್ಜುನ್ ಪೂಂಜ ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದರು. ರೋಟರಿ  ಮಾಜಿ ಜಿಲ್ಲಾ ಗವರ್ನರ್ ದೇವದಾಸ್ ರೈ ಯವರು ನೂತನ  ಸದಸ್ಯರಿಗೆ  ರೋಟರಿ ಹಿನ್ನೆಲೆ, ರಚನೆ ಮತ್ತು ಚಟುವಟಿಕೆ ಬಗ್ಗೆ ಪುನಶ್ಚೇತನ ಮಾಹಿತಿ ನೀಡಿದರು. ರೋಟರಿ ವಲಯ 4ರ ಕಾರ್ಯದರ್ಶಿ ನಾರಾಯಣ ಹೆಗ್ಡೆ ಪ್ರಾಸ್ತಾವಿಕ ಭಾಷಣ ಮಾಡಿದರು. ರೋಟರಿ ಅಸಿಸ್ಟೆಂಟ್ ಗವರ್ನರ್ ಪ್ರಕಾಶ್ ಕಾರಂತ್ ರೋಟರಿ ಸೇವಾ ಕಾರ್ಯಕ್ರಮಗಳ ಮಾಹಿತಿ ನೀಡಿದರು. ಸಭೆಯಲ್ಲಿ ಸ್ಥಾಪಕಧ್ಯಕ್ಷರಾಗಿ ಜಯರಾಮ ಶೇಖ ,ಕಾರ್ಯದರ್ಶಿ ಯಾಗಿ ರಮೇಶ್ ಶೆಟ್ಟಿ ಮತ್ತು ಕೋಶಾಧಿಕಾರಿಯಾಗಿ ನೊರ್ಬರ್ಟ್ ಡಿಸೋಜ, ಸದಸ್ಯತನ ಅಭಿವೃದ್ಧಿ ಚೆಯರ್ ಮೇನ್ ಆಗಿ  ಸುರೇಂದ್ರ ಕಂಬ್ಳಿ , ರೋಟರಿ ಫೌಂಡೇಶನ್ ಚೆಯರ್ ಮೇನ್ ಆಗಿ ಅಬ್ದುಲ್  ಸಲಾಂ  ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ಅಧ್ಯಕ್ಷರಾದ ಉಮೇಶ್ ನಿರ್ಮಲ್ ಸಭೆ ಯ ಅಧ್ಯಕ್ಷತೆಯನ್ನು ವಹಿಸಿ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಸವಿತಾ ನಿರ್ಮಲ್ ಪ್ರಾರ್ಥನೆ  ಮಾಡಿದರು.ಕಾರ್ಯದರ್ಶಿ ಜಯರಾಜ್ ಬಂಗೇರ ಧನ್ಯವಾದ ಸಲ್ಲಿಸಿದರು. ನೂತನ ಕ್ಲಬ್ ಆರಂಭಿಸಲು ಸಹಕರಿಸಿದ ಜಗನ್ನಾಥ ಚೌಟ ,ಗಣೇಶ್ ಶೆಟ್ಟಿ ಗೋಳ್ತಮಜಲ್ ,ಮಹಮ್ಮದ್ ಮುನೀರ್ ಉಪಸ್ತಿತರಿದ್ದರು.

More from the blog

5 ವರ್ಷದ ಮಗುವಿನ ಚಿಕಿತ್ಸೆಗೆ ಸಂಗಬೆಟ್ಟು ಗ್ರಾ. ಪಂ ವತಿಯಿಂದ ಸಹಾಯಧನದ ಚೆಕ್ ಹಸ್ತಾಂತರ.. 

ಬಂಟ್ವಾಳ : ತಾಲೂಕಿನ ಕರ್ಪೆ ಗ್ರಾಮದ ಕುಟ್ಟಿಕಳ ನಿವಾಸಿ ಹಿರಣ್ಯಾಕ್ಷ ಶಾಂತಿ ಹಾಗೂ ಸೌಮ್ಯ ದಂಪತಿಗಳ 5 ವರ್ಷದ ಪುಟ್ಟ ಹೆಣ್ಣು ಮಗು ಮನಸ್ವಿಳಿಗೆ ಅರೋಗ್ಯದಲ್ಲಿ ರಕ್ತದ ಕ್ಯಾನ್ಸರ್ ಇರುವುದರಿಂದ ಅರೋಗ್ಯದ ವೆಚ್ಚಕ್ಕಾಗಿ...

Old Bridge : ಮಂಗಳೂರು ಎನ್.ಐ.ಟಿ.ಕೆ ಸಂಸ್ಥೆ ಅಧಿಕಾರಿಗಳಿಂದ ಪಾಣೆಮಂಗಳೂರು ಹಳೆ ಸೇತುವೆಯ ಸಾಮರ್ಥ್ಯ ಪರೀಕ್ಷೆ

ಬಂಟ್ವಾಳ: ಬ್ರಿಟಿಷ್ ಕಾಲದ ಪಾಣೆಮಂಗಳೂರು ಸೇತುವೆಯ ಸಾಮರ್ಥ್ಯ ಪರೀಕ್ಷೆ ನಡೆಸುವ ಉದ್ದೇಶದಿಂದ ಮಂಗಳೂರು ಎನ್.ಐ.ಟಿ.ಕೆ ಸಂಸ್ಥೆಯಿಂದ ಇಬ್ಬರು ಅಧಿಕಾರಿಗಳು ಆಗಮಿಸಿ, ಜಿಲ್ಲಾಧಿಕಾರಿ ಅವರಿಗೆ ವರದಿ ನೀಡಿದ್ದಾರೆ. ಹಳೆ ಸೇತುವೆ ಬಗ್ಗೆ ಸ್ಥಳ ವೀಕ್ಷಣೆಗೆ ಏನ್...

ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ..

ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ, ಮಹಾರುದ್ರಾಭಿಷೇಕ ಮತ್ತು ವಿಶೇಷ...

Bantwal : ಮಾದಕ ದ್ರವ್ಯ ಮುಕ್ತ ಸಮಾಜಕ್ಕಾಗಿ” ಅಭಿಯಾನ – 2025 ಕಾರ್ಯಕ್ರಮ..

ಬಂಟ್ವಾಳ: ದ.ಕ.ಜಿಲ್ಲಾ ಪೋಲೀಸ್ ಇಲಾಖೆ, ಬಂಟ್ವಾಳ ವೃತ್ತದ ಪೋಲೀಸ್ ಠಾಣೆಯ ಹಾಗೂ ಶಿಕ್ಷಣ ಇಲಾಖೆ, ರೋಟರಿ ಕ್ಲಬ್ ಬಂಟ್ವಾಳ ಲೊರೆಟ್ಟೊ ಹಿಲ್ಸ್, ಬಂಟ್ವಾಳ ಟೌನ್ ಮೊಡಂಕಾಪು ಇವರ ಸಂಯುಕ್ತ ಆಶ್ರಯದಲ್ಲಿ " ಮಾದಕ...