ಬಂಟ್ವಾಳ: ತನ್ನ ನೆರೆಮನೆಯವರು ಹಸಿದಿರುವಾಗ ಹೊಟ್ಟೆ ತುಂಬಾ ಊಟ ಮಾಡುವವ ನನ್ನ ಅನುಯಾಯಿಯಲ್ಲ ಎಂಬ ಮಹಮ್ಮದ್ ಪೈಗಂಬರ್ ಸಂದೇಶ ಈದುಲ್ ಪಿತ್ರ್ ಹಬ್ಬದ ಮಹತ್ವ ಎತ್ತಿ ತೋರಿಸುತ್ತದೆ ಎಂದು ಬಿ ಮಹಮ್ಮದ್ ತುಂಬೆ ಹೇಳಿದರು.
ಅವರು ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ವತಿಯಿಂದ ರೋಟರಿ ಸಭಾಂಗಣದಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಈದ್ ಆಚರಣೆಯ ಮಹತ್ವದ ಬಗ್ಗೆ ಮಾತನಾಡಿದರು. ಎಲ್ಲಾ ಧರ್ಮದ ಆಶಯ ಮಾನವ ಕುಲದ ಏಳಿಗೆ. ನಾವು ಸಹೃದಯತೆ, ಶಾಂತಿ ಸಹಬಾಳ್ವೆಯಿಂದ ಜೀವನ ನಡೆಸಿ ನೊಂದವರ ಧ್ವನಿ ಯಾಗಬೇಕಿದೆ ಎಂದರು. ಸಮಾರಂಭದಲ್ಲಿ ರೋಟರಿ ವಲಯ 4ರ ಅಸಿಸ್ಟೆಂಟ್ ಗವರ್ನರ್ ಪ್ರಕಾಶ್ ಕಾರಂತ್, ನಿಯೋಜಿತ ಅಸಿಸ್ಟೆಂಟ್ ಗವರ್ನರ್ ರಿತೇಶ್ ಬಾಳಿಗ, ರೋಟರಿ ವಲಯ ಕಾರ್ಯದರ್ಶಿ ನಾರಾಯಣ ಹೆಗ್ಡೆ, ರೋಟರಿ ಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷರಾದ ಉಮೇಶ್ ನಿರ್ಮಲ್, ಕಾರ್ಯದರ್ಶಿ ಜಯರಾಜ್ ಬಂಗೇರ ಉಪಸ್ತಿತರಿದ್ದರು.