ಬಂಟ್ವಾಳ: ಅಂತಾರಾಷ್ಟ್ರೀಯ ರೋಟರಿಯಲ್ಲಿ ಸದಸ್ಯತನ ಅಭಿವೃದ್ಧಿಯಲ್ಲಿ ದಕ್ಷಿಣ ಕನ್ನಡ, ಕೊಡಗು, ಚಾಮರಾಜನಗರ, ಮೈಸೂರು ಜಿಲ್ಲೆಗಳನ್ನೊಳಗೊಂಡ ರೋಟರಿ ಜಿಲ್ಲೆ 3181ಮುಂಚೂಣಿಯಲ್ಲಿದೆ, ರೋಟರಿ, ಸ್ನೇಹ ಸೌಹಾರ್ದತೆ, ಬಾವೈಕ್ಯತೆ, ಒಗ್ಗೂಡಿ ಸಾಮರಸ್ಯಕ್ಕೆ ಆದ್ಯತೆ ನೀಡುತ್ತದೆ. ಪರಂಗಿಪೇಟೆ ಯಲ್ಲಿ ಪ್ರಜ್ಞಾವಂತರು ರೋಟರಿ ಮೂಲಕ ಒಟ್ಟು ಸೇರುವುದು ಶ್ಲಾಘನೀಯ ಎಂದು ರೋಟರಿ ಜಿಲ್ಲೆ 3181ರ ಜಿಲ್ಲಾ ಗವರ್ನರ್ ರೋಹಿನಾಥ್ ಪಾದೆ ಹೇಳಿದರು.
ಅವರು ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ಪ್ರಾಯೋಜಕತ್ವದಲ್ಲಿ ಸೇವಾಂಜಲಿ ಸಭಾಂಗಣದಲ್ಲಿ ನಡೆದ ನೂತನ ರೋಟರಿ ಕ್ಲಬ್ ಪರಂಗಿಪೇಟೆ ಯ ಸನ್ನದು ಪ್ರಧಾನ ಮಾಡಿ ಮಾತನಾಡಿದರು. ರೋಟರಿ ಕ್ಲಬ್ ಪರಂಗಿಪೇಟೆಯ ನೂತನ ಅಧ್ಯಕ್ಷರಾದ ಜಯರಾಮ ಶೇಖ ನೇತೃತ್ವದ 47 ಸದಸ್ಯರನ್ನು ರೋಟರಿ ಪಿನ್, ಪ್ರಮಾಣ ಪತ್ರ ನೀಡಿ ಪದ ಪ್ರದಾನ ಮಾಡಿದರು. ಸೇವಾಂಜಲಿಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೆ ಕೃಷ್ಣ ಕುಮಾರ್ ಪೂಂಜ ಉದ್ಘಾಟನೆ ನೆರವೇರಿಸಿ ಶುಭ ಹಾರೈಸಿದರು. ರೋಟರಿ ಜಿಲ್ಲಾ ಕ್ಲಬ್ ವಿಸ್ತರಣಾಧ್ಯಕ್ಷ ಶೇಖರ್ ಶೆಟ್ಟಿ ನೂತನ ಸದಸ್ಯರಿಗೆ ಪುನಶ್ಚೇತನ ತರಬೇತಿ ನೀಡಿ ರೋಟರಿ ಕಾರ್ಯವಿಧಾನದ ಬಗ್ಗೆ ಪ್ರಸ್ತಾಪ ಮಾಡಿದರು. ಸಮಾರಂಭದಲ್ಲಿ ರೋಟರಿ ಜಿಲ್ಲೆ3181ಇದರ ವಲಯ 4ರ ಅಸಿಸ್ಟೆಂಟ್ ಗವರ್ನರ್ ಪ್ರಕಾಶ್ ಕಾರಂತ್, ವಲಯ ಸೇನಾನಿ ಸಂಜೀವ ಪೂಜಾರಿ ಗುರುಕೃಪ, ಗವರ್ನರ್ ವಿಶೇಷ ಪ್ರತಿನಿಧಿ ಚಂದ್ರಹಾಸ ಶೆಟ್ಟಿ ರಂಗೋಲಿ, ಕಾರ್ಯದರ್ಶಿ ಜಯರಾಜ್ ಬಂಗೇರ ಉಪಸ್ತಿತರಿದ್ದರು. ಸಭಾಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷರಾದ ಉಮೇಶ್ ನಿರ್ಮಲ್ ಸ್ವಾಗತಿಸಿದರು ನೂತನ ಕಾರ್ಯದರ್ಶಿ ರಮೇಶ್ ಶೆಟ್ಟಿ ಧನ್ಯವಾದ ಸಲ್ಲಿಸಿದರು. ವಲಯ ಕಾರ್ಯದರ್ಶಿ ನಾರಾಯಣ ಹೆಗ್ಡೆ ನೂತನ ಸದಸ್ಯರನ್ನು ಪರಿಚಯ ಮಾಡಿದರು , ನರೇಂದ್ರ ನಾಥ ಭಂಡಾರಿ ಕಾರ್ಯಕ್ರಮ ನಿರೂಪಣೆ ಮಾಡಿದರು.