ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ವತಿಯಿಂದ ನರಿಕೊಂಬು ಗ್ರಾಮದ ಬೋಳಂತೂರು ಅಂಗನವಾಡಿಗೆ ವಾಟರ್ ಪ್ಯೂರಿಫಯರ್ ಹಸ್ತಾಂತರ ಮಾಡಲಾಯಿತು.
ರೋಟರಿ3181 ಇದರ ಅಸಿಸ್ಟೆಂಟ್ ಗವರ್ನರ್ ಪ್ರಕಾಶ್ ಕಾರಂತ್ ಅಂಗನವಾಡಿ ಕಾರ್ಯಕರ್ತೆ ಶಶಿಕಲಾ ಮತ್ತು ಶಾಂತಿ ಯವರಿಗೆ ಹಸ್ತಾಂತರ ಮಾಡಿದರು. ಸಮಾರಂಭದಲ್ಲಿ ರೋಟರಿ ವಲಯ ಕಾರ್ಯದರ್ಶಿ ನಾರಾಯಣ ಹೆಗ್ಡೆ, ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ಅಧ್ಯಕ್ಷರಾದ ಉಮೇಶ್ ನಿರ್ಮಲ್, ಪದಾಧಿಕಾರಿಗಳಾದ ಆಶಾಮಣಿ ರೈ, ಮಹಮ್ಮದ್ ಮುನೀರ್, ರಾಜ್ ಕುಮಾರ್ ಹಾಗೂ ಮಕ್ಕಳ ಪೋಷಕರಾದ ವಿನೋದ, ರಾಜೀವಿ, ಭಾರತಿ ಉಪಸ್ತಿತರಿದ್ದರು.