ಬಂಟ್ವಾಳ: ಸರಕಾರಿ ಪ್ರಥಮ ದರ್ಜೆ ಕಾಲೇಜು ಸಿದ್ಧಕಟ್ಟೆ ಹಾಗೂ ರೋಟರಿ ಕ್ಲಬ್ ಬಂಟ್ವಾಳ ಲೋರೆಟ್ಟೊ ಹಿಲ್ಸ್ ಇವರ ಪ್ರಾಯೋಜಕತ್ವದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಿದ್ಧಕಟ್ಟೆಯ 2019-20 ನೇ ಸಾಲಿನ ರೋಟಾರ್‍ಯಾಕ್ಟ್ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಕಾಲೇಜಿನ ಸಭಾಂಗಣಲ್ಲಿ ಜರಗಿತು. ರೋಟರಿ ಕ್ಲಬ್ ಬಂಟ್ವಾಳ ಲೊರೆಟ್ಟೊ ಹಿಲ್ಸ್ ಇಲ್ಲಿನ ಅಧ್ಯಕ್ಷರಾದ ರೋ.PHF ಪದ್ಮರಾಜ ಬಲ್ಲಾಳ್ ಅವರು ಜ್ಯೋತಿ ಬೆಳಗಿಸಿ ರೋಟಾರ್‍ಯಾಕ್ಟ್ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂಕಪ್ಪ ಶೆಟ್ಟಿ, ನಿವೃತ್ತ ಮುಖ್ಯೋಪಾಧ್ಯಾಯರು, ಮಾತನಾಡಿ ಅಪಾರವಾದ ಯುವಶಕ್ತಿ ನಮ್ಮ ದೇಶದಲ್ಲಿದೆ, ಇದು ಸರಿಯಾದ ದಾರಿಯಲ್ಲಿ ಮುಂದುವರೆದರೆ ನಾವು ಕನಸು ಕಾಣುತ್ತಿರುವ ಸದೃಢ ರಾಷ್ಟ್ರ ಸಾಧ್ಯ. ಇಂದು ಹಳ್ಳಿ ಹಳ್ಳಿಗಳಲ್ಲೂ ಉತ್ತಮ ಶಿಕ್ಷಣ ಸಿಗುವ ನಿಟ್ಟಿನಲ್ಲಿ ದೇಶ ಸಾಗಿದೆ. ಹಳ್ಳಿಗಳಲ್ಲಿ ಉನ್ನತ ಶಿಕ್ಷಣಕ್ಕೆ ಅವಕಾಶ ಇದೆ. ಈ ಅವಕಾಶಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಶಿಕ್ಷಣ ಕೇವಲ ಪಠ್ಯಕ್ಕೆ ಸೀಮಿತವಾಗದೆ, ಅದರಲ್ಲೂ ನಮ್ಮ ಜೀವನವನ್ನು ಉತ್ತಮಗೊಳಿಸುವತ್ತ ಅವಶ್ಯಕವಾದ ಮಾನವಿಯ ಮೌಲ್ಯಗಳನ್ನು ರೂಢಿಸಿಕೊಂಡು ದೇಶಕ್ಕಾಗಿ ಕಾಳಜಿ ವಹಿಸುವಂತೆ ರೂಪುಗೊಳ್ಳಬೇಕು. ಈ ನಿಟ್ಟಿನಲ್ಲಿ ನೂತನ ರೋಟಾರ್‍ಯಾಕ್ಟ್ ಕ್ಲಬ್ ಪದಾಧಿಕಾರಿಗಳು ಅಲ್ಲದೆ ಎಲ್ಲಾ ಸದಸ್ಯರು ಉತ್ತಮ ಚಿಂತನೆ ಮಾಡಿ ಸಮಾಜಮುಖಿ ಕಾರ್ಯ ಮಾಡಿ ನಮ್ಮಲ್ಲಿ ಸೇವಾ ಮನೋಭಾವ ರೂಢಿಸಿಕೊಳ್ಳಿ ಎಂದರು. ಗ್ರಾಮೀಣ ಪರಿಸರದಲ್ಲಿ ನಿಜವಾದ ಜೀವನ ಮೌಲ್ಯ, ಮಾನವೀಯ ಸಂಬಂಧಗಳು ಹುಟ್ಟಿಕೊಳ್ಳುತ್ತವೆ. ಇಲ್ಲಿ ಜನರ ಒಡನಾಟ ಸಾಧ್ಯ ಪರಸ್ಪರ ಕಷ್ಟಕ್ಕೆ ಸಹಕರಿಸುವುದು ಸಾಧ್ಯ. ಆದ್ದರಿಂದ ಆ ಒಳ್ಳೆಯ ಗುಣಗಳ ಜೊತೆಗೆ ಮಾನವೀಯ ಮೌಲ್ಯಗಳಾದ ದಯೆ, ಕರುಣೆ, ಅನುಕಂಪ, ಕಷ್ಟಕ್ಕೆ ಸ್ಪಂದಿಸುವುದು ಇತ್ಯಾದಿಗಳನ್ನು ನಾವು ರೂಢಿಸಿಕೊಂಡು ಸತ್ಪ್ರಜೆಗಳಾಗೋಣ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರೋ.PHF ಪದ್ಮರಾಜ ಬಲ್ಲಾಳ್ ಮಾತನಾಡಿ ರೋಟರಿ ಸಂಸ್ಥೆಯಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಹಲವಾರು ಅವಕಾಶಗಳಿವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ನಿಯೋಜಿತ ತಂಡದ ನೇತೃತ್ವದಲ್ಲಿ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು, ತಾವು ಬೆಳೆದ ಸುತ್ತಲಿನ ಸಮಾಜಕ್ಕೆ ದುಡಿಯುವ ರೋಟರಿ ಧ್ಯೇಯದೊಂದಿಗೆ ಒಟ್ಟಾಗಿ ಶ್ರಮಿಸುವಂತಾಗಲಿ ಎಂದು ಆಶಿಸಿದರು. ಹಾಗೆಯೇ ರೋಟರಿ ಕ್ಲಬ್ ಬಂಟ್ವಾಳ ಲೋರೆಟ್ಟೊ ಹಿಲ್ಸ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಿದ್ಧಕಟ್ಟೆಗೆ ಮುಂದಿನ ದಿನಗಳಲ್ಲಿಯೂ ಉತ್ತಮ ಸಹಕಾರ ನೀಡುವ ಭರವಸೆ ನೀಡಿದರು.
ಈ ಕಾರ್ಯಕ್ರಮದಲ್ಲಿ , ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸತ್ಯನಾರಾಯಣ ಭಟ್, ಬಂಟ್ವಾಳ ರೋಟರಿ ಕ್ಲಬ್‌ನ ಅಧ್ಯಕ್ಷರಾಗಿರುವ ರೋ. ಊಉಈ ನಾರಾಯಣ ಹೆಗ್ಡೆ, ರೋಟಾರ್‍ಯಾಕ್ಟ್ ಚೇರಮನ್ ರೋ.ಪ್ರಭಾಕರ ಪ್ರಭು , ರೋಟರಿ ಕ್ಲಬ್ ಬಂಟ್ವಾಳ ಲೊರೆಟೊ ಹಿಲ್ಸ್ ಕಾರ್ಯದರ್ಶಿ ರೋ.ಶ್ರುತಿ ಮಾಡ್ತಾ , ನಿಕಟಪೂರ್ವ ಅಧ್ಯಕ್ಷರಾದ ರೋ.PHF ಅವಿಲ್ ಮೆನೇಜಸ್, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಸಂದೇಶ ಶೆಟ್ಟಿ , ಕಾಲೇಜಿನ ರೋಟಾರ್‍ಯಾಕ್ಟ್ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಸುಕೇಶ್, ನಿಯೋಜಿತ ಅಧ್ಯಕ್ಷ ಗುರುಪ್ರಸಾದ್, ಮಾರ್ಗದರ್ಶಕರಾದ ಹನುಮಂತಯ್ಯ ಜಿಎಚ್, ರೋಟರಿ ಕ್ಲಬ್ ಬಂಟ್ವಾಳ ಲೋರೆಟ್ಟೊ ಹಿಲ್ಸ್ ಹಾಗೂ ಕಾಲೇಜಿನ ರೋಟಾರ್‍ಯಾಕ್ಟ್ ಕ್ಲಬ್‌ನ ವಿವಿಧ ಸದಸ್ಯರು, ಕಾಲೇಜಿನ ಬೋಧಕ ಬೋಧಕೇತರ ವರ್ಗ ಹಾಗೂ ಎಲ್ಲ ವಿದ್ಯಾರ್ಥಿಗಳು ಪಾಲ್ಗೊಂಡರು.
ದ್ವಿತೀಯ ಬಿ. ಕಾಂ. ವಿದ್ಯಾರ್ಥಿನಿ ಚೈತ್ರಾ ನಿರೂಪಿಸಿದ ಕಾರ್ಯಕ್ರಮದಲ್ಲಿ, ರೋಟರಿ ಕ್ಲಬ್ ಬಂಟ್ವಾಳ ಲೊರೆಟ್ಟೊ ಹಿಲ್ಸ್ ಇಲ್ಲಿನ ಅಧ್ಯಕ್ಷರಾದ ರೋ.PHF ಪದ್ಮರಾಜ ಬಲ್ಲಾಳ್ ಸ್ವಾಗತಿಸಿದರು. ಬಂಟ್ವಾಳ ರೋಟರಿ ಕ್ಲಬ್‌ನ ಅಧ್ಯಕ್ಷರಾಗಿರುವ ರೋ. ಊಉಈ ನಾರಾಯಣ ಹೆಗ್ಡೆ ಪ್ರಾಸ್ತಾವಿಕವಾಗಿ ಕಾಲೇಜಿನ ರೋಟಾರ್‍ಯಾಕ್ಟ್ ಕ್ಲಬ್‌ನ ಪ್ರಾಮುಖ್ಯತೆ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಕಾಲೇಜಿನ ಗ್ರಂಥಪಾಲಕರಾದ ಡಾ.ಶ್ರೀನಿವಾಸ ಅವರು ಇತ್ತೀಚೆಗೆ ಡಾಕ್ಟರೇಟ್ ಪದವಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ರೋಟರಿ ಕ್ಲಬ್ ಬಂಟ್ವಾಳ ಲೋರೆಟ್ಟೊ ಹಿಲ್ಸ್ ವತಿಯಿಂದ ಗೌರವಿಸಲಾಯಿತು.