ಇಡ್ಕಿದು ಗ್ರಾಮದ ಸೂರ್ಯ ಬಂಗೇರಕೋಡಿ ರಸ್ತೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಸಂಜೀವ ಮಠಂದೂರು ಇವರ 10 ಲಕ್ಷ ರೂ. ಅನುದಾನದಲ್ಲಿ ಕೈಗೆತ್ತಿಕೊಂಡ ರಸ್ತೆ ಕಾಂಕ್ರೀಟೀಕರಣ ಕಾಮಗಾರಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಚಂದ್ರಾವತಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪಂಚಾಯಿತಿ ಉಪಾಧ್ಯಕ್ಷರಾದ ಎಂ. ಸುಧೀರ್ ಕುಮಾರ್ ಶೆಟ್ಟಿ , ಪಿಡಿಒ ಗೋಕುಲ್ದಾಸ್ ಭಕ್ತ, ಎ.ಪಿ.ಎಂ.ಸಿ ಸದಸ್ಯರಾದ ಜಗದೀಶ್ ದೇವಸ್ಯ, ಪಂಚಾಯಿತಿ ಸದಸ್ಯರಾದ ಸತೀಶ್ ಕೆಂರ್ದೇಲು, ಹಿಮಾಕರ ಗಾಣಿಗ, ಉಮಾ ಎ, ಕೋಲ್ಪೆ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಮಾಜಿ ಆಡಳಿತ ಮೊಕ್ತೇಸರರಾದ ಸುರೇಶ್ ಮುಕ್ಕುಡ, ಸ್ಥಳೀಯರಾದ ಪ್ರಶಾಂತ್ ಬಂಗೇರಕೋಡಿ, ಚರಣ್ ಬಂಗೇರಕೋಡಿ, ಶಬೀರ್, ಜಗನ್ನಾಥ ಸೂರ್ಯ ಉಪಸ್ಥಿತರಿದ್ದರು.
