Thursday, January 29, 2026

ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ತ್ಯಾಜ್ಯ ರಾಶಿ ರಾಶಿ…. ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಮೌನ!

ಬಂಟ್ವಾಳ: ಪೋಲೀಸರನ್ನು ಜೊತೆಯಲ್ಲಿ ಸೇರಿಸಿಕೊಂಡು ರಸ್ತೆ ಬದಿಯಲ್ಲಿ ಕಸ ಎಸೆಯುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಶಾಸಕರು ಕೆ.ಡಿ.ಪಿ.ಸಭೆಯಲ್ಲಿ ನೀಡಿದ ಸೂಚನೆಗೆ ಅಧಿಕಾರಿಗಳು ಒಂದು ಚೂರು ಬೆಲೆ ನೀಡಿದಂತೆ ಕಾಣುವುದಿಲ್ಲ ಎಂಬುದಕ್ಕೆ ಚಿತ್ರದಲ್ಲಿ ರುವ ಚಿತ್ರಗಳೇ ಸಾಕ್ಷಿಯಾಗಿದೆ.

ಇದು ರಾಷ್ಟ್ರೀಯ ಹೆದ್ದಾರಿ 75 ರ ಮಂಗಳೂರು ಬೆಂಗಳೂರು ರಸ್ತೆಯ ಪಾಣೆಮಂಗಳೂರು ಹಳೆಯ ಸೇತುವೆ ಹತ್ತಿರ ಹಾಗೂ ಪಾಣೆಮಂಗಳೂರು ಮೆಲ್ಕಾರ್ ಮಧ್ಯೆ ರಸ್ತೆಯ ಬದಿಯಲ್ಲಿ ರಾಶಿ ಬಿದ್ದಿರುವ ತ್ಯಾಜ್ಯ.

ಇದು ಕಳೆದ ಕೆಲವು ತಿಂಗಳಿನಿಂದ ಕಾಣಸಿಗುವ ತ್ಯಾಜ್ಯ.

ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ವೇಳೆ ವಾಹನದಲ್ಲಿ ಬರುವ ವ್ಯಕ್ತಿ ಗಳು ತ್ಯಾಜ್ಯವನ್ನು ಎಸೆದು ಹೋಗುತ್ತಿರುವ ದೃಶ್ಯ ಕಂಡು ಬರುತ್ತಿದೆ ಎಂಬುದು ಇಲ್ಲಿನ ಸ್ಥಳೀಯರ ದೂರು !

 

ಇದರ ಜೊತೆಗೆ ನೇತ್ರಾವತಿ ನದಿಗೆ ಎಸೆದು ಹೋಗುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿ ಸಿದ್ದು ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿ ದ್ದಾರೆ.

ಸ್ವಚ್ಚ ಭಾರತದ ಜೊತೆ ಸ್ವಚ್ಚ ಬಂಟ್ವಾಳ ದ ಕನಸು ಹೊತ್ತಿರುವ ಬಂಟ್ವಾಳದ ಜನತೆಗೆ ಹೆದ್ದಾರಿಯ ಬದಿಯಲ್ಲಿ ರಾಶಿ ಹಾಕಿರುವ ಕಸ ನ್ಯಾಯ ಒದಗಿಸಬಹುದೇ?

*ಇಲಾಖೆ ಯಾಕೆ ಮೌನ*

ತ್ಯಾಜ್ಯ ಎಸೆದು ಹೋಗುವವರ ಮೇಲೆ ಅಧಿಕಾರಿಗಳು ಕಾನೂನು ಕ್ರಮ ಕೈಗೊಂಡಿದ್ದರೆ ಹೆದ್ದಾರಿಯಲ್ಲಿ ಈ ರೀತಿಯಲ್ಲಿ ತ್ಯಾಜ್ಯ ರಾಶಿ ಬೀಳುತ್ತಿರಲಲ್ಲ . ಅಧಿಕಾರಿಗಳ ಮೌನವೇ ಕಸ ಎಸೆಯುವ ವರಿಗೆ ವರದಾನವಾಗಿದೆ.

ಪುರಸಭಾ ಇಲಾಖಾ ಅಧಿಕಾರಿಗಳು , ಪುರಸಭಾ ಇಲಾಖೆಯ ಆರೋಗ್ಯ ಅಧಿಕಾರಿಗಳು ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳು ಯಾಕೆ ಮೌನವಹಿಸಿದ್ದಾರೆ ಎಂದು ಸ್ಥಳೀಯ ರು ಪ್ರಶ್ನೆ ಸಿದ್ದಾರೆ.

 

 

*ಉದ್ದೇಶಿತ ಕೃತ್ಯ*

 

ಅನ್ನ ತಿನ್ನುವವರು ಈ ರೀತಿಯಲ್ಲಿ ತ್ಯಾಜ್ಯ ರಸ್ತೆಗೆ ಎಸೆಯುವುದಿಲ್ಲ, ಇದೊಂದು ಉದ್ದೇಶಿತ ಕೆಲಸ ಎಂದು ದಿನೇಶ್ ಅಮ್ಟೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಸ ಎಸೆದು ಹೋಗುವ ಅನಾಗರಿಕ ಜನ ಅವರ ಅವರ ಮನೆಯ ಮುಂದೆ ಇದೇ ರೀತಿಯಲ್ಲಿ ಕಸವನ್ನು ರಾಶಿ ಹಾಕಿ ನೋಡಲಿ.

ನಾವು ಪ್ರತಿ ದಿನ ರಸ್ತೆಯಲ್ಲಿ ಸಂಚರಿಸುವ ವೇಳೆ ಕಸದ ರಾಶಿಯನ್ನು ಕಾಣುತ್ತಿದ್ದೇವೆ.

ವಾಸನೆಯ ಜೊತೆ ಕೊಳಕು ನೀರು ರಸ್ತೆಯ ಬದಿಯಲ್ಲಿ ಹರಿಯುತ್ತಿರುವ ದೃಶ್ಯ ಕಂಡು ಬರುತ್ತಿದೆ.

ಇಲ್ಲಿ ಕಸ ಎಸೆದು ಹೋಗುವವರ ಮೇಲೆ ಕಾನೂನು ಕ್ರಮಕೈಗೊಳ್ಳುವಂತೆ ಅವರು ಇಲಾಖೆ ಅಧಿಕಾರಿಗಳಿಗೆ ಈ ಮೂಲಕ ಒತ್ತಾಯ ಮಾಡಿದ್ದಾರೆ.

More from the blog

ಬೆಂಗಳೂರಿಗಿಂತ ಮಂಗಳೂರಿನಲ್ಲಿ ವಾಯು ಗುಣಮಟ್ಟ ಕಳಪೆ – ಅಚ್ಚರಿ ವರದಿ ಬಹಿರಂಗ..!

ಮಂಗಳೂರು : ರಾಜ್ಯದ ವಿವಿಧ ನಗರಗಳಲ್ಲಿ ವಾಯು ಗುಣಮಟ್ಟ (AQI) ಆತಂಕಕಾರಿ ಮಟ್ಟಕ್ಕೆ ತಲುಪಿದ್ದು, ಈ ಪೈಕಿ ರಾಜಧಾನಿ ಬೆಂಗಳೂರಿಗಿಂತ ಮಂಗಳೂರಿನಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿರುವುದು ವರದಿಯಾಗಿದೆ. ವರದಿಗಳ ಪ್ರಕಾರ, ಕರಾವಳಿ ಕರ್ನಾಟಕದ ಜಿಲ್ಲೆಗಳಾದ...

ದೈವೀಕೃಪೆಯಿಂದ ಮಾತ್ರ ಜೀವನರಥ ಎಳೆಯಬಹುದು : ಒಡಿಯೂರುಶ್ರೀ

ವಿಟ್ಲ: ಆತ್ಮರೂಪಿ ಭಗವಂತ ದೇಹದೊಳಗಿರುವಾಗಲೇ ಬದುಕಿನ ಸಾರ್ಥಕತೆ ಪಡೆಯಬೇಕು. ಧರ್ಮದ ಬಗ್ಗೆ ಮನೆಯಿಂದಲೇ ಜಾಗೃತಿ ಮೂಡಿಸುವ ಕಾರ್ಯವಾಗಬೇಕು. ಆಧ್ಯಾತ್ಮಿಕ ಬೆಳಕಿನಿಂದ ಮಾತ್ರ ರಾಷ್ಟ್ರ ಬೆಳಗಲು ಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ...

ಕೊಳ್ನಾಡು: ಕಾಲುಜಾರಿ ಬಾವಿಗೆ ಬಿದ್ದು ಕೃಷಿಕ ಸಾವು

ವಿಟ್ಲ: ದಾರಿ ಬದಿಯ ಆವರಣವಿಲ್ಲದ ಬಾವಿಗೆ ಆಕಸ್ಮಿಕವಾಗಿ ಬಿದ್ದು ಕೃಷಿಕ ಕೊಳ್ನಾಡು ಗ್ರಾಮದ ಸಾಲೆತ್ತೂರು ಕೋಡಿ ನಿವಾಸಿ ಕೃಷ್ಣಪ್ಪ ಪೂಜಾರಿ(70) ಮೃತ ಪಟ್ಟಿದ್ದಾರೆ. ಮಂಗಳವಾರ ಸಂಜೆ ಎಂದಿನಂತೆ ಸಾಲೆತ್ತೂರು ಪೇಟೆಗೆ ಹೋಗಿ ಹಿಂತಿರುಗಿ ಬರುವಾಗ...

ವಿದ್ಯುತ್ ಸಮಸ್ಯೆಗೆ ಸ್ಪಂದಿಸಿದ ಗ್ರಾ.ಪಂ.ಸದಸ್ಯ ಹಾಶೀರ್ ಪೆರಿಮಾರ್ ಅವರಿಗೆ ಗ್ರಾಮಸ್ಥರಿಂದ ಅಭಿನಂದನೆ

ಬಂಟ್ವಾಳ: ವಿದ್ಯುತ್ ಸಮಸ್ಯೆಯಿಂದ ಬೇಸೆತ್ತ ಗ್ರಾಮಸ್ಥರ ಸಮಸ್ಯೆಗೆ ಸಕಾಲದಲ್ಲಿ ಸ್ಪಂದಿಸಿದ ಪುದು ಗ್ರಾಮಪಂಚಾಯತ್ ಸದಸ್ಯನಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ. ಪುದು ಗ್ರಾಮದ ಪೇರಿಮಾರ್ ವಾರ್ಡಿನ ರಾಷ್ಟ್ರೀಯ ಹೆದ್ದಾರಿ ಬದಿಯಿಂದ ದೇವಸ್ಯ, ಜಲಾಲಿಯ ನಗರ, ಮಾರಿಪಳ್ಳ...