ವಿಟ್ಲ: ಪಡಿಬಾಗಿಲು ಅಳಿಕೆ ಸಂಪರ್ಕ ರಸ್ತೆಯಲ ಪಡಿಬಾಗಿಲು ದ್ವಾರದ ಬಳಿ ರಿಕ್ಷಾಗಳ ನಡುವೆ ಭಾನುವಾರ ಅಪಘಾತಗೊಂಡು 10ಕ್ಕೂ ಅಧಿಕ ಮಂದಿಗೆ ಗಾಯವಾಗಿದೆ.

ಎರುಂಬು ನಿವಾಸಿ ಹಮೀದ್ ಎರುಂಬು, ಪಡಿಬಾಗಿಲು ನಿವಾಸಿ ರವಿ ಪಡಿಬಾಗಿಲು ಎಂಬವರಿಗೆ ಸೇರಿದ ರಿಕ್ಷಾಗಳಾಗಿದೆ. ನೇರ ರಸ್ತೆಯಲ್ಲಿ ಡಿಕ್ಕಿ ಸಂಭವಿಸಿದ್ದು, ಅಪಘಾತದ ತೀವ್ರತೆಗೆ ಒಂದು ರಿಕ್ಷಾ ರಸ್ತೆ ಬದಿಯ ಚರಂಡಿಗೆ ಬಿದಿದ್ದೆ. ಇದರಿಂದ ಒಬ್ಬರ ಪರಿಸ್ಥಿತಿ ಚಿಂತಾಜನಕ ಇದೆ ಎಂದು ಹೇಳಲಾಗಿದೆ.
ವಿಟ್ಲ ಸಮುದಾಯ ಆಸ್ಪತ್ರೆಗೆ ಗಾಯಗೊಂಡವರನ್ನು ವರ್ಗಾವಣೆ ಮಾಡಿದ್ದು, ಹೆಚ್ಚಿನ ಚಿಕಿತ್ಸೆಗೆ ಬೇರೆ ಭಾಗಕ್ಕೆ ಕಳುಹಿಸುವ ಕಾರ್ಯವಾಗುತ್ತಿದೆ.