Wednesday, January 28, 2026

ಕೊಡಗು : ಅರ್ಚಕ ನಾರಾಯಣಾಚಾರ್‌‌ ಮಕ್ಕಳಿಗೆ ಪರಿಹಾರ ಹಣ ಪಡೆಯಲು ಅಡ್ಡಿಯಾದ ಮತಾಂತರ

ಕೊಡಗು : ರಾಜ್ಯ ಸರ್ಕಾರದ ಪರಿಹಾರ ಹಣ ಪಡೆಯಲು ತಲಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕ ನಾರಾಯಣಾಚಾರ್‌ ಅವರ ಪುತ್ರಿಯರಿಗೆ ಮತಾಂತರ ಅಡ್ಡಿಯಾಗಿರುವ ಬಗ್ಗೆ ವರದಿಯಾಗಿದೆ.

ಅರ್ಚಕರ ಪುತ್ರಿಯರಿಬ್ಬರು ಹಿಂದೂ ಧರ್ಮವನ್ನು ತೊರೆದು ಅನ್ಯ ಧರ್ಮಕ್ಕೆ ಮತಾಂತರಗೊಂಡಿರುವ ಕಾರಣ ಪರಿಹಾರ ಹಣ ಪಡೆದುಕೊಳ್ಳಲು ಇದು ಅಡ್ಡಿಯಾಗಿದೆ. ಅರ್ಚಕ ನಾರಾಯಣಾಚಾರ್‌ ಅವರ ಇಬ್ಬರು ಪುತ್ರಿಯರಿಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಆ.15ರಂದು ತಲಾ 2.50 ಲಕ್ಷ ರೂ ನಂತೆ ಪರಿಹಾರ ಹಣ ನೀಡಿದ್ದರು.

ಆ.5ರಂದು ಬ್ರಹ್ಮಗಿರಿ ಬೆಟ್ಟದ ಸಾಲಿನ ಗಜಗಿರಿ ಬೆಟ್ಟ ಕುಸಿದು ನಾರಾಯಣ ಆಚಾರ್, ಶಾಂತ ಆಚಾರ್, ಆನಂದ ತೀರ್ಥ ಸ್ವಾಮೀಜಿ ಸೇರಿದಂತೆ ರವಿ ಕಿರಣ್ ಹಾಗೂ ಶ್ರೀನಿವಾಸ್ ಅವರು ಭೂ ಸಮಾಧಿಯಾಗಿದ್ದು, ಇದರಲ್ಲಿ ಶಾಂತ ಆಚಾರ್ ಹಾಗೂ ಶ್ರೀನಿವಾಸ್ ಭಟ್ ಅವರ ಮೃತ ದೇಹಗಳನ್ನು ಇನ್ನೂ ಪತ್ತೆ ಮಾಡಲಾಗಲಿಲ್ಲ.

ಅರ್ಚಕ ನಾರಾಯಣ ಆಚಾರ್‌ ಅವರ ಮಕ್ಕಳು ಆಸ್ಟ್ರೇಲಿಯಾ, ನ್ಯೂಜಿಲೆಂಡ್‌‌ನಲ್ಲಿ ನೆಲೆಸಿದ್ದು, ಅಲ್ಲಿಂದ ಊರಿಗೆ ವಾಪಾಸ್ಸಾದ ಸಂದರ್ಭ ತಮ್ಮ ಪೋಷಕರು ನಾಪತ್ತೆಯಾಗಿರುವ ವಿಚಾರವಾಗಿ ಭಾಗಮಂಡಲ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು, ಈ ವೇಳೆ ಅರ್ಚಕರ ಇಬ್ಬರು ಪುತ್ರಿಯರು ಶಾರದಾ ಆಚಾರ್‌ ಹಾಗೂ ನಮಿತಾ ಆಚಾರ್‌ ಎಂದು ಉಲ್ಲೇಖಿಸಿದ್ದರು. ಈ ಹೆಸರಿನ ಅನ್ವಯ ಚೆಕ್‌‌‌ ಬರೆಯಲಾಗಿತ್ತು. ಇದೀಗ ಮಡಿಕೇರಿ ತಹಶೀಲ್ದಾರ್‌‌‌‌‌ ಪಿ.ಎಸ್‌‌‌ ಮಹೇಶ್‌ ಅವರ ಬಳಿ ತಮ್ಮ ಬ್ಯಾಂಕ್‌‌‌‌ ಖಾತೆಯಲ್ಲಿರುವ ಶೆನೋನ್‌‌ ಫರ್ನಾಂಡೀಸ್‌ (ಶಾರದಾ ಆಚಾರ್‌), ನಮಿತಾ ನಜೇರತ್‌‌ ಹೆಸರಿಗೆ ಚೆಕ್‌‌ ನೀಡುವಂತೆ ಮನವಿ ಮಾಡಿದ್ದಾರೆ. ಹೆಸರು ಬದಲಾವಣೆ ಆಗಿರುವ ಬಗ್ಗೆ ಸೂಕ್ತ ದಾಖಲೆಗಳನ್ನು ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.

More from the blog

ವಿದ್ಯುತ್ ಸಮಸ್ಯೆಗೆ ಸ್ಪಂದಿಸಿದ ಗ್ರಾ.ಪಂ.ಸದಸ್ಯ ಹಾಶೀರ್ ಪೆರಿಮಾರ್ ಅವರಿಗೆ ಗ್ರಾಮಸ್ಥರಿಂದ ಅಭಿನಂದನೆ

ಬಂಟ್ವಾಳ: ವಿದ್ಯುತ್ ಸಮಸ್ಯೆಯಿಂದ ಬೇಸೆತ್ತ ಗ್ರಾಮಸ್ಥರ ಸಮಸ್ಯೆಗೆ ಸಕಾಲದಲ್ಲಿ ಸ್ಪಂದಿಸಿದ ಪುದು ಗ್ರಾಮಪಂಚಾಯತ್ ಸದಸ್ಯನಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ. ಪುದು ಗ್ರಾಮದ ಪೇರಿಮಾರ್ ವಾರ್ಡಿನ ರಾಷ್ಟ್ರೀಯ ಹೆದ್ದಾರಿ ಬದಿಯಿಂದ ದೇವಸ್ಯ, ಜಲಾಲಿಯ ನಗರ, ಮಾರಿಪಳ್ಳ...

Bantwal : ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಷನ್ – ಪದಾಧಿಕಾರಿಗಳ ಪದಾಪ್ರಧಾನ, ರಜತ ಸಂಭ್ರಮ ಸಮಾರೋಪ

ಬಂಟ್ವಾಳ :ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಷನ್ ರಿ, ಬಂಟ್ವಾಳ ವಲಯದ ನೂತನ ಪದಾಧಿಕಾರಿಗಳ ಪದಾಪ್ರಧಾನ ಸಮಾರಂಭ ಹಾಗು ರಜತ ಸಂಭ್ರಮದ ಸಮಾರೋಪ ಸಮಾರಂಭ ವು ಬಿಸಿ ರೋಡ್ ನ ಲಯನ್ಸ್ ಸೇವಾ...

B.C. Road : ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ನರೇಗಾ ಬಚಾವೋ ಸಂಗ್ರಾಮ ಕಾರ್ಯಕ್ರಮ

ಬಂಟ್ವಾಳ: ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ನರೇಗಾ ಬಚಾವೋ ಸಂಗ್ರಾಮ ಕಾರ್ಯಕ್ರಮ ಬಿಸಿರೋಡಿನ ರಕ್ತೇಶ್ವರಿ...

ಕಟೀಲು 7 ಮೇಳಗಳ ಜ.28ರ ಸೇವೆಯಾಟಗಳ ವಿವರ ಇಲ್ಲಿದೆ..

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇದರ 7 ಮೇಳಗಳ ಜ.28ರ ಸೇವೆಯಾಟಗಳ ವಿವರ ಈ ಕೆಳಗಿನಂತಿವೆ.. ಜ.28ರ ಸೇವೆಯಾಟಗಳ ವಿವರ : ಆನಂದ ಎಂ. ಶೆಟ್ಟಿ, ಏಳಿಂಜೆ ಅಂಗಡಿಗುತ್ತು,...