ಬಂಟ್ವಾಳ: ಸ.ಪ.ಪೂ.ಕಾಲೇಜು ಐವರ್ನಾಡಿನ ಆಂಗ್ಲ ಭಾಷಾ ಶಿಕ್ಷಕಿ ಪ್ರೇಮಾ ಉದಯ್ ಕುಮಾರ್ ಅವರ ಅರವತ್ತು ಕವನಗಳ ಸಂಕಲನ ಪುಸ್ತಕ “ಭಾವ ಜೀವದ ಯಾನ”ವು ಹದಿನೈದನೇ ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನ,ಅಡ್ಯಂತಾಯ ರಂಗಮಂದಿರ, ಮೂಡಿಗೆರೆ ಇಲ್ಲಿ ಜ.18 ರಂದು ಬಿಡುಗಡೆಯಾಯಿತು.


ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.ಈ ಸಂದರ್ಭದಲ್ಲಿ ಡಾ. ಜಯಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯರಾದ ಭೋಜೇಗೌಡ ಸಾಂಸ್ಕೃತಿಕ ಕಾರ್ಯಕ್ರಮವನ್ನು ರಾಮಾಯಣದ ತುಣುಕನ್ನು ಹಾಡುವ ಮೂಲಕ ಉದ್ಘಾಟಿಸಿದರು.