ವಿಟ್ಲ: ವಿಟ್ಲ ಸೈಂಟ್ ರೀಟಾ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಯೋಗ ದಿನಾಚರಣೆ, ವನಮಹೋತ್ಸವವನ್ನು ಭಾರತ್ ಸ್ಕೌಟ್&ಗೈಡ್ಸ್ ದಳದ ಸಹಯೋಗದಿಂದ ಆಚರಿಸಿದ್ದು, ಶಾಲಾ ಸಂಚಾಲಕರಾದ ಧರ್ಮಗುರು ಎರಿಕ್ ಕ್ರಾಸ್ತಾ, ಸುನಿಲ್ ಪಿಂಟೊ, ಆಡಳಿತ ಮಂಡಳಿ ಸದಸ್ಯರಾದ ಚಾರ್ಲ್ಸ್ ಸಿಕ್ವೇರಾ, ಸಮಿತಿ ಗೌರವ ಸಲಹೆಗಾರರಾದ ಸುದರ್ಶನ್ ಪಡಿಯಾರ್, ಸ್ಕೌಟ್ ಮಾಸ್ಟರ್ ನಾರಾಯಣ, ವಿಶ್ವನಾಥ್ ಉಪಸ್ಥಿತರಿದ್ದರು.
ಗಿಡಕ್ಕೆ ನೀರೆರೆಯುವ ಮೂಲಕ ಕಾರ್‍ಯಕ್ರಮಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿ ವೃಂದವು ಗಿಡ ನೆಡುವ ಮೂಲಕ ಕಾರ್‍ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ವಿದ್ಯಾರ್ಥಿಗಳು ಸಾಮೂಹಿಕ ಯೋಗದಲ್ಲಿ ಭಾಗವಹಿಸಿದರು.
