ಬಂಟ್ವಾಳ : ಬಂಟ್ವಾಳ ತಾಲೂಕು ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ಬ್ರಹ್ಮಶ್ರೀ ನಡ್ವಂತಾಡಿ ಬಾಲಕೃಷ್ಣ ಪಾಂಗಣ್ಣಾಯ ಅವರ ನೇತೃತ್ವದಲ್ಲಿ, ಪ್ರ. ಅರ್ಚಕ ಡಿ.ರಾಮಚಂದ್ರ ಭಟ್, ಅರ್ಚಕ ಡಿ. ಹರೀಶ್ ಭಟ್ ಅವರ ಸಹಕಾರದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮಾ.19ರಂದು ಸಂಪನ್ನಗೊಂಡಿತು.
ಬೆಳಗ್ಗೆ ಪ್ರಾರ್ಥನೆ, ಕವಾಟ ಉದ್ಘಾಟನೆ, ತುಲಾಭಾರ ಸೇವೆಗಳು,ಮಹಾ ಚೂರ್ಣೋತ್ಸವ, ಪಲ್ಲ ಪೂಜೆ, ಮಧ್ಯಾಹ್ನ ಮಹಾಪೂಜೆ, ಸಂಜೆ ಹರಿ ಕಥಾ ಕಾಲಕ್ಷೇಪ, ಅವಭೃತ ಸ್ನಾನ, ರಾತ್ರಿ ದರ್ಶನ ಬಲಿ, ಬಟ್ಟಲು ಕಾಣಿಕೆ, ಧ್ವಜಾವರೋಹಣ, ದೈವಗಳಿಗೆ ನೇಮ, ಭಂಡಾರ ನಿರ್ಗಮನ ನಡೆಯಿತು.
ಭಜನ ಮಂಡಳಿ ಅಧ್ಯಕ್ಷ ದಿನೇಶ್ ಭಟ್, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ,ಉತ್ಸವ ಸಮಿತಿ ಅಧ್ಯಕ್ಷ ಸದಾನಂದ ಶೆಟ್ಟಿ ದರ್ಬೆ, ಆಡಳಿತ ಮಂಡಳಿ ಸದಸ್ಯರಾದ ಸೋಮಪ್ಪ ಮಡಿವಾಳ ಎಂ.ಕೆ., ವೆಂಕಪ್ಪ ಮಲೆತ್ತಾಯ ರಾಮೇರಿ, ರಾಮಸುಂದರ ಗೌಡ ಗೋಳಿತ್ತಬೆಟ್ಟು, ಪ್ರೇಮ ರವೀಂದ್ರ ಸಪಲ್ಯ ರಾಯಿ, ನಾರಾಯಣ ಗೌಡ ಮಿಯಾಲು,ಪ್ರೇಮಾ ರಮೇಶ ಪೂಜಾರಿ ಬಜಿಲೋಡಿ, ಸತೀಶ್ ಪೂಜಾರಿ ಕಾರಂಬಡೆ, ಮುಡ್ರಾಯಿ ಬೀಡು ಮತ್ತು ಪಡ್ರಾಯಿ ಗುತ್ತು ಮನೆಯವರು, ಮತ್ತಿತರರು ಭಾಗವಹಿಸಿದ್ದರು.
