ಮಂಗಳೂರು : ಕನ್ನಡ, ತುಳು ಬರಹಗಾರ್ತಿ, ಕವಿಯತ್ರಿ, ಲೇಖಕಿ, ನಿರೂಪಕಿ ರಶ್ಮಿ ಸನಿಲ್ ಅವರಿಗೆ ಕಥಾ ಬಿಂದು ಪ್ರಕಾಶನ ಮಂಗಳೂರು ಕೊಡಮಾಡುವ ಈ ವರುಷದ ಸೌರಭ ರತ್ನ ರಾಜ್ಯ ಪ್ರಶಸ್ತಿ ಲಭಿಸಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಕಥಾಬಿಂದು ಪ್ರಕಾಶನ ತುಳುಭವನದಲ್ಲಿ ಆಯೋಜಿಸಿದ್ದ ಕನ್ನಡ-ತುಳು ಸಾಹಿತ್ಯೋತ್ಸವದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಪ್ರಶಸ್ತಿ ಪ್ರದಾನ ಮಾಡಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ದಯನಂದ ಜಿ.ಕತ್ತಲ್‌ಸಾರ್, ಸದಸ್ಯರಾದ ನರೇಂದ್ರ ಕೆರೆಕಾಡು, ಖ್ಯಾತ ಸಿ.ಎ ಎಸ್.ಎಸ್ ನಾಯಕ್, ಡಾ.ಆಕಾಶ್‌ರಾಜ್ ಜೈನ್, ಕಥಾಬಿಂದು ಪ್ರಕಾಶನದ ಪಿ.ವಿ ಪ್ರದೀಪ್ ಕುಮಾರ್, ಡಾ.ಸುರೇಶ್ ನೆಗಳಗುಳಿ, ಡಾ. ರಜನಿ ವಿ ಪೈ, ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಇನ್‌ಫೋಸಿಸ್ ಸಂಸ್ಥೆಯಲ್ಲಿ ಲೆಕ್ಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ರಶ್ಮಿ ಸನಿಲ್ ಅವರು, ಕನ್ನಡ ತುಳು ಭಾಷೆಯಲ್ಲಿ ಹಿಡಿತವನ್ನು ಹೊಂದಿದ್ದು ನೂರಾರು ಕವನ ರಚಿಸಿ ಮನೆಮಾತಾದವರು, ಕವಿಗೋಷ್ಠಿಗಳಲ್ಲಿ ಪ್ರೌಢಿಮೆ ತೋರಿರುವ ಇವರು ತನ್ನ ಕವನಗಳಿಗಾಗಿ ಐವತ್ತಕ್ಕೂ ಅಧಿಕ ಬಹುಮಾನ ಪಡೆದುಕೊಂಡವರು,ಲೇಖಕಿಯಾಗಿ, ಬರಹಗಾರ್ತಿಯಾಗಿ, ನೃತ್ಯಪಟುವಾಗಿ, ನಿರೂಪಕಿಯಾಗಿಯೂ ಮಿಂಚಿದವರು.


