Friday, June 27, 2025

ಬಂಟ್ವಾಳ: ಅಪ್ರಾಪ್ತ ಬಾಲಕಿ ಮೇಲೆ ಗ್ಯಾಂಗ್ ರೇಪ್: ಕ್ಷಿಪ್ರ ಕಾರ್ಯಾಚರಣೆ ಮೂಲಕ ಮೂವರು ಕಾಮುಕರನ್ನು ಬಂಧಿಸಿದ ಪೊಲೀಸರು

ಬಂಟ್ವಾಳ: ಅಪ್ರಾಪ್ತ ಬಾಲಕಿ ಮೇಲೆ ವ್ಯಕ್ತಿಯೊಬ್ಬ ಲೈಂಗಿನ ದೌರ್ಜನ್ಯ ಎಸಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಒಬ್ಬ ಆರೋಪಿಯನ್ನು ಬಂಧಿಸಲಾಗಿದ್ದು, ಮತ್ತು ಇಬ್ಬರು ಯುವಕರು ಸೇರಿ ಅದೇ ಬಾಲಕಿ ಮೇಲೆ ಗ್ಯಾಂಗ್ ರೇಪ್ ನಡೆಸಿರುವ ಬಗ್ಗೆ ಬೆಳಕಿಗೆ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಆಟೋ ಚಾಲಕ ರಿಜ್ವಾನ್, ಅರ್ಕುಳದ ಮಹಮ್ಮದ್‌ ಖಾಸೀಂ, ಮತ್ತು ಅಜ್ಮಲ್‌ ಹುಸೈನ್‌ ಅವರನ್ನು ಬಂಧಿಸಲಾಗಿದೆ.

ನವೆಂಬರ್ 4 ರಂದು ಬಂಟ್ವಾಳ ತಾಲೂಕಿನ ಮಹಿಳೆಯೋರ್ವರು ಬಂಟ್ವಾಳ ಗ್ರಾಮಾಂತರ ಠಾಣೆಗೆ ಬಂದು ಅಪ್ರಾಪ್ತ ಬಾಲಕಿಯಾದ ತನ್ನ ಮಗಳಿಗೆ ಫರಂಗಿಪೇಟೆ ರಿಕ್ಷಾ ಚಾಲಕನು ಮೈ ಕೈ ಮುಟ್ಟಿ ಲೈಂಗಿಕ ಶೋಷಣೆ ಮಾಡಿದ್ದಾನೆ ಎಂದು ದೂರು ನೀಡಿದ್ದರು. ಅದರಂತೆ ಪೋಕ್ಸೋ ಆಕ್ಟ್‌ ರಂತೆ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ರಿಕ್ಷಾ ಚಾಲಕ ರಿಜ್ವಾನ್‌ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ನವೆಂಬರ್ 5 ರಂದು ಅದೇ ಅಪ್ರಾಪ್ತ ಬಾಲಕಿಯು ತನ್ನ ತಾಯಿಯೊಂದಿಗೆ ಠಾಣೆಗೆ ಹಾಜರಾಗಿ ಸುಮಾರು 5 ತಿಂಗಳ ಹಿಂದೆ ಇಬ್ಬರು ಯುವಕರು ಪರಿಚಿತರಾಗಿ ತನ್ನನ್ನು ತಾವಿದ್ದಲ್ಲಿಗೆ ಕರೆಸಿಕೊಂಡು ತನ್ನ ಮೇಲೆ ಒಬ್ಬರಾದ ಮೇಲೇ ಇನ್ನೊಬ್ಬರು ಜೊತೆಯಲ್ಲಿ ಲೈಂಗಿಕ ಅತ್ಯಾಚಾರ ನಡೆಸಿ ಜೀವ ಬೆದರಿಕೆ ಒಡ್ಡಿರುವುದಾಗಿ ದೂರು ನೀಡಿದ್ದರು.

ಅದರಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ 6 ಪೋಕ್ಸೋ ಆಕ್ಟ್‌ ರಂತೆ ಪ್ರಕರಣ ದಾಖಲಾಗಿತ್ತು.

ಪ್ರಕರಣ ದಾಖಲಾದ ಕೂಡಲೇ ಚುರುಕಾಗಿ ತನಿಖೆ ನಡೆಸಿದ ಪೊಲೀಸರು ಪೊಲೀಸ್‌ ಅಧೀಕ್ಷಕ ಋಷಿಕೇಶ್‌ ಸೋನವಾನೆ ಭಗವಾನ್‌ , ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಡಾ. ಶಿವಕುಮಾರ್‌ ಗುಣಾರೆ ರವರ ನಿರ್ಧೇಶನದಂತೆ ಬಂಟ್ವಾಳ ಉಪವಿಭಾಗಾಧಿಕಾರಿ ಶಿವಾಂಶು ರಜಪೂತ್‌ ಐ.ಪಿ.ಎಸ್‌ ರವರ ಸೂಚನೆಯಂತೆ ಬಂಟ್ವಾಳ ಗ್ರಾಮಾಂತರ ಠಾಣಾಧಿಕಾರಿ ಟಿ.ಡಿ ನಾಗರಾಜ್‌,.ಪಿ.ಎಸ್‌.ಐ ಭಾರತಿ, ತರಭೇತಿ ಪಿ.ಎಸ್.ಐ ರಾಮಕೃಷ್ಣ, ವೀಣಾ ರಾಮಚಂದ್ರ, ಎ.ಎಸ್.ಐ ಬಾಲಕೃಷ್ಣ, ಸಿಬ್ಬಂದಿಯವರಾದ ಜನಾರ್ಧನ, ಸುರೇಶ್‌, ಪುನೀತ್‌, ಮನೋಜ್ ಕುಮಾರ್ ,ಲೋಲಾಕ್ಷಿ, ವಿಶಾಲಾಕ್ಷಿ ರವರುಗಳನ್ನೊಳಗೊಂಡ ತನಿಖಾ ತಂಡವು ಆರೋಪಿಗಳಾದ ಅರ್ಕುಳದ ಮಹಮ್ಮದ್‌ ಖಾಸೀಂ, ಮತ್ತು ಅಜ್ಮಲ್‌ ಹುಸೈನ್‌ ಎಂಬವರನ್ನು ಬಂಧಿಸಿದ್ದಾರೆ.

More from the blog

5 ವರ್ಷದ ಮಗುವಿನ ಚಿಕಿತ್ಸೆಗೆ ಸಂಗಬೆಟ್ಟು ಗ್ರಾ. ಪಂ ವತಿಯಿಂದ ಸಹಾಯಧನದ ಚೆಕ್ ಹಸ್ತಾಂತರ.. 

ಬಂಟ್ವಾಳ : ತಾಲೂಕಿನ ಕರ್ಪೆ ಗ್ರಾಮದ ಕುಟ್ಟಿಕಳ ನಿವಾಸಿ ಹಿರಣ್ಯಾಕ್ಷ ಶಾಂತಿ ಹಾಗೂ ಸೌಮ್ಯ ದಂಪತಿಗಳ 5 ವರ್ಷದ ಪುಟ್ಟ ಹೆಣ್ಣು ಮಗು ಮನಸ್ವಿಳಿಗೆ ಅರೋಗ್ಯದಲ್ಲಿ ರಕ್ತದ ಕ್ಯಾನ್ಸರ್ ಇರುವುದರಿಂದ ಅರೋಗ್ಯದ ವೆಚ್ಚಕ್ಕಾಗಿ...

Old Bridge : ಮಂಗಳೂರು ಎನ್.ಐ.ಟಿ.ಕೆ ಸಂಸ್ಥೆ ಅಧಿಕಾರಿಗಳಿಂದ ಪಾಣೆಮಂಗಳೂರು ಹಳೆ ಸೇತುವೆಯ ಸಾಮರ್ಥ್ಯ ಪರೀಕ್ಷೆ

ಬಂಟ್ವಾಳ: ಬ್ರಿಟಿಷ್ ಕಾಲದ ಪಾಣೆಮಂಗಳೂರು ಸೇತುವೆಯ ಸಾಮರ್ಥ್ಯ ಪರೀಕ್ಷೆ ನಡೆಸುವ ಉದ್ದೇಶದಿಂದ ಮಂಗಳೂರು ಎನ್.ಐ.ಟಿ.ಕೆ ಸಂಸ್ಥೆಯಿಂದ ಇಬ್ಬರು ಅಧಿಕಾರಿಗಳು ಆಗಮಿಸಿ, ಜಿಲ್ಲಾಧಿಕಾರಿ ಅವರಿಗೆ ವರದಿ ನೀಡಿದ್ದಾರೆ. ಹಳೆ ಸೇತುವೆ ಬಗ್ಗೆ ಸ್ಥಳ ವೀಕ್ಷಣೆಗೆ ಏನ್...

ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ..

ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ, ಮಹಾರುದ್ರಾಭಿಷೇಕ ಮತ್ತು ವಿಶೇಷ...

Bantwal : ಮಾದಕ ದ್ರವ್ಯ ಮುಕ್ತ ಸಮಾಜಕ್ಕಾಗಿ” ಅಭಿಯಾನ – 2025 ಕಾರ್ಯಕ್ರಮ..

ಬಂಟ್ವಾಳ: ದ.ಕ.ಜಿಲ್ಲಾ ಪೋಲೀಸ್ ಇಲಾಖೆ, ಬಂಟ್ವಾಳ ವೃತ್ತದ ಪೋಲೀಸ್ ಠಾಣೆಯ ಹಾಗೂ ಶಿಕ್ಷಣ ಇಲಾಖೆ, ರೋಟರಿ ಕ್ಲಬ್ ಬಂಟ್ವಾಳ ಲೊರೆಟ್ಟೊ ಹಿಲ್ಸ್, ಬಂಟ್ವಾಳ ಟೌನ್ ಮೊಡಂಕಾಪು ಇವರ ಸಂಯುಕ್ತ ಆಶ್ರಯದಲ್ಲಿ " ಮಾದಕ...