ಬಂಟ್ವಾಳ, ಮೇ ೯: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ರಮಝಾನ್ ಕಿಟ್ ವಿತರಣಾ ಕಾರ್ಯಕ್ರಮ ಅಕ್ಕರಂಗಡಿ ತಾಲೂಕು ಕಚೇರಿಯಲ್ಲಿ ಗುರುವಾರ ಜರಗಿತು.
ಕಾರ್ಯಕ್ರಮದಲ್ಲಿ ೧,೨೮,೩೦೦ ರೂ. ವೆಚ್ಚದಲ್ಲಿ ೬೪ ಕಿಟ್‌ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪಿಎಫ್‌ಐ ತಾಲೂಕು ಸಮಿತಿ ಅಧ್ಯಕ್ಷ ಇಜಾಝ್ ಅಹ್ಮದ್, ತಾಲೂಕು ಪ್ರಧಾನ ಕಾರ್ಯದರ್ಶಿ ಸಲೀಮ್ ಪರಂಗಿಫೇಟೆ, ಸಮಿತಿ ಸದಸ್ಯರಾದ ಇಸ್ಮಾಯಿಲ್ ಬಂಟ್ವಾಳ, ಶಬೀರ್ ರಹಿಮಾನ್ ಹಾಜರಿದ್ದರು.