ಕಲ್ಲಡ್ಕ: ಭಾರತ ಸಂಸ್ಕೃತಿ ಪ್ರತಿಷ್ಠಾನ(ರಿ) ಇದರ ಆಶ್ರಯದಲ್ಲಿ ನಡೆದ 2018-19 ಸಾಲಿನ ರಾಜ್ಯಮಟ್ಟದ ರಾಮಾಯಣ ಪರೀಕ್ಷೆಯಲ್ಲಿ ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ ಇಲ್ಲಿನ 8ನೇ ತರಗತಿಯ ನಿಶಾಂತ್ ಕೃಷ್ಣ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗಳಿಸಿದ್ದು ಹಾಗೂ ಮಹಾಭಾರತ ಪರೀಕ್ಷೆಯಲ್ಲಿ 9ನೇ ತರಗತಿಯ ಅಮೃತಾ ದ್ವಿತೀಯ ಸ್ಥಾನ ಪಡೆದು ಬೆಳ್ಳಿಯ ಪದಕ ಪಡೆದಿರುತ್ತಾರೆ. ಇವರಿಗೆ ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದ ಇದರ ಆಡಳಿತ ಮಂಡಳಿ, ಪ್ರೌಢಶಾಲಾಭಿವೃದ್ಧಿ ಸಮಿತಿ, ಅಧ್ಯಾಪಕರು ಅಭಿನಂದನೆ ಸಲ್ಲಿಸಿರುತ್ತಾರೆ.

