ಬಂಟ್ವಾಳ: ಬಂಟ್ವಾಳ ತಾಲೂಕು ನಯನಾಡು ಶಶಾಂಕ್ ಕ್ಯಾಶ್ಯೂ ಇಂಡಸ್ಟ್ರೀಸ್, ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ, ಶ್ರೀ ಶಾರದೋತ್ಸವ ಸಮಿತಿ ಇರ್ವತ್ತೂರು, ಪಿಲಾತಬೆಟ್ಟು ವ್ಯ.ಸೇ.ಸ. ಬ್ಯಾಂಕ್ ಪುಂಜಾಲಕಟ್ಟೆ, ಶ್ರೀ ರಾಮ ಯುವಕ ಸಂಘ ನಯನಾಡು, ರೋಟರಿ ಕ್ಲಬ್ ಮಡಂತ್ಯಾರ್, ಶಿವಾಜಿ ಫ್ರೆಂಡ್ಸ್ ಎಡ್ತೂರುಪದವು ಇವರ ವತಿಯಿಂದ ಮಂಗಳೂರು ಕೆ.ಎಂ.ಸಿ. ಆಸ್ಪತ್ರೆ ಸಹಕಾರದಲ್ಲಿ ಬೃಹತ್ ರಕ್ತದಾನ ಶಿಬಿರ ನಯನಾಡು ಶಶಾಂಕ್ ಕ್ಯಾಶ್ಯೂ ಇಂಡಸ್ಟ್ರೀಸ್ ವಠಾರದಲ್ಲಿ ರವಿವಾರ ಜರಗಿತು.
ಬಂಟ್ವಾಳ ಜನ ಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷ ಪ್ರಕಾಶ್ ಕಾರಂತ್ ಅವರು ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ರಕ್ತದಾನದ ಮಹತ್ವವನ್ನರಿತು, ರಕ್ತದಾನ ಮಾಡುವ ಮೂಲಕ ಜೀವ ರಕ್ಷಣೆಯ ಮಹಾತ್ಕಾರ್ಯಕ್ಕೆ ಮುಂದಾಗಬೇಕು ಎಂದು ಶುಭ ಹಾರೈಸಿದರು. ಅಮೃತ ಸಂಜೀವಿನಿ ಮಂಗಳೂರು ಸಂಚಾಲಕ ಕೆ.ಆರ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಪಿಲಾತಬೆಟ್ಟು ವ್ಯ. ಸೇ.ಸ. ಸಂಘದ ಅಧ್ಯಕ್ಷ ಲಕ್ಷ್ಮಿ ನಾರಾಯಣ ಉಡುಪ, ಶಶಾಂಕ್ ಕ್ಯಾಶ್ಯೂ ಇಂಡಸ್ಟ್ರೀಸ್ ಮಾಲಕ ಹರೀಂದ್ರ ಪೈ, ಶ್ರೀ ರಾಮ ಯುವಕ ಸಂಘದ ಅಧ್ಯಕ್ಷ ದಯಾನಂದ ನಿನ್ನಿಕಲ್ಲು, ಮಡಂತ್ಯಾರು ರೋಟರಿ ಕ್ಲಬ್ ಅಧ್ಯಕ್ಷ ಮೋನಪ್ಪ ಪೂಜಾರಿ ಕಂಡೆತ್ಯಾರ್, ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ ದ ಸಂಚಾಲಕ ಕೃಷ್ಣ ಕುಮಾರ್ ಪೂಂಜ, ನಯನಾಡು ಎನ್.ಜಿ.ಚಾರಿಟೇಬಲ್ ಟ್ರಸ್ಟ್ ಸ್ಥಾಪಕ ಸಿಲ್ವೆಸ್ಟರ್ ಪಿಂಟೊ, ಕಂಬಳ ಪ್ರಧಾನ ತೀರ್ಪುಗಾರ, ಶ್ರೀ ಶಾರದೋತ್ಸವ ಸಮಿತಿ ಇರ್ವತ್ತೂರು ಗೌರವಾಧ್ಯಕ್ಷ ರಾಜೀವ ಶೆಟ್ಟಿ ಎಡ್ತೂರು, ಶ್ರೀ ಕ್ಷೇತ್ರ ಕಾರಿಂಜದ ವ್ಯವಸ್ಥಾಪನ ಸಮಿತಿ ಸದಸ್ಯ ಸದಾಶಿವ ಪ್ರಭು, ಉದ್ಯಮಿ ಜಗನ್ನಾಥ ಶೆಟ್ಟಿ ಕೆದ್ದಳಿಕೆ,ಗುತ್ತಿಗೆದಾರ ಲೋಕೇಶ ಪೂಜಾರಿ, ಇರ್ವತ್ತೂರು, ಕಲ್ಲಡ್ಕ ಶ್ರೀ ದುರ್ಗಾ ಫ್ರೆಂಡ್ಸ್ ಅಧ್ಯಕ್ಷ ರಮೇಶ್ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
ಡಾ. ರಾಮಕೃಷ್ಣ ಎಸ್. ಸ್ವಾಗತಿಸಿದರು. ಹರೀಶ್ ಕುಮೇರು ವಂದಿಸಿದರು. ಬೂಬ ಪೂಜಾರಿ ಕುದ್ಕಂದೋಡಿ ಕಾರ್ಯಕ್ರಮ ನಿರೂಪಿಸಿದರು.
