ವಿಟ್ಲ: ವಿಟ್ಲದ ಬಸವನಗುಡಿ ವಿಠಲ್ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ರಕ್ತದಾನ ದಿನವನ್ನು ಆಚರಿಸಲಾಯಿತು. ಈ ಕಾರ್‍ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಲಯನ್ ಜಿಲ್ಲಾ ವೈಸ್‌ಪ್ರಿನ್ಸಿಪಾಲ್ ಡಾ. ಗೀತಪ್ರಕಾಶ್ ಮಾತನಾಡಿ ರಕ್ತದಾನವೂ ಕೂಡಾ ಎಲ್ಲಾ ದಾನಗಳಂತೆ ಶ್ರೇಷ್ಠವಾಗಿದೆ. ರಕ್ತದಾನ ನಮ್ಮೆಲ್ಲರ ಕರ್ತವ್ಯವೂ ಆಗಿದೆ ಎಂದ ಅವರು ರಕ್ತದಾನದ ಮಹತ್ವ ಹಾಗೂ ಅಗತ್ಯವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.
ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಎಲ್.ಎನ್ ಕೂಡೂರು, ನಿರ್ದೇಶಕ ಮೋನಪ್ಪ ಶೆಟ್ಟಿ ದೇವಸ್ಯ, ಪ್ರನ್ಸಿಪಾಲ್ ಜಯರಾಮ ರೈ, ವೈಸ್‌ಪ್ರಿನ್ಸಿಪಾಲ್ ಶಾಲಿನಿ ನೋಂಡ, ಆಡಳಿತಾಧಿಕಾರಿ ರಾಧಾಕೃಷ್ಣ ಉಪಸ್ಥಿತರಿದ್ದರು. ಅನನ್ಯಲಕ್ಷ್ಮೀ ಸ್ವಾಗತಿಸಿದರು. ಗಾಯತ್ರಿ ವಂದಿಸಿದರು. ಭಾರ್ಗವಿ ಎಸ್. ಕಾರ್‍ಯಕ್ರಮ ನಿರೂಪಿಸಿದರು.
