ಉಜಿರೆ: ಧರ್ಮಸ್ಥಳದಲ್ಲಿರುವ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಯಿಂದ ಎಸ್.ಎಸ್.ಎಲ್.ಸಿ.ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿನಿ ರಕ್ಷಿತಾ ಬೇಕಲ್ ಮೊದಲ ಮೌಲ್ಯಮಾಪನದಲ್ಲಿ ಶೇ. ೮೪.೩೨ ಅಂಕ ಗಳಿಸಿದ್ದು ಮರು ಮೌಲ್ಯ ಮಾಪನದಲ್ಲಿ ಸಮಾಜ ವಿಜ್ಞಾನದಲ್ಲಿ ಏಳು ಅಂಕಗಳನ್ನು ಹೆಚ್ಚು ಪಡೆದು ಶೇ. ೮೫.೪೪ ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿಉತ್ತೀರ್ಣರಾಗಿದ್ದಾರೆಎಂದು ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳಾ, ಎಂ.ವಿ. ತಿಳಿಸಿದ್ದಾರೆ.
ಇದೇ ಶಾಲೆಯ ವಿದ್ಯಾರ್ಥಿನಿ ಅನನ್ಯ ಮರುಮೌಲ್ಯಪನದಲ್ಲಿಗಣಿತದಲ್ಲಿಒಂದು ಅಂಕ ಹೆಚ್ಚು ಪಡೆದರೆ, ಹಾಗೂ ಸಂಜನಾ, ವಿಜ್ಞಾನದಲ್ಲಿಐದು ಅಂಕಗಳನ್ನು ಹೆಚ್ಚುವರಿಯಾಗಿ ಪಡೆದಿರುತ್ತಾರೆಎಂದು ಮುಖ್ಯೋಪಾಧ್ಯಾಯಿನಿ ತಿಳಿಸಿದ್ದಾರೆ.
