Thursday, February 5, 2026

ಶಾಸಕ ರಾಜೇಶ್ ನಾಯ್ಕ್ ಅವರಿಂದ ಪೆರಾಜೆ ಗ್ರಾಮದ ಮಡಲ ಹಿಂದೂ ರುದ್ರ ಭೂಮಿ – ಮೋಕ್ಷಧಾಮ ಲೋಕಾರ್ಪಣೆ

ಬಂಟ್ವಾಳ: ಪೆರಾಜೆ ಗ್ರಾಮದ ಮಡಲ ಎಂಬಲ್ಲಿ ನೂತನವಾಗಿ ನಿರ್ಮಾಣವಾದ ಹಿಂದೂ ರುದ್ರ ಭೂಮಿ – ಮೋಕ್ಷಧಾಮ ಲೋಕಾರ್ಪಣೆಯನ್ನು ಸೋಮವಾರ ಫೆ.5 ರಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಇವರು ದೀಪ ಪ್ರಜ್ವಲನೆಯ ಮೂಲಕ ಲೋಕರ್ಪಣೆಗೈದರು.

ಬಳಿಕ ಮಾತನಾಡಿದ ಅವರು ಮೂಲಭೂತ ಸೌಕರ್ಯಗಳಲ್ಲಿ ಒಂದಾದ ರುಧ್ರಭೂಮಿಯ ನಿರ್ಮಾಣ ಅಗತ್ಯವಾಗಿದೆ. ಗ್ರಾಮಕ್ಕೊಂದು ಮೋಕ್ಷಧಾಮ ಅನಿವಾರ್ಯವಾಗಿದ್ದು, ಈ ಮೋಕ್ಷಧಾಮದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಗ್ರಾಮದ ಅಭಿವೃದ್ಧಿಯ ದೃಷ್ಟಿಯಿಂದ ಜನರು ಉತ್ತಮ ಕಾರ್ಯಗಳಿಗೆ ವಿರೋಧ ವ್ಯಕ್ತಪಡಿಸದೆ ಸಹಕಾರ ನೀಡುವಂತೆ ಮನವಿ ಮಾಡಿದರು.

ಪೆರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಕುಶಾಲ ಎಂ ಪೆರಾಜೆ ಹಿಂದೂ ರುದ್ರ ಭೂಮಿ ಸಮಿತಿ ಅಧ್ಯಕ್ಷ ಮಾಧವ ಕುಲಾಲ್ , ಪೆರಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶಶಿ ಕುಮಾರಿ ಸದಸ್ಯರಾದ ಸುನಿತಾ , ಹರೀಶ್ಚಂದ್ರ ರೈ , ರೋಹಿಣಿ , ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಶಾರಾದ , ಪೆರಾಜೆ ಗ್ರಾಮದ ಹಿರಿಯರಾದ ಬಿ ಟಿ ನಾರಾಯಣ ಭಟ್ , ಜಯರಾಮ ರೈ, ಶ್ರೀ ಕಾಂತ ಆಳ್ವ ಪೆರಾಜೆ ಗುತ್ತು, ಚಂದ್ರಹಾಸ ಶೆಟ್ಟಿ ಬುಡೋಳಿಗುತ್ತು, ಶ್ರೀನಿವಾಸ ಪೂಜಾರಿ ಪೆರಾಜೆ , ರಾಘವ ಗೌಡ ಏನಾಜೆ, ದೇಜಪ್ಪ ಪೂಜಾರಿ ಬಡೆಕೋಡಿ, ನಾರಾಯಣ ನಾಯ್ಕ ಪಾಲ್ಯ ಪೆರಾಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಂಭು ಕುಮಾರ ಶರ್ಮಾ , ಕಾರ್ಯದರ್ಶಿ ನಾರಾಯಣ ನಾಯ್ಕ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

1952 ರಲ್ಲಿ ಶ್ರೀನಿವಾಸ ರಾವ್ ಅವರ ಕಾಲದಲ್ಲಿ ಮಂಜೂರುಗೊಂಡಿದ್ದರು, ಅನೇಕ ಕಾರಣಗಳಿಂದ ಬಾಕಿಯಾಗಿದ್ದ ರುಧ್ರಭೂಮಿಯ ಕನಸು ಕೊನೆಗೂ ಇಂದು ಕೈಗೂಡಿದೆ.

More from the blog

ಬಿ.ಸಿ.ರೋಡ್ – ಅಡ್ಡಹೊಳೆ ಚತುಷ್ಪಥ ಹೆದ್ದಾರಿಯಲ್ಲಿ ದಾರಿ ಸೂಚನಾ ಫಲಕ ಅಳವಡಿಕೆ..

ಬಂಟ್ವಾಳ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬಿ.ಸಿರೋಡ್ - ಅಡ್ಡಹೊಳೆ ಚತುಷ್ಪಥ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಇದೀಗ ಕಮಾನು ಮಾದರಿಯಲ್ಲಿ ದಾರಿ ಸೂಚಕ ಫಲಕ ಅಳವಡಿಕೆಯ ಕಾರ್ಯ ಆರಂಭಗೊಂಡಿದೆ. ರಸ್ತೆ ನಿರ್ಮಾಣದ ಕಾಂಕ್ರೀಟ್ ಕಾಮಗಾರಿ...

ಬಂಟ್ವಾಳ : ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಜಗದೀಶ್ ರೈ ತುಂಬೆ ಆಯ್ಕೆ

ಬಂಟ್ವಾಳ : ಬಿ.ಸಿ.ರೋಡಿನ  ಸರಕಾರಿ ನೌಕರರ ಭವನದಲ್ಲಿ ಫೆ. 09ರಂದು ನಡೆದ ದೈಹಿಕ ಶಿಕ್ಷಣ ಶಿಕ್ಷಕರ ಕಾರ್ಯಾಗಾರದಲ್ಲಿ ಜಗದೀಶ್ ರೈ ತುಂಬೆ ಅವರು ಎರಡು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದರು. ಸಂಘದ ಪ್ರಧಾನ...

ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ದೇವಸ್ಥಾನ : ವಾರ್ಷಿಕ ಜಾತ್ರಾ ಮಹೋತ್ಸವ

ಬಂಟ್ವಾಳ: ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ನಿಮಿತ್ತ ಮಹಾರಥೋತ್ಸವ ಬುಧವಾರ (ಫೆ.4)ರಂದು ನಡೆಯಿತು. ಫೆ.6ರವರೆಗೆ ಜಾತ್ರಾ ಮಹೋತ್ಸವಾದಿಗಳು ನಡೆಯಲಿವೆ. ಬುಧವಾರ ಬೆಳಗ್ಗೆ ನವಗ್ರಹ ಸಹಿತ ಶಿವಸಹಸ್ರನಾಮ ಹೋಮ,...

ರಾಜೀವ್ ಗಾಂಧಿ ಜ್ಯೋತಿ ಯಾತ್ರಾ ಸಮಿತಿಗೆ ಹನೀಫ್ ಬಗ್ಗುಮೂಲೆ ಹಾಗೂ ಸಿದ್ದೀಕ್ ಸೂರ್ಯ ನೇಮಕ

ಬಂಟ್ವಾಳ : ರಾಜೀವ್ ಗಾಂಧಿ ಜ್ಯೋತಿ ಯಾತ್ರಾ ಸಮಿತಿಯ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಅಳಕೆಮಜಲು ಸಮೀಪದ ಬಗ್ಗುಮೂಲೆ ನಿವಾಸಿ ಹನೀಫ್ ಬಗ್ಗುಮೂಲೆ ಹಾಗೂ ರಾಜ್ಯ ಉಪಾಧ್ಯಕ್ಷರಾಗಿ ಯುವ ಸಂಘಟಕ, ಯುವ ಉದ್ಯಮಿ,...