ಬಂಟ್ವಾಳ: ಜುಲೈ 3 ರಂದು ರಾತ್ರಿ ಸುರಿದ ಮಳೆಗೆ ತಾಲೂಕಿನ ಅನೇಕ ಕಡೆಗಳಲ್ಲಿ ಹಾನಿ ಸಂಭವಿಸಿದ್ದು, ಲಕ್ಷಾಂತರ ರೂ ನಷ್ಟ ಸಂಭವಿಸಿದೆ. ನೆಟ್ಲ ಮುನ್ನೂರು ಗ್ರಾ.ಪಂ.ವ್ಯಾಪ್ತಿಯ ಏಮಾಜೆ ಭಜನಾ ಮಂದಿರ ಬಳಿಯ ದೇವಪ್ಪ ಯುವರ ಮನೆಯ ಬದಿಗೆ ತೆಂಗಿನ ಬಿದ್ದಿರುತ್ತದೆ.
ಅಳಿಕೆ ಸರೋಜಿನಿ ಬೆಲ್ಚಾಡ ವಾಸ್ತ್ಯವ್ಯದ ಮನೆಗೆ ಹಾನಿಯಾಗಿದ್ದು ಯಾವುದೇ ಪ್ರಾಣಹಾನಿಯಾಗಿಲ್ಲ,
ಇಡ್ಕಿದು ಗ್ರಾಮದ ವಡ್ಯರ್ಪೆ ಎಂಬಲ್ಲಿ ನೆಬಿಸ ಎಂಬುವವರ ವಾಸ್ತವ್ಯದ ಮನೆಗೆ ಹಾನಿ,
ತೆಂಕ ಬೆಳ್ಳೂರು ಗ್ರಾಮದ ಕುಸುಮರವರ ವಾಸ್ತವ್ಯದ ಮನೆ ಗೋಡೆ ಅಲ್ಲಲ್ಲಿ ಬಿರುಕು ಬಿದ್ದಿರುತ್ತದೆ.
ವಿಟ್ಲ ಕಸಬಾ ಗ್ರಾಮದ ಕೊಳಂಬೆ ಎಂಬಲ್ಲಿ, ಬೀಪಾತಿಮ ಎಂಬವರ ಮನೆಯ ಹಂಚು ಛಾವಣಿಗೆ ಹಾನಿ,
ವಿಟ್ಲ ಕಸಬಾ ಗ್ರಾಮದ ಚಂದಳಿಕೆ ಜನತಾ ಕಾಲೊನಿ ಎಂಬಲ್ಲಿ, ಗೀತ ಎಂಬವರ ಮನೆಯ ಹಿಂಬದಿ ತಡೆಗೋಡೆ ಕುಸಿದು ಬಿದ್ದು, ಕೆಳಭಾಗದಲ್ಲಿರುವ ಸೀತ ಎಂಬವರ ಮನೆಯ ಸಿಮೆಂಟ್ ಶೀಟುಗಳು ಹಾನಿಯಾಗಿರುತ್ತದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಕಂದಾಯ ಇಲಾಖೆ ತಿಳಿಸಿದೆ.


