ಬಂಟ್ವಾಳ; ವಿಟ್ಲ ಸಹಿತ ಬಂಟ್ವಾಳ ತಾಲೂಕಿನ ಕೆಲ ಭಾಗಗಳಲ್ಲಿ ಶನಿವಾರ ರಾತ್ರಿ ತುಂತು ತುರು ಮಳೆ ಸುರಿದಿದೆ.
ತಾಲೂಕಿನ ಹೆಚ್ಚಿನ ಭಾಗಗಳಲ್ಲಿ ಗುಡುಗು, ಮಿಂಚಿನ ಪ್ರದರ್ಶನವಷ್ಟೇ ಆಗಿದ್ದು, ಸೆಖೆ ಮತ್ತಷ್ಟು ಹೆಚ್ಚಾಗಿದೆ.
ಬಿ.ಸಿ.ರೋಡ್ ಸುತ್ತಮುತ್ತ ಕೆಲ ಹನಿ ಮಳೆ ಸುರಿದಿದ್ದು, ಗುಡುಗಿನ ಅಬ್ಬರ ಜೋರಾಗಿತ್ತು. ಮಾಣಿ, ಸರಪಾಡಿ ಮತ್ತಿತರ ಕಡೆಗಳಲ್ಲಿ ಮಳೆಯಾಗಿದ್ದರೆ, ಹಲವೆಡೆ ಹನಿ ಮಳೆಯಷ್ಟೇ ಸುರಿಯಿತು. ಸಿಡಿಲಿಗೆ ಮುಂಜಾಗ್ರತವಾಗಿ ಕೆಲವೆಡೆ ವಿದ್ಯುತ್ ವ್ಯತ್ಯಯಗೊಂಡಿದೆ.

