ಬಂಟ್ವಾಳ: ಫರಂಗಿಪೇಟೆ ಕುಂಪಣಮಜಲು ನಿಂದ ಮೇರೆಮಜಲು ಬಜಪೆ ಸಂಪರ್ಕದ ರೈಲ್ವೆ ಕ್ರಾಸ್ ನ್ನು ರೈಲ್ವೆ ಇಲಾಖೆ ಯವರು ಯಾವುದೇ ಪೂರ್ವ ಮಾಹಿತಿ ನೀಡದೆ ಸಂಚಾರಕ್ಕೆ ಬದಲಿ ಸೂಕ್ತ ವ್ಯವಸ್ಥೆ ಮಾಡದೆ ಬಂದ್ ಮಾಡಿದ್ದಾರೆ ಎಂದು ಆರೋಪಿಸಿ ಬೆಳಿಗ್ಗೆ ಫರಂಗಿಪೇಟೆ ರೈಲ್ವೆ ಲೆವೆಲ್ ಕ್ರಾಸ್ ನ ಬಳಿಯಲ್ಲಿ ಪ್ರತಿಭಟನೆ ನಡೆಸಿ ನ್ಯಾಯಬೇಕು ಎಂದು ಕೇಳಿದರು.
ಕಳೆದ ವಾರ ಈ ಬಗ್ಗೆ ಇಲ್ಲಿನ ನಿವಾಸಿಗಳಿಗೆ ಮಾಹಿತಿ ದೊರಕಿದ್ದು ಈ ನಿರ್ಧಾರ ವನ್ನು ಕೈಬಿಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು.
ಆದರೆ ಕಾಮಗಾರಿಯ ಹಿನ್ನೆಲೆಯಲ್ಲಿ ಬಂದ್ ಮಾಡಲಾಗಿದೆ ಮೂರು ದಿನಗಳಲ್ಲಿ ಕೆಲಸ ಮುಗಿಸಿ ರೈಲ್ವೆ ಲೆವಕ್ ಕ್ರಾಸ್ ನ್ನು ಸಂಚಾರಕ್ಕೆ ಮುಕ್ತ ಮಾಡಿ ಕೊಡುತ್ತೇವೆ ಎಂದು ರೈಲ್ವೆ ಇಲಾಖೆ ಯ ಅಧಿಕಾರಿಗಳು ಪೋನ್ ಮೂಲಕ ತಿಳಿಸಿ ಪ್ರತಿಭಟನೆಯನ್ನು ಕೈ ಬಿಡಿಸಿದ್ದರು.
ಆದರೆ ಕಾಮಗಾರು ಮುಗಿದ ಬಳಿಕ ಬುಧವಾರ ಶಾಸ್ವತವಾಗಿ ಲೆವೆಲ್ ಕ್ರಾಸ್ ನ್ನು ಸಂಚಾರ ಮಾಡದಂತೆ ಬಂದ್ ಮಾಡಿದ್ದರಿಂದ ಆಕ್ರೋಶಿತರಾದ ಸ್ಥಳೀಯರು ನಮಗೆ ಸಂಚಾರಕ್ಕೆ ತೀವ್ರ ತೊಂದರೆ ಅಗುವುದರಿಂದ ರೈಲ್ವೆ ಲೆವಲ್ ಕ್ರಾಸ್ ನ್ನು ಸಂಚಾರಕ್ಕೆ ಅವಕಾಶ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಈ ಕ್ರಾಸ್ ಮೂಲಕ ಸಂಚಾರ ಮಾಡುವ ಸುಮಾರು ಐದು ಸಾವಿರಕ್ಕಿಂತ ಲೂ ಅಧಿಕ ಜನರಿಗೆ ಇವರ ಈ ನಿರ್ಧಾರ ದಿಂದ ತೊಂದರೆ ಅಗುತ್ತದೆ.
ಅನೇಕ ವರ್ಷಗಳ ಹಿಂದೆ ಇವರು ಅಂಡರ್ ಗ್ರೌಂಡ್ ರಸ್ತೆಯೊಂದನ್ನು ನಿರ್ಮಿಸಿಕೊಟ್ಟಿದ್ದು ಅದು ಅವೈಜ್ಞಾನಿಕ ವಾಗಿದೆ, ಈ ರಸ್ತೆಯಲ್ಲಿ ಕನಿಷ್ಠ ಆರು ತಿಂಗಳ ಕಾಲ ನೀರು ನಿಲ್ಲುತ್ತದೆ, ಉಳಿದಂತೆ ಸಂಚಾರಕ್ಕೆ ಯೋಗ್ಯವಾಗಿರುವ ರಸ್ತೆಯಲ್ಲ, ಮಹಿಳೆಯರು ಸಹಿತ ಮಕ್ಕಳು ಈ ರಸ್ತೆಯಲ್ಲಿ ಸಂಚರಿಸಲು ಸಾಧ್ಯವಿಲ್ಲ. ಹಾಗಾಗಿ ಸ್ಥಳೀಯ ಜನರಿಗೆ ಮಾಹಿತಿ ನೀಡಿ ಬದಲಿ ರಸ್ತೆ ಯನ್ನು ಕಲ್ಪಿಸಿಕೊಡಿ ಬಳಿಕ ಲೆವಲ್ ಕ್ರಾಸ್ ಬಂದ್ ಮಾಡಿ ಎಂದು ಪ್ರತಿಭಟಕಾರರು ಒತ್ತಾಯಿಸಿ ದರು.
ಶಾಸ್ವತವಾದ ರಸ್ತೆಯನ್ನು ನಿರ್ಮಾಣ ಮಾಡಿ ಕೊಡಿ ಎಂದು ಇಲ್ಲಿನ ನಿವಾಸಿಗಳು ಅನೇಕ ವರ್ಷ ಗಳಿಂದ ಒತ್ತಾಯಿಸುತ್ತಲೇ ಬಂದಿದ್ದರು.
ಕೆ.ಪಿ.ನಾಯ್ಡು ಸೀನಿಯರ್ ರೈಲ್ವೆ ಸೆಕ್ಸನ್ ಇಂಜಿನಿಯರ್ ಅವರು ಸ್ಥಳಕ್ಕೆ ಬೇಟಿ ನೀಡಿ ಬಳಿಕ ಪ್ರತಿಭಟನಕಾರರ ಜೊತೆ ಮಾತನಾಡಿದ ಅವರು ಇಲ್ಲಿ ವಾಹನ ಹಾಗೂ ಜನರ ಕ್ರಾಸ್ ಮಾಡುವ ಹಾಗಿಲ್ಲ, ಇದು ಅಪಾಯಕಾರಿ ಮತ್ತು ಅಕ್ರಮವಾಗಿದೆ ಸಂಚಾರದ ವೇಳೆ ಅವಘಡಗಳು ಸಂಭವಿಸುವ ಲಕ್ಷಗಳಿವೆ ಈ ಹಿನ್ನೆಲೆಯಲ್ಲಿ ಸಂಚಾರಕ್ಕೆ ಇಲಾಖೆ ಅವಕಾಶ ನೀಡುವುದಿಲ್ಲ, ನಿಮಗೆ ಬದಲಿ ವ್ಯವಸ್ಥೆ ಮಾಡಿಕೊಡುವಂತೆ ಇಲಾಖೆ ಲಿಖಿತ ವಾಗಿ ಪತ್ರ ಬರೆಯುವಂತೆ ತಿಳಿಸಿದ್ದಾರೆ.
ಅದರೆ ಇದಕ್ಕೆ ಜಗ್ಗದ ಪ್ರತಿಭಟನಾಕಾರರು ಕೊನೆಗೆ ರೈಲ್ವೆ ಇಲಾಖೆ ಯವರು ಅಡ್ಡವಾಗಿ ಹಾಕಿದ್ದ ಕಲ್ಲುಗಳನ್ನು ಎತ್ತಿ ಪಕ್ಕಕ್ಕೆ ಸರಿಸಿದರು.
ಪ್ರತಿಭಟನೆ ಯಲ್ಲಿ ಗ್ರಾ.ಪಂ.ಅಧ್ಯಕ್ಷ ರಮ್ಲಾನ್, ಮಾಜಿ ಜಿ.ಪಂ.ಸದಸ್ಯ ಉಮ್ಮರ್ ಫಾರೂಕ್, ಮಾಜಿ ತಾ.ಪಂ.ಸದಸ್ಯ ಇಕ್ಬಾಲ್,
ಗ್ರಾ.ಪ.ಸದಸ್ಯ ಹಾಶೀರ್ ಪೇರಿಮಾರ್, ಪ್ರಮುಖರಾದ ಲಕ್ಷಣ್ ಕುಂಪಣಮಜಲು, ಗಿರೀಶ್ ಶೆಟ್ಟಿ ಕುಂಪಣಮಜಲು, ಸಂತೋಷ್ ಗಾಂಭೀರ, ಧನರಾಜ್ ಶೆಟ್ಟಿ, ಜಗದೀಪ್, ಸಂದೇಶ್ ಕುಂಪಣಮಜಲು, ವಿಕ್ರಂ ಬರ್ಕೆ, ಸುರೇಶ್ ಶೆಟ್ಟಿ ಬರ್ಕೆ, ಸತೀಶ್ ಶೆಟ್ಟಿ ಕುಂಪಣಮಜಲು, ಸುಂದರ ಶೆಟ್ಟಿ ಪಲ್ಲತಡಮೆ, ಗ್ರಾ.ಪಂ.ಸದಸ್ಯ ರಾದ ರಿಯಾಜ್ ಕುಂಪಣಮಜಲು, ಜಾಹೀರ್ ಕುಂಪಣಮಜಲು, ಹೇಮಲತಾ ಕುಂಪಣಮಜಲು, ಪ್ರಮುಖರಾದ ಎಫ್.ಎ.ಖಾದರ್ , ಇಕ್ಬಾಲ್ ಸುಜೀರ್, ಕುಂಪಣಮಜಲು ಅರಫಾ ಮಸೀದಿಯ ಅಧ್ಯಕ್ಷ ಬುಖಾರಿ, ಅಮಿತ್ ಡಿ.ಮೆಲ್ಲೋ, ಸಲೀಂ ಕುಂಪಣಮಜಲು, ಸುಚಿತ್ರ, ಐಸಾಬಿ, ಸುಕೇಶ್ ಶೆಟ್ಟಿ, ಆನಂದ ಆಳ್ವ, ಇಕ್ಬಾಲ್ ಸುಜೀರ್, ಇಬ್ರಾಹಿಂ ಕುಂಪಣಮಜಲು,
ಸ್ಥಳ ಕ್ಕೆ ಬಂಟ್ವಾಳ ಎ.ಎಸ್.ಪಿ.ಸೈದುಲು ಅಡಾವತ್, ಸಿ.ಐ.ಶರಣ್ ಗೌಡ, ಎಸ್.ಐ.ಪ್ರಸನ್ನ ಹಾಗೂ ರೈಲ್ವೆ ಇಲಾಖೆಯ ಪೋಲೀಸರು ಹಾಜರಿದ್ದು ಸೂಕ್ತವಾದ ಬಂದೋ ಬಸ್ತ್ ಮಾಡಿದ್ದರು.