ಬಂಟ್ವಾಳ: ಲೋಕಸಭಾ ಚುನಾವಣೆ ಹಿನ್ನಲೆ ಬಂಟ್ವಾಳದ ಲೋರೇಟೂದಲ್ಲಿರುವ ಪ್ರಭಾ ಗೋಡಂಭಿ ಕಾರ್ಖಾನೆಗೆ ಮಾಜಿ ಸಚಿವ ಬಿ.ರಮಾನಾಥ ರೈ ಭೇಟಿ ನೀಡಿದ್ದಾರೆ.ಶುಕ್ರವಾರ ಸಂಜೆ ಕಾರ್ಖಾನೆಗೆ ಭೇಟಿ ನೀಡಿದ ಮಾಜಿ ಸಚಿವ ಗೋಡಂಭಿ ಕಾರ್ಖಾನೆ ಸಿಬ್ಬಂದಿಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈಗೆ ಮತ ನೀಡುವಂತೆ ಮನವಿ ಮಾಡಿದ್ದಾರೆ.

ಲೋಕಸಭಾ ಚುನಾವಣೆಗೆ ಇನ್ನು ಕೇವಲ 6 ದಿನಗಳು ಮಾತ್ರ ಬಾಕಿ ಇದ್ದು ಪ್ರಚಾರ ಮಾಡುವ ಸಮಯ ಕೂಡ ಮುಗಿಯುತ್ತಾ ಬಂದಿದೆ. ಇತ್ತ ರೈ ಈ ಬಾರಿ ಲೋಕಸಭಾ ಕ್ಷೇತ್ರದ ನಾಯಕನಾಗಿ ಕರಾವಳಿಗೆ ಮಿಥುನ್ ರೈ ಬರಲೇ ಬೇಕು ಎಂಬ ಹಠದಲ್ಲಿದ್ದಾರೆ. ಅದಕ್ಕಾಗಿ ಕಾಂಗ್ರೆಸ್ ಅಭ್ಯರ್ಥಿ ಘೋಷಣೆಯಾದಗಿನಿಂದಲೂ ಮಿಥುನ್ ರೈ ಪರ ಸಮಾವೇಶ, ಸಭೆ ಪ್ರಚಾರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ.ಅದರಂತೆ ಶುಕ್ರವಾರ ಕಾಂಗ್ರೆಸ್ ಕಾರ‍್ಯಕರ್ತರೊಂದಿಗೆ ಪ್ರಭಾ ಗೋಡಂಬಿ ಕಾರ್ಖಾನೆಗೆ ಭೇಟಿ ನೀಡಿ ಮಿಥುನ್ ರೈ ಪರ ಮತಯಾಚಿಸಿದ್ದಾರೆ.