ಬಂಟ್ವಾಳ: ಬಂಟ್ವಾಳ ತಾಲೂಕಿನ ಬಿ.ಸಿ.ರೋಡನ್ನು ಕೇಂದ್ರೀಕರಿಸಿ ನೂತನವಾಗಿ ಅಸ್ತಿತ್ವಕ್ಕೆ ಬರಲಿರುವ ಬಂಟ್ವಾಳ ಕ್ರೆಡಿಟ್ ಕೋ -ಅಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ ಮಾಜಿ ಸಚಿವ ರಮಾನಾಥ ರೈ ಅವರು ಆಯ್ಕೆಯಾಗಿದ್ದಾರೆ. ಬುಧವಾರ ಸೊಸೈಟಿಯ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಉಳಿದಂತೆ ಉಪಾಧ್ಯಕ್ಷರಾಗಿ ಮಾಯಿಲಪ್ಪ ಸಾಲಿಯಾನ್,ನಿರ್ದೇಶಕರುಗಳಾಗಿ ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ,ಪದ್ಮಶೇಖರ ಜೈನ್,ಎಂ.ಎಸ್.ಮಹಮ್ಮದ್,ಮಂಜುಳಾ ಮಾವೆ,ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ,ಭೂಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್, ಪಿಯೂಸ್ ರೋಡ್ರಿಗಸ್, ಅಲ್ಪೋನ್ಸ್ ಮೆನೇಜಸ್,ನಾರಾಯಣ ನಾಯ್ಕ್,ಅಮ್ಮು ಅರ್ಬಿಗುಡ್ಡೆ,ವಾಣಿ ಪ್ರಕಾಶ್ ಅವರ ಆಯ್ಕೆಗೊಂಡಿದ್ದಾರೆ.ಸಹಕಾರ ಸಂಘದ ಅಧಿಕಾರಿ ತ್ರಿವೇಣಿ ಅವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.ಬಿ.ಸಿ.ರೋಡಿ ನಲ್ಲಿರುವ ಕಾಂಗ್ರೆಸ್ ಭವನದ ಕಟ್ಟಡದಲ್ಲಿ ಈ ನೂತನ ಸೊಸೈಟಿಯ ಪ್ರಧಾನ ಕಚೇರಿ ಶೀಘ್ರದಲ್ಲಿಯೇ ಅಸ್ತಿತ್ವಕ್ಕೆ ಬರಲಿದೆ. ಮಾಜಿ ಸಚಿವ ರಮಾನಾಥ ರೈ ಅವರ ಸಾರಥ್ಯದಲ್ಲಿ ಆರಂಭವಾಗುವ ಈ ಸೊಸೈಟಿ ಭವಿಷ್ಯದಲ್ಲಿ ತಾಲೂಕಿನ ವಿವಿದೆಡೆಯಲ್ಲಿ ಶಾಖಯನ್ನು ತೆರೆಯುವ ಉದ್ದೇಶವನ್ನು ಹೊಂದಿದೆ ಎಂದು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿಕುಂದರ್ ತಿಳಿಸಿದ್ದಾರೆ.-