ಬಂಟ್ವಾಳ:
ಬಂಟ್ವಾಳಕ್ಕೆ ಸೆಂಟ್ರಲ್ ರೋಡ್ ಫಂಡ್ ಯೋಜನೆಯಲ್ಲಿ ೮ ಕಾಮಗಾರಿಗಳು ತನ್ನ ಅವಧಿಯಲ್ಲೇ ಮಂಜೂರಾಗಿವೆ ಎಂದು
ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಬಿ.ಸಿ.ರೋಡ್‌ನಲ್ಲಿರುವ ಪಾಣೆಮಂಗಳೂರು ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಇವೆಲ್ಲ ಕಾಮಗಾರಿಗಳು ಚುನಾವಣೆಯ ಸಂದರ್ಭದಲ್ಲಿ ಮಂಜೂರಾತಿ ಆಗಿವೆ.
ಇದರ ಫಾಲೋಅಪ್ ಮಾಡುವ ಮೂಲಕ ಕಾಮಗಾರಿ ಪೂರ್ಣಗೊಳ್ಳುವಂತೆ
ಮಾಡುತ್ತಿದ್ದೇನೆ ಎಂದರು.

ಇದೀಗ ತಿಳಿಸಿದಾಗೆ
ಒಟ್ಟು ೮ ಕಾಮಗಾರಿಗಳಲ್ಲಿ ಮೊದಲ ಹಂತದಲ್ಲಿ ೬ ಕಾಮಗಾರಿಗಳು ನಡೆಯುತ್ತಿವೆ, ನಂತ ಮಂಜೂರಾತಿ ಆದ ೨ ಕಾಮಗಾರಿಗಳು ಎಂದು ಮಾಹಿತಿ ನೀಡಿದ್ದಾರೆ.
ಅದೇ ರೀತಿ ಕ್ರೀಡಾಂಗಣ, ಒಳಚರಂಡಿ ಯೋಜನೆಗೆ ಮಂಜೂರಾತಿ ಆಗಿದ್ದು, ಶೀಘ್ರ ಅನುಷ್ಠಾನವಾಗಲಿದೆ. ಇದೀಗ ಬಾಕಿಯಿರುವ ರಸ್ತೆ ಕಾಮಗಾರಿಗಳ ಅನುದಾನದ ಬಿಡುಗಡೆಗೆ ಸಚಿವ ಎಚ್.ಡಿ.ರೇವಣ್ಣ ಅವರಿಗೆ ಪತ್ರವನ್ನು ಬರೆಯಲಾಗಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಮುಖರಾದ ಚಂದ್ರಪ್ರಕಾಶ್ ಶೆಟ್ಟಿ, ಮಂಜುಳಾ ಮಾವೆ,
ಅಬ್ಬಾಸ್ ಆಲಿ, ಸದಾಶಿವ ಬಂಗೇರ,
ಸುದೀಪ್ ಕುಮಾರ್ ಶೆಟ್ಟಿ, ಬೇಬಿ ಕುಂದರ್ ಇದ್ದರು