ಬಂಟ್ವಾಳ, ಮೇ ೬: ಈ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ 624 ಅಂಕ ಪಡೆದು ರಾಜ್ಯಕ್ಕೆ ಎರಡನೇ ಸ್ಥಾನಿಯಾಗಿರುವ ಬಂಟ್ವಾಳ ವಿದ್ಯಾಗಿರಿಯ ಅಂಗ್ಲ ಮಾಧ್ಯಮ ಶಾಲೆಯ ವಿಧ್ಯಾರ್ಥಿನಿ ಅನುಪಮಾ ಕಾಮತ್ ಅವರ ಮನೆಗೆ ಮಾಜಿ ಸಚಿವ ಬಿ.ರಮಾನಾಥ ರೈ ಅವರು ಭೇಟಿ ನೀಡಿದರು. ಬಳಿಕ ಅನುಪಮಾ ಕಾಮತ್ ರಿಗೆ ಸಿಹಿ ತಿನ್ನಿಸಿ, ಸ್ಮರಣಿಕೆ ನೀಡಿ ಅಭಿನಂದಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಬೇಬಿ ಕುಂದರ್, ಅಬ್ಬಾಸ್ ಅಲಿ, ಸದಾಶಿವ ಬಂಗೇರ, ಲೋಕೇಶ್ ಸುವರ್ಣ, ಸತ್ಯನಾರಾಯಣ ರಾವ್, ಪಿಲಿಪು ಡಿಸೋಜ, ಇಮಾಕರ್ ಪೂಜಾರಿ, ವೆಂಕಪ್ಪ ಪೂಜಾರಿ ಮತ್ತಿತರರು ಹಾಜರಿದ್ದರು.