Friday, July 4, 2025

ಬೆಲೆ ಏರಿಕೆಯ ವಿರುದ್ಧ ಧ್ವನಿಯಾಗಿ, ವಿರೋಧ ವ್ಯಕ್ತಪಡಿಸಿ: ಮಾಜಿ ಸಚಿವ ಬಿ.ರಮಾನಾಥ ರೈ

ಬಂಟ್ವಾಳ: ಮೂಲಭೂತ ಸೌಕರ್ಯಗಳ ಬೆಲೆ ಏರಿಕೆಯ ವಿರುದ್ದ ಪಕ್ಷಾತೀತವಾಗಿ ವಿರೋಧ ವ್ಯಕ್ತಪಡಿಸಿ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಅವರು ಮನವಿ ಮಾಡಿದ್ದಾರೆ.
ಕೊರೊನಾ ಸಂಕಷ್ಟದ ದಿನಗಳಲ್ಲಿ ದಿನಬಳಕೆಯ ವಸ್ತುಗಳ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಿಂದ ಜನರು ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದಾರೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಕಡಿಮೆಯಾಗಿದ್ದರೂ ಕೂಡಾ ಭಾರತದಲ್ಲಿ ಮಾತ್ರ ಬೆಲೆ ಕಡಿಮೆಯಾಗಿಲ್ಲ. ಇದು ಮೋದಿಯವರನ್ನು ಬಿಟ್ಟು ಉಳಿದವರಿಗೆಲ್ಲಾ ತೊಂದರೆಯಾಗಿದೆ ಎಂದು ಅವರು ಕೇಂದ್ರ ಸರಕಾರದ ವಿರುದ್ದ ಆರೋಪ ವ್ಯಕ್ತಪಡಿಸಿದ್ದಾರೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಾದ ಸಂದರ್ಭದಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರಕಾರ ಯಾವತ್ತೂ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ಮಾಡಿಲ್ಲ.
ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ಮಾಡಿದಾಗ ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ಅಗುತ್ತದೆ. ಇದು ಸಾರ್ವಜನಿಕರ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಸರಕಾರ ಬಡವರ ಬಗ್ಗೆ ಅರ್ಥ ಮಾಡಿಕೊಳ್ಳಲು ಅವರು ಮನವಿ ಮಾಡಿದ್ದಾರೆ.
ಕೊರೊನಾ ಅವಧಿಯಾಗಿರುವುದರಿಂದ ಪ್ರತಿಭಟನೆ ಮಾಡುವುದು ಅಸಾಧ್ಯ, ಆದರೂ ಅಯಾಯಾ ವ್ಯಾಪ್ತಿಯಲ್ಲಿ ಬೆಲೆ ಏರಿಕೆಯ ವಿರುದ್ಧ ಧ್ವನಿಎತ್ತಬೇಕಾಗಿದೆ.  ವಿರೋಧ ವ್ಯಕ್ತಪಡಿಸಿ ಎಂದು ಅವರು ಕರೆ ನೀಡಿದ್ದಾರೆ.

More from the blog

ಬೆಂಜನಪದವು ಶಾಲೆ : ಉಚಿತ ಯಕ್ಷಗಾನ ನಾಟ್ಯ ತರಗತಿ ಶುಭಾರಂಭ..

ಬಂಟ್ವಾಳ: ಬೆಂಜನಪದವು ಸರಕಾರಿ ಪದವಿಪೂರ್ವ ಕಾಲೇಜು ಬೆಂಜನಪದವು ಪ್ರೌಢಶಾಲಾ ವಿಭಾಗದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ವತಿಯಿಂದ ಉಚಿತ ಯಕ್ಷಗಾನ ನಾಟ್ಯ ತರಗತಿ ಉದ್ಘಾಟನೆ ಗೊಂಡಿತು. ಫೌಂಡೇಶನ್ ನ ಸಂಚಾಲಕರಾದ ಶ್ರೀ ವಾಸುದೇವ ಐತಾಳ್ ದೀಪ...

ಜು.12ರಂದು ಬಂಟ್ವಾಳ ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ ಅದಾಲತ್..

ಬಂಟ್ವಾಳ : ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಜು.12ರಂದು ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮ ತಾಲೂಕು ಕಾನೂನು ಸೇವೆಗಳ ಸಮಿತಿ ಬಂಟ್ವಾಳ ಇವರ...

ಅಕ್ರಮ ಗಣಿಗಾರಿಕೆ: ಲಾರಿಗಳನ್ನು ತಡೆದ ಗ್ರಾಮಸ್ಥರು..

ಬಂಟ್ವಾಳ: ಪಲ್ಲಮಜಲು ಕೋರೆಯಿಂದ ಲಾರಿಗಳು ಜಲ್ಲಿಕಲ್ಲು ಲೋಡ್ ಮಾಡಿಕೊಂಡು ಹೋಗುತ್ತಿದ್ದ ವೇಳೆ ಸಾರ್ವಜನಿಕರಿಂದ ಲಾರಿಗಳನ್ನು ತಡೆದು ಪ್ರತಿಭಟಿಸಿದ ಘಟನೆ ಇಂದು ನಡೆದಿದೆ. ಪಲ್ಲಮಜಲು ಗಣಿಗಾರಿಕೆಯಿಂದ ಸ್ಥಳೀಯ ಮನೆಗಳಿಗೆ ಹಾನಿಯಾಗಿದೆ ಎಂದು ಗ್ರಾಮಸ್ಥರು ಗಣಿಇಲಾಖೆ ಹಾಗೂ...

Bantwal : ನೇತ್ರಾವತಿ ‌ನದಿಯಲ್ಲಿ ಅಪರಿಚಿತ ಗಂಡಸಿನ‌ ಮೃತದೇಹ ಪತ್ತೆ : ಗುರುತು ಪತ್ತೆಗೆ ಮನವಿ..

ಬಂಟ್ವಾಳ: ಇಲ್ಲಿನ‌ ನೇತ್ರಾವತಿ ‌ನದಿಯಲ್ಲಿ ಜುಲೈ 2 ರಂದು ಅಪರಿಚಿತ ಗಂಡಸಿನ‌ ಶವ ಪತ್ತೆಯಾಗಿದೆ ಎಂದು ಬಂಟ್ವಾಳ ನಗರ ಠಾಣಾ ಪೋಲೀಸರು ಪ್ರಕರಟನೆಯಲ್ಲಿ ತಿಳಿಸಿದ್ದಾರೆ. ಸುಮಾರು 45 ರಿಂದ 50 ವರ್ಷ ವಯಸ್ಸಿನವರಾಗಿದ್ದು,ಇವರ ಗುರುತು...