Sunday, July 6, 2025

ಚಲನ‌ಚಿತ್ರ ನಟಿ ರಾಧಿಕಾ ಅವರ ತಂದೆ ದೇವರಾಜ್ ವಿಧಿವಶ

ಬಂಟ್ವಾಳ: ಚಲನಚಿತ್ರ ನಟಿ ರಾಧಿಕಾಕುಮಾರಸ್ವಾಮಿ ಅವರ ತಂದೆ ಉದ್ಯಮಿ ದೇವರಾಜ್ ಅವರು ಇಂದು ಬೆಂಗಳೂರು ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಉದ್ಯಮಿ ದೇವರಾಜ್ ಅವರು ಬೆಂಗಳೂರಿನ ರಾಜಾಜಿನಗರದ ನಿವಾಸದಲ್ಲಿ ಕೊನೆಯುಸಿರೆಳೆದರು ಎಂದು ಹೇಳಲಾಗುತ್ತಿದೆ.
ಕಳೆದ ವಾರ ಇವರ ವಿಟ್ಲ ಸಮೀಪದ ಸಾಲೆತ್ತೂರು ಮನೆಯಲ್ಲಿ ದೈವಗಳ ನೇಮ‌ ಹಾಗೂ ಇನ್ನಿತರ ಕಾರ್ಯಕ್ರಮಗಳು ನಡೆದಿತ್ತು. ಆ ಬಳಿಕ ಇವರಿಗೆ ಆರೋಗ್ಯ ದಲ್ಲಿ ಏರುಪೇರು ಕಂಡು ಬಂದಿತ್ತು.
ಹಾಗಾಗಿ ಇವರನ್ನು ಬೆಂಗಳೂರು ಆಸ್ಪತ್ರೆ ಗೆ ದಾಖಲು ಮಾಡಲಾಗಿತ್ತು ಎಂದು ಹೇಳಲಾಗುತ್ತಿದೆ.
ರಾಧಿಕಾ ಅವರ ತಂದೆ ದೇವರಾಜ್ ಅವರು ಮೂಲತಃ ಮಂಗಳೂರಿನವರು ಬಳಿಕ ಉದ್ಯಮ ಕ್ಷೇತ್ರದಲ್ಲಿ ಬೇರೆ ಬೇರೆ ಕಡೆಗಳಿಗೆ ಪ್ರವಾಸ ಕೈಗೊಂಡ ಬಳಿಕ ವಿಟ್ಲ ಸಮೀಪದ ಸಾಲೆತ್ತೂರು ಎಂಬಲ್ಲಿ ವಾಸ ಮಾಡುತ್ತಿದ್ದರು. ಇವರ ಅಂತಿಮ ಸಂಸ್ಕಾರ ಮಂಗಳೂರಿನಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ.

More from the blog

ಏಮಾಜೆ ಶಾಲೆ : ಶಾಲಾ ಮಂತ್ರಿಮಂಡಲದ ಪದಗ್ರಹಣ ಕಾರ್ಯಕ್ರಮ..

ಬಂಟ್ವಾಳ : ಶಾಲಾ ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಮಹತ್ವದ ಅರಿವನ್ನು ಮೂಡಿಸುವ ನಿಟ್ಟಿನಲ್ಲಿ ಬಂಟ್ವಾಳ ತಾಲೂಕಿನ ನೆಟ್ಲ ಮುಡ್ನೂರು ಗ್ರಾಮದ. ಸರಕಾರಿ ಕಿ. ಪ್ರಾ ಶಾಲೆ ಏಮಾಜೆಯಲ್ಲಿ 2025-26 ನೇ ಸಾಲಿನ ಶಾಲಾ ಮಂತ್ರಿಮಂಡಲದ...

ಬೆಂಜನಪದವು ಪ್ರೌಢಶಾಲೆ : ಶಾಲಾ ಸರಕಾರ ಹಾಗೂ ವಿವಿಧ ಸಂಘಗಳ ಉದ್ಘಾಟನೆ..

ಬಂಟ್ವಾಳ: ಇಂದು ಸರಕಾರಿ ಪದವಿಪೂರ್ವ ಕಾಲೇಜು ಬೆಂಜನಪದವು ಪ್ರೌಢಶಾಲಾ ವಿಭಾಗದಲ್ಲಿ ಶಾಲಾ ಸರಕಾರ ಹಾಗೂ ವಿವಿಧ ಸಂಘಗಳ ಉದ್ಘಾಟನೆ ನಡೆಯಿತು. ಶಾಲಾ ಸಂಸತ್ತಿನ ಮುಖ್ಯ ಮಂತ್ರಿ ಸೇರಿದಂತೆ ವಿವಿಧ ಇಲಾಖೆಗಳ ಮಂತ್ರಿಗಳಿಗೆ ರಾಜ್ಯಪಾಲರು ಪ್ರಮಾಣ...

ಮುಂದುವರಿದ ಮಳೆ ಅಬ್ಬರ : ಬಂಟ್ವಾಳ ತಾಲೂಕಿನ ಹಲವೆಡೆ ಹಾನಿ..

ಬಂಟ್ವಾಳ : ಶನಿವಾರವೂ ಮಳೆಗೆ ತಾಲೂಕಿನ ಅಲ್ಲಲ್ಲಿ ಹಾನಿಯಾಗಿದ್ದು, ಕಡೇಶ್ವಾಲ್ಯ ಗ್ರಾಮದ ನಡ್ಯೇಲು ಎಂಬಲ್ಲಿ ಕಾಲುಸಂಕ ಮುರಿದು ಬಿದ್ದಿರುತ್ತದೆ. ಇಲ್ಲಿನ ಗ್ರಾಮಪಂಚಾಯತ್ ಪೂರ್ವದಲ್ಲಿಯೇ ಎಚ್ಚರಿಕೆ ಫಲಕ ಅಳವಡಿಸಿದ್ದರಿಂದ ಯಾವುದೇ ಅನಾಹುತ ಸಂಭವಿಸಿರುವುದಿಲ್ಲ. ತೋಡಿನಲ್ಲಿ...

ಸಿಂಧೂರ ವಿಜಯ ಉದ್ಯಾನವನದ ಉದ್ಘಾಟನಾ ಕಾರ್ಯಕ್ರಮ..

ಮಂಗಳೂರು: ಕೊಟ್ಟಾರ ಚೌಕಿ ಹೆದ್ದಾರಿ 66ರ ಬಳಿ ಮಂಗಳೂರು ಮಹಾನಗರ ಪಾಲಿಕೆಯ 16ನೇ ಬಂಗ್ರಕೂಳೂರು ವಾರ್ಡ್ನಲ್ಲಿ ಮಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರ ಇದರ ವತಿಯಿಂದ ನಿರ್ಮಾಣಗೊಂಡಿರುವ ನೂತನ ಸಿಂಧೂರ ವಿಜಯ ಉದ್ಯಾನವನದ ಉದ್ಘಾಟನೆ...