Thursday, January 29, 2026

ನನ್ನ ಮೇಲಿನ ಕೋವಿಡ್ ನಿಯಮ ಉಲ್ಲಂಘನೆ ಆರೋಪ ಸುಳ್ಳು: ಯುವ ವಕೀಲ ರಾಜೇಶ್ ಪೂಜಾರಿ ಬೊಳ್ಳುಕಲ್ಲು ಸ್ಪಷ್ಟನೆ

ಬಂಟ್ವಾಳ: ಕೊರೋನ ಪಾಸಿಟಿವ್ ಬಂದರೂ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನಾನು ಕೋವಿಡ್ ನಿಯಮ ಉಲ್ಲಂಘಿಸಿದ್ದೇನೆ ಎಂದು ಕೆಲವರು ಮಾಡಿರುವ ಆರೋಪ ಸುಳ್ಳಿನಿಂದ ಕೂಡಿದೆ ಎಂದು ತಾಲೂಕಿನ ಯುವ ವಕೀಲ ರಾಜೇಶ್ ಪೂಜಾರಿ ಬೊಳ್ಳುಕಲ್ಲು ಸ್ಪಷ್ಟಪಡಿಸಿದ್ದಾರೆ‌.

ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಬೊಳ್ಳುಕಲ್ಲು ನಿವಾಸಿಯಾದ, ಯುವ ನ್ಯಾಯವಾದಿ ರಾಜೇಶ್ ಪೂಜಾರಿ ಬೊಳ್ಳುಕಲ್ಲು ಅವರ ವಿರುದ್ಧ ಮಣಿನಾಲ್ಕೂರು ಗ್ರಾಮದ ಪಿ.ಡಿ.ಒ. ವಸಂತಿ ಅವರು ಬಂಟ್ವಾಳ ಗ್ರಾಮಾಂತರ ಠಾಣೆಗೆ ಕೋವಿಡ್ ನಿಯಮ ಉಲ್ಲಂಘನೆ ದೂರು ನೀಡಿದ್ದರು.‌ ಈ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿಗೆ ಸಂಬಂಧಿಸಿ ವಕೀಲ ರಾಜೇಶ್ ಪೂಜಾರಿ ಸ್ಪಷ್ಟನೆ ನೀಡಿದ್ದಾರೆ.

ಕೆಲವು ದಿನಗಳ ಹಿಂದೆ ನಾನು ಸ್ಥಳೀಯವಾಗಿ ಮಾಡಿಸಿದ ಕೋವಿಡ್ ಪರೀಕ್ಷೆಯ ವರದಿ ಪಾಸಿಟಿವ್ ಬಂದಿತ್ತು. ಯಾವುದೇ ಕೊರೋನ ಲಕ್ಷಣಗಳು ಇಲ್ಲದ ಕಾರಣ ಸಂಶಯಗೊಂಡ ನಾನು ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ತೆರಳಿ ಕೋವಿಡ್ ಪರೀಕ್ಷೆ ನಡೆಸಿದ್ದು ಅದರ ವರದಿ ನೆಗೆಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ನಾನು ಗುರುವಾರ ಕಾರ್ಕಳದಲ್ಲಿ ನಡೆದ ಹತ್ತಿರದ ಸಂಬಂಧಿಯ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಎಂದು ರಾಜೇಶ್ ಪೂಜಾರಿ ತಿಳಿಸಿದ್ದಾರೆ.

ಮೊದಲ ಕೋವಿಡ್ ಪರೀಕ್ಷೆಯ ವರದಿಯಲ್ಲಿ ಪಾಸಿಟಿವ್ ಬಂದ ಬಳಿಕ ಮನೆಯಲ್ಲೇ ಹೋಂ ಐಸೋಲೇಷನ್ ಆಗಿದ್ದೆ. ಎರಡನೇ ಕೋವಿಡ್ ಪರೀಕ್ಷಾ ವರದಿ ನೆಗೆಟಿವ್ ಬಂದ ಬಳಿಕವೇ ನಾನು ಮನೆಯಿಂದ ಹೊರ ಹೋಗಿದ್ದೇನೆ. ಒಬ್ಬ ವಕೀಲನಾಗಿ ಮತ್ತು ಸಾಮಾಜಿಕ ಕಾರ್ಯಕರ್ತನಾಗಿ ಕೋವಿಡ್ ನಿಯಮಗಳ ಬಗ್ಗೆ ಅರಿವಿದ್ದು ಅದನ್ನು ಪಾಲಿಸುತ್ತಿದ್ದೇನೆ. ನನಗೆ ಕೊರೋನ ಪಾಸಿಟಿವ್ ಆಗಿದ್ದರೆ ಅದು ಇತರರಿಗೆ ಹರಡದಂತೆ ಜಾಗೃತಿ ವಹಿಸಬೇಕೆಂಬ ಪ್ರಜ್ಞೆಯನ್ನೂ ಹೊಂದಿದ್ದೇನೆ. ಅಲ್ಲದೆ ನಾನು ಭಾಗವಹಿಸಿದ ಮದುವೆ ಕಾರ್ಯಕ್ರಮ ನಮ್ಮ ಹತ್ತಿರದ ಸಂಬಂಧಿಕರದ್ದಾಗಿದೆ. ಕೊರೋನ ಪಾಸಿಟಿವ್ ಆಗಿದ್ದರೆ ಆ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಲು ಹೇಗೆ ಸಾಧ್ಯ. ಈವರೆಗೆ ನಾನು ಯಾವುದೇ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ಅವರು ಹೇಳಿದ್ದಾರೆ.

ಗ್ರಾಮದ ಕೆಲವರು ವೈಯಕ್ತಿಕ ದ್ವೇಷದಿಂದ ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ರಾಜಕೀಯ ಅಧಿಕಾರವನ್ನು ದುರುಪಯೋಗ ಪಡಿಸಿ ಅಧಿಕಾರಿಗಳ ಮೂಲಕ ಸುಳ್ಳು ದೂರುಗಳನ್ನು ದಾಖಲಿಸಿದ್ದಾರೆ. ನನ್ನ ಮೇಲಿನ ಎಲ್ಲಾ ಆರೋಪ ಮತ್ತು ದೂರುಗಳು ಸತ್ಯಕ್ಕೆ ದೂರವಾಗಿದೆ ಎಂದು ವಕೀಲ ರಾಜೇಶ್ ಪೂಜಾರಿ ಬೊಳ್ಳುಕಲ್ಲು ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

More from the blog

ವಿದ್ಯುತ್ ಸಮಸ್ಯೆಗೆ ಸ್ಪಂದಿಸಿದ ಗ್ರಾ.ಪಂ.ಸದಸ್ಯ ಹಾಶೀರ್ ಪೆರಿಮಾರ್ ಅವರಿಗೆ ಗ್ರಾಮಸ್ಥರಿಂದ ಅಭಿನಂದನೆ

ಬಂಟ್ವಾಳ: ವಿದ್ಯುತ್ ಸಮಸ್ಯೆಯಿಂದ ಬೇಸೆತ್ತ ಗ್ರಾಮಸ್ಥರ ಸಮಸ್ಯೆಗೆ ಸಕಾಲದಲ್ಲಿ ಸ್ಪಂದಿಸಿದ ಪುದು ಗ್ರಾಮಪಂಚಾಯತ್ ಸದಸ್ಯನಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ. ಪುದು ಗ್ರಾಮದ ಪೇರಿಮಾರ್ ವಾರ್ಡಿನ ರಾಷ್ಟ್ರೀಯ ಹೆದ್ದಾರಿ ಬದಿಯಿಂದ ದೇವಸ್ಯ, ಜಲಾಲಿಯ ನಗರ, ಮಾರಿಪಳ್ಳ...

Bantwal : ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಷನ್ – ಪದಾಧಿಕಾರಿಗಳ ಪದಾಪ್ರಧಾನ, ರಜತ ಸಂಭ್ರಮ ಸಮಾರೋಪ

ಬಂಟ್ವಾಳ :ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಷನ್ ರಿ, ಬಂಟ್ವಾಳ ವಲಯದ ನೂತನ ಪದಾಧಿಕಾರಿಗಳ ಪದಾಪ್ರಧಾನ ಸಮಾರಂಭ ಹಾಗು ರಜತ ಸಂಭ್ರಮದ ಸಮಾರೋಪ ಸಮಾರಂಭ ವು ಬಿಸಿ ರೋಡ್ ನ ಲಯನ್ಸ್ ಸೇವಾ...

B.C. Road : ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ನರೇಗಾ ಬಚಾವೋ ಸಂಗ್ರಾಮ ಕಾರ್ಯಕ್ರಮ

ಬಂಟ್ವಾಳ: ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ನರೇಗಾ ಬಚಾವೋ ಸಂಗ್ರಾಮ ಕಾರ್ಯಕ್ರಮ ಬಿಸಿರೋಡಿನ ರಕ್ತೇಶ್ವರಿ...

ಕಟೀಲು 7 ಮೇಳಗಳ ಜ.28ರ ಸೇವೆಯಾಟಗಳ ವಿವರ ಇಲ್ಲಿದೆ..

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇದರ 7 ಮೇಳಗಳ ಜ.28ರ ಸೇವೆಯಾಟಗಳ ವಿವರ ಈ ಕೆಳಗಿನಂತಿವೆ.. ಜ.28ರ ಸೇವೆಯಾಟಗಳ ವಿವರ : ಆನಂದ ಎಂ. ಶೆಟ್ಟಿ, ಏಳಿಂಜೆ ಅಂಗಡಿಗುತ್ತು,...