Thursday, February 5, 2026

ಕ್ವಾರಂಟೈನ್ ಕುಟುಂಬಿಕರಿಂದ ಅಡ್ಡಿ: ನಾಲ್ವರ ವಿರುದ್ಧ ಪ್ರಕರಣ ದಾಖಲು

 

ಬಂಟ್ವಾಳ : ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪಕ್ಕೆ ಸಂಬಂಧಿಸಿ ನಾಲ್ವರ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾರಕ ಸಾಂಕ್ರಾಮಿಕ ಕೊರೊನಾ ಸೋಂಕು ಹರಡದಂತೆ ತಡೆಯುವ ಉದ್ದೇಶದಲ್ಲಿ ಜಾರಿಯಲ್ಲಿರುವ ಲಾಕ್ ಡೌನ್ ನಂತೆ , ಇತ್ತೀಚೆಗೆ ವಿದೇಶದಿಂದ ಊರಿಗೆ ಬಂದಿದ್ದ ಬೆಳ್ತಂಗಡಿ ತಾಲೂಕು ನ್ಯಾಯತರ್ಪು ಗ್ರಾಮದ ನಾಳ ದೇವಸ್ಥಾನದ ಹತ್ತಿರ ವಾಸವಿರುವ ವ್ಯಕ್ತಿಯೋರ್ವರಿಗೆ ಹೋಂ ಕ್ವಾರೆಂಟೈನ್ ನ ನಿಗಾದಲ್ಲಿ ಇರುವಂತೆ ಸೂಚಿಸಲಾಗಿತ್ತು. ಈ ಬಗ್ಗೆ Quarentine ನಿಗಾದಲ್ಲಿರುವ ವ್ಯಕ್ತಿಗಳನ್ನು ಪರಿಶೀಲನೆಗೆಂದು ಬೆಳ್ತಂಗಡಿ ಪೊಲೀಸು ಠಾಣಾ ಸಿಬ್ಬಂದಿಗಳಾದ ಗಂಗಾದರ್‌ , ಚೈತ್ರ ಹಾಗೂ ಬೆಳ್ತಂಗಡಿ ತಾಲೂಕು ಆಸ್ಪತ್ರೆಯ ಎಎನ್‌ಎಂ ಕಮಲ ಎಂಬವರು ತೆರಳಿದ್ದರು. ಆದರೆ ಈ ವೇಳೆ ಹೋಂ ಕ್ವಾರಂಟೈನ್ ನಲ್ಲಿರಬೇಕಾದ ವ್ಯಕ್ತಿ ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಮನೆಯ ಅಂಗಳದಲ್ಲಿ ಮುಖಕ್ಕೆ ಮಾಸ್ಕ್ ಹಾಕದೇ ಓಡಾಡುತ್ತಿದ್ದು ಈತನಿಗೆ ಸುರಕ್ಷತಾ ಕ್ರಮವನ್ನು ಪಾಲಿಸುವಂತೆ ತಿಳಿಸಿದಾಗ ಆತನ ಮನೆಯಲ್ಲಿದ್ದ ಮಸೂದ್ ಆಲಿ, ಬಾತೀಷ್ ಆಲಿ, ಅಕ್ಬರ್ ಅಲಿ ಎಂಬವರು ಅಪಾಯಕಾರಿ ರೋಗದ ಸೋಂಕನ್ನು ಹರಡುವ ಸಂಭವ ಇರುವ ಕೃತ್ಯವನ್ನು ನಿರ್ಲಕ್ಷ್ಯದಿಂದ ಹಾಗೂ ದ್ವೇಷಪೂರ್ವಕವಾಗಿ ಮಾಡಿ ನಮ್ಮ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವಾಚ್ಯವಾಗಿ ನಿಂದಿಸಿ ಜೀವಬೆದರಿಕೆ ಹಾಕಿದ್ದಾರೆಂದು ಆರೋಪಿಸಲಾಗಿದೆ. ಈ ಬಗ್ಗೆ ಸಿಬ್ಬಂದಿ ಗಂಗಾಧರ ರವರು ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 31/ 2020 ಕಲಂ 269, 270, 353 504 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.

More from the blog

ರಾಜೀವ್ ಗಾಂಧಿ ಜ್ಯೋತಿ ಯಾತ್ರಾ ಸಮಿತಿಗೆ ಹನೀಫ್ ಬಗ್ಗುಮೂಲೆ ಹಾಗೂ ಸಿದ್ದೀಕ್ ಸೂರ್ಯ ನೇಮಕ

ಬಂಟ್ವಾಳ : ರಾಜೀವ್ ಗಾಂಧಿ ಜ್ಯೋತಿ ಯಾತ್ರಾ ಸಮಿತಿಯ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಅಳಕೆಮಜಲು ಸಮೀಪದ ಬಗ್ಗುಮೂಲೆ ನಿವಾಸಿ ಹನೀಫ್ ಬಗ್ಗುಮೂಲೆ ಹಾಗೂ ರಾಜ್ಯ ಉಪಾಧ್ಯಕ್ಷರಾಗಿ ಯುವ ಸಂಘಟಕ, ಯುವ ಉದ್ಯಮಿ,...

ಪಾಕಿಸ್ತಾನಕ್ಕೆ ಹೋಲಿಸಿದಾಗ ಸಿಟ್ಟುಗೊಳ್ಳುವ ನೀವು, ನಮ್ಮ ಸೈನಿಕರ ಮೇಲೆ ಪಾಕ್ ಪ್ರೇರಿತ ಉಗ್ರರಿಂದ ದಾಳಿಯಾದಾಗ ಖಂಡಿಸುವುದಿಲ್ಲ ಏಕೆ?

ಬೆಂಗಳೂರು: "ಶಾಸಕ ಸಿ.ಟಿ. ರವಿ ಅವರು ಕಾಂಗ್ರೆಸ್ ಸದಸ್ಯರ ಹೇಳಿಕೆಯನ್ನು ಪಾಕಿಸ್ತಾನಕ್ಕೆ ಹೋಲಿಸಿದಾಗ ನಿಮಗೆ ತೀವ್ರ ಕೋಪ ಬರುತ್ತದೆ. ಪಾಕಿಸ್ತಾನ ನಮ್ಮ ಶತ್ರು ರಾಷ್ಟ್ರ ಎಂಬ ಅರಿವು ನಿಮಗಿದ್ದರೆ, ಪುಲ್ವಾಮಾ ಮತ್ತು ಪಹಲ್ಗಾಮ್‌ಗಳಲ್ಲಿ...

ಅಪರಾಧಿಗಳ ಪತ್ತೆ ಮಾಡಲು ಅಶಕ್ತವಾದ ಪೊಲೀಸ್ ಇಲಾಖೆ ಬೆಳ್ತಂಗಡಿಗೆ ಅಗತ್ಯ ಇಲ್ಲ – ಸಿಪಿಐಎಂ

ಬೆಳ್ತಂಗಡಿ : ತಾಲೂಕಲ್ಲಿ ಅತ್ಯಾಚಾರ, ಕೊಲೆ, ಅಪಹರಣ, ದರೋಡೆ ಏನೇ ಆದರೂ ಪತ್ತೆಯಾಗದ ಪ್ರಕರಣಗಳಾಗುತ್ತಿರುವುದು ಸರಕಾರಕ್ಕೆ ಒಂದು ಕಪ್ಪು ಚುಕ್ಕೆಯಾಗಿದೆ ಮತ್ತು ಅಪರಾಧಿಗಳ ಪತ್ತೆ ಮಾಡಲು ಅಶಕ್ತವಾದ ಪೋಲೀಸ್ ಇಲಾಖೆ ಬೆಳ್ತಂಗಡಿಗೆ ಅಗತ್ಯ...

ಕುದ್ರೆಬೆಟ್ಟು : ರಿಕ್ಷಾ ಹಾಗೂ ಸ್ಕೂಟರ್ ನಡುವೆ ಅಪಘಾತ – ನಾಲ್ವರಿಗೆ ಗಾಯ

ಬಂಟ್ವಾಳ: ಕಲ್ಲಡ್ಕ ಸಮೀಪದ ಕುದ್ರೆಬೆಟ್ಟು ಮೇಲತ್ಸುವೆಯ ಕೊನೆಯ ಭಾಗದಲ್ಲಿ ರಿಕ್ಷಾ ಹಾಗೂ ಸ್ಕೂಟರ್ ನಡುವೆ ಅಪಘಾತ ಸಂಭವಿಸಿದ್ದು, ನಾಲ್ವರು ಗಾಯಗೊಂಡ ಘಟನೆ ನಡೆದಿದೆ. ರಿಕ್ಷಾದಲ್ಲಿ ಪ್ರಯಾಣಿಕರಾಗಿದ್ದ ಅಳಕೆಮಜಿಲು ನಿವಾಸಿ ಅವ್ವಮ್ಮ ಹಾಗೂ ಸುಹೈಲ್ ರಿಕ್ಷಾ...