ಬಂಟ್ವಾಳ: ಬಂಟ್ವಾಳದ ವೃದ್ಧೆ ಮಹಿಳೆಯೋರ್ವರಿಗೆ ಕೊರೊನಾ ಪಾಸಿಟಿವ್ ದೃಢವಾದ ಬಳಿಕ ಅವರ ಕುಟುಂಬಿಕರು ಹಾಗೂ ನೆರೆ ಮನೆಯವರನ್ನು ಸೇರಿಸಿ ಒಟ್ಟು 9 ಮಂದಿಯನ್ನು ಇಂದು ಮಧ್ಯಾಹ್ನ ಕ್ವಾರಂಟೈನ್ ಮಾಡಿದ್ದಾರೆ.

ಪಾಸಿಟಿವ್ ದೃಢವಾದ ವೃದ್ಧೆ ಮಹಿಳೆಯ ಮನೆಯಲ್ಲಿದ್ದ ಇವರ ಗಂಡ, ಮಗಳು ಹಾಗೂ ಮಗಳ ಮಗಳು, ಸಂಬಂಧಿ ಮಹಿಳೆ ಹಾಗೂ ಅವರ ಮಗಳು ಜೊತೆಗೆ ನೆರೆ ಮನೆಯ ನಾಲ್ವರನ್ನು ಒಟ್ಟು ಒಂಬತ್ತು ಮಂದಿಯನ್ನು ಕೊರಂಟೈನ್ ಮಾಡಿದ್ದಾರೆ.
ಕೊರೊನಾ ಪಾಸಿಟಿವ್ ದೃಢ ಮಹಿಳೆಯ ಜೊತೆ ತೆರಳಿದ ಇವರ ಮಗನನ್ನು ಆದಿತ್ಯವಾರವೇ ಕ್ವಾರಂಟೈನ್ ಮಾಡಲಾಗಿತ್ತು.
ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದ ವೃದ್ಧೆ ಮಹಿಳೆಯನ್ನು ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ಶನಿವಾರ ಎ.18 ರಂದು ದಾಖಲಿಸಲಾಗಿತ್ತು.
ಆದಿತ್ಯವಾರ ಮೃತಪಟ್ಟ ಮಹಿಳೆಯನ್ನು ದಾಖಲಿಸಿದ ಸುಮಾರು ಎರಡು ತಾಸು ಬಳಿಕ ಇವರನ್ನು ದಾಖಲಿಸಲಾಗಿತ್ತು. ಅದಕ್ಕೂ ಮೊದಲು ಇವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಇವರನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ 108 ಅಂಬ್ಯುಲೆನ್ಸ್ ಮೂಲಕ ಕರೆದುಕೊಂಡು ಹೋಗಲಾಗಿತ್ತು.
ಇಂದು ಕೊರೊನಾ ಪಾಸಿಟಿವ್ ದೃಢವಾದ ಮಹಿಳೆ ಆದಿತ್ಯವಾರ ಮೃತಪಟ್ಟ ಮಹಿಳೆಯ ನೆರೆಮನೆಯವರಾಗಿದ್ದಾರೆ.
ಆದಿತ್ಯವಾರ ಮೃತಪಟ್ಟ ಮಹಿಳೆ ಹಾಗೂ ಇಂದು ಕೊರೊನಾ ಪಾಸಿಟಿವ್ ದೃಡವಾದ ಮಹಿಳೆಯ ಟ್ರಾವೆಲ್ ಹಿಸ್ಟರಿಯನ್ನು ಸಂಬಂಧಿಸಿದ ಇಲಾಖೆ ತೆಗೆಯುತ್ತಿದೆ.
ಸದ್ಯ ಬಂಟ್ವಾಳ ಪೇಟೆ ಅಂದರೆ ಈ ಎರಡು ಮನೆಯ ಸುತ್ತಮುತ್ತಲಿನ 100 ಮೀ. ವ್ಯಾಪ್ತಿಯನ್ನು ಕಂಟೈನ್ ಮೆಂಟ್ ಏರಿಯಾ ಎಂದು ಗುರುತಿಸಿ ಆದಿತ್ಯವಾರವೇ ಸೀಲ್ ಡೌನ ಮಾಡಲಾಗಿದೆ.

