ಮಂಗಳೂರು: ಹಿಂದೂ ಜಾಗರಣಾ ವೇದಿಕೆ ಮುಖಂಡರಾದ ದಿನೇಶ್ ಪಂಜಿಗ ಹಾಗೂ ಬೆಳ್ತಂಗಡಿಯ ಯಶೋಧರ ಅವರ ಗಡಿಪಾರು ನೊಟೀಸ್ಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಹ ಸಂಯೋಜಕ ದಿನೇಶ್ ಪಂಜಿಗ ಮತ್ತು ವೇಣೂರು ವಲಯದ ಮುಖಂಡರಾಗಿದ್ದ ಯಶೋಧರ ಎಂಬುವರಿಗೆ, ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 55 ರಂತೆ ವಿಜಯಪುರ ಜಿಲ್ಲೆಯ ಸಿಂಧಗಿ ಪೊಲೀಸ್ ಠಾಣಾ ವ್ಯಾಪ್ತಿಗೆ ನಿಮ್ಮನ್ನು ಯಾಕೆ ಗಡಿಪಾಟು ಮಾಡಬಾರು ಎಂದು ಕಾರಣ ಕೇಳಿ ಪುತ್ತೂರು ಉಪವಿಭಾಗೀಯ ದಂಡಾಧಿಕಾರಿ ನೋಟಿಸ್ ಜಾರಿ ಮಾಡಿದ್ದರು. ಹಾಗೆ ನೀವು ಸತ್ವಃ ನ್ಯಾಯವಾದಿಯವರ ಮೂಲಕ ವಿಚಾರಣೆಗೆ ಹಾಜರಾಗಿ ಈ ಕುರಿತು ವಾದಿಸಬಹುದು ಎಂದು ಉಪವಿಭಾಗೀಯ ದಂಡಾಧಿಕಾರಿ ನೋಟಿಸ್ ಪತ್ರದಲ್ಲಿ ತಿಳಿಸಿದ್ದರು.
ನೋಟಿಸ್ ಜಾರಿ ಮಾಡಿರುವ ಉಪವಿಭಾಗೀಯ ದಂಡಾಧಿಕಾರಿಯ ಕ್ರಮವನ್ನು ಪ್ರಶ್ನಿಸಿ ದಿನೇಶ್ ಪಂಜಿಗ ಹಾಗೂ ಬೆಳ್ತಂಗಡಿಯ ಯಶೋಧರ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿದಾರರ ಪರ ವಕೀಲ ಮಹೇಶ್ ಕಜೆ ಅವರು ವಾದಿಸಿ, ನೋಟಿಸ್ ಜಾರಿ ಮಾಡಿದ್ದು ಸರಿಯಿಲ್ಲ ಎಂದು ನ್ಯಾಯಾಲಯದ ಗಮನ ಸೆಳೆದ್ದರು. ಅರ್ಜಿದಾರರ ಪರವಾದ ವಾದವನ್ನು ಪುರಸ್ಕರಿಸಿದ ನ್ಯಾಯಾಧೀಶರು ಗಡಿಪಾರು ನೊಟೀಸ್ಗೆ ತಡೆಯಾಜ್ಞೆ ನೀಡಿದ್ದಾರೆ. ಹಾಗೆ ಆಪಾದಿತರ ವಿರುದ್ಧದ ಎಲ್ಲ ಕಡತಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸೂಚನೆ ನೀಡಿದ್ದಾರೆ