ಪುತ್ತೂರು: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಇದರ ಸ್ಥಾಪಕರ ದಿನಾಚರಣೆ ಪ್ರಯುಕ್ತ ಅಗ್ನಿ ಅವಘಡ ನಿರ್ವಹಣಾ ಪ್ರಾತ್ಯಕ್ಷಿಕೆಯು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆ ಯಲ್ಲಿ ನಡೆಯಿತು.

ಶಾಲಾ ಸಂಚಾಲಕರಾದ ಭಾಸ್ಕರ ಆಚಾರ್ ಹಿಂದಾರ್ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಅಗ್ನಿಶಾಮಕ ದಳದ ಮುಖ್ಯಸ್ಥ ರಾದ ಲೀಲಾಧರ್ ಇವರು ಬೆಂಕಿ ಹಾಗೂ ವಿದ್ಯುತ್ ನಿಂದ ಉಂಟಾಗುವ ಅನಾಹುತಗಳು ಹಾಗು ವಹಿಸಬೇಕಾದ ಮುಂಜಾಗರುಕತೆಯ ಬಗ್ಗೆ ಸವಿವರವಾಗಿ ತಿಳಿ ಹೇಳಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪುತ್ತೂರು ಸ್ಥಳೀಯ ಸಂಸ್ಥೆಯ ಮೇಬಲ್ ರವರು ಪ್ರಸ್ತುತ ದಿನಗಳಲ್ಲಿ ಸ್ಕೌಟ್ಸ್ & ಗೈಡ್ಸ್ ನ ಅವಶ್ಯಕತೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು. ವೇದಿಕೆಯಲ್ಲಿ ಅಗ್ನಿಶಾಮಕ ದಳ ಪುತ್ತೂರು ಘಟಕದ ಠಾಣಾಧಿಕಾರಿಗಳಾದ ವಿ. ಸುಂದರ್ , ಅಬ್ದುಲ್ ಅಜೀಜ್ ಹಾಗು ಭಾರತ್ ಸ್ಕೌಟ್ಸ್& ಗೈಡ್ಸ್ ದಕ್ಷಿಣ ಕನ್ನಡ ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಪ್ರೀತೇಶ್ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಜಯಮಾಲಾ .ವಿ.ಎನ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಗೈಡ್ಸ್ ಶಿಕ್ಷಕಿ ರೇಷ್ಮಾ ಭಂಡಾರಿ ವಂದಿಸಿ ಸ್ಕೌಟ್ ಶಿಕ್ಷಕರಾದ ಮುರಳೀಕೃಷ್ಣ ಕಾರ್ಯಕ್ರಮ ನಿರೂಪಿಸಿದರು.
ಅಗ್ನಿ ಅವಘಡ ನಿರ್ವಹಣಾ ಪ್ರಾತ್ಯಕ್ಷಿಕೆ.
ವಿದ್ಯಾಸಂಸ್ಥೆಯ ವಿಶಾಲವಾದ ಮೈದಾನದಲ್ಲಿ ಒಣಗಿದ ತೆಂಗಿನ ಗರಿಗಳಿಂದ ಗುಡಿಸಲನ್ನು ನಿರ್ಮಿಸಲಾಯಿತು. ಅದಕ್ಕೆ ಬೆಂಕಿ ಹಿಡಿದಾಗ ಅಗ್ನಿಶಾಮಕ ದಳ ಯಾವ ರೀತಿ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಪ್ರಾತ್ಯಕ್ಷಿಕೆಯ ಮೂಲಕ ಅಗ್ನಿ ಶಾಮಕ ದಳದ ಸಿಬ್ಬಂದಿಗಳಾದ ಮಂಜುನಾಥ್, ಶ್ರೀಧರ್, ಮೋಹನ್ ಜಾಧವ್, ನಿಖಿಲ್ ರಾಜ್ ಅವರು ತೋರಿಸಿದರು. ಈ ಕಾರ್ಯಕ್ರಮವು ಮಕ್ಕಳಿಗೆ ಹೊಸ ಅನುಭವವನ್ನು ನೀಡಿತು.
