ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ಮಾನ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಪುಸ್ತಕ ಗೂಡು ಎಂಬ ವಿಶೇಷ ಪರಿಕಲ್ಪನೆಯ ಅಡಿಯಲ್ಲಿ ಮಡಂತ್ಯಾರು ಗ್ರಾಮ ಪಂಚಾಯತ್ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಮಡಂತ್ಯಾರು ಪೇಟೆಯ ಮಡಂತ್ಯಾರು ಬಸ್ಸು ತಂಗುದಾಣದಲ್ಲಿ ‘ಪುಸ್ತಕ ಗೂಡು’ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯ್ತು. ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಶಶಿಪ್ರಭಾ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.


ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರು, ಸದಸ್ಯರು, ವರ್ತಕರ ಸಂಘದ ಅಧ್ಯಕ್ಷರಾದ ಜಯಂತ ಶೆಟ್ಟಿ, ರೋಟರಿ ಕ್ಲಬ್ ಮಡಂತ್ಯಾರು ಇದರ ಅಧ್ಯಕ್ಷರಾದ ಕಾಂತಪ್ಪ ಗೌಡ, ಜೆ.ಸಿ.ಐ ಸಂಸ್ಥೆ ಮಡಂತ್ಯಾರು ಇದರ ಅಧ್ಯಕ್ಷರಾದ ಪ್ರಸನ್ನ ಶೆಟ್ಟಿ, ಮಡಂತ್ಯಾರು ಆಟೋ ರಿಕ್ಷಾ ಚಾಲಕ- ಮಾಲಕರ ಸಂಘದ ಅಧ್ಯಕ್ಷರಾದ ವಾಲ್ಟರ್ ಫೆರ್ನಾಂಡಿಸ್ , ಹಾಗೆಯೇ ಆಟೋ ರಿಕ್ಷಾ ಚಾಲಕ- ಮಾಲಕರ ಸಂಘದ ಸದಸ್ಯರು, ಊರಿನ ಗಣ್ಯರು, ಗ್ರಾಮ ಪಂಚಾಯತ್ ನ ಸಿಬ್ಬಂದಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಉದ್ದೇಶಿಸಿ ವಿವಿಧ ಸಂಘ ಸಂಸ್ಥೆಯ ಅಧ್ಯಕ್ಷರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ರೋಟರಿ ಕ್ಲಬ್ ಹಾಗೂ ಜೆ.ಸಿ.ಐ ನ ವತಿಯಿಂದ ಪುಸ್ತಕಗಳನ್ನು ಕೊಡುಗೆಯಾಗಿ ನೀಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ಕಾರಣೀಕರ್ತರಾದರು. ಕಾರ್ಯಕ್ರಮದ ಸ್ವಾಗತವನ್ನು ಗ್ರಾ.ಪಂ ಕಾರ್ಯದರ್ಶಿಯವರಾದ ಮೋರ್ಲಿನ್ ಕ್ರಿಸ್ತಿನ್ ಡಿಸೋಜ ಇವರು ನೆರವೇರಿಸಿದರು. ಗ್ರಾ.ಪಂ ನ ಅಭಿವೃದ್ಧಿ ಅಧಿಕಾರಿಯಾದ ಪುರುಷೋತ್ತಮ.ಜಿ ಇವರು ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ಧನ್ಯವಾದವನ್ನು ಗ್ರಾ.ಪಂ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದ ಮೇಲ್ವಿಚಾರಕಿ ಸರೋಜಿನಿ ಇವರು ನೆರವೇರಿಸಿದರು.

