ಬಂಟ್ವಾಳ : ಬೆಳ್ತಂಗಡಿ ತಾಲೂಕು ಮಾಲಾಡಿ ಗ್ರಾಮದ ಪುಂಜಾಲಕಟ್ಟೆ ಸಮೀಪದ ಪುರಿಯ ಶ್ರೀ ದೇವಿ ಭಜನಾ ಮಂದಿರದ ೩೦ನೇ ವರ್ಷದ ಪ್ರಯುಕ್ತ ವಾರ್ಷಿಕ ಭಜನ ಮಂಗಲೋತ್ಸವ ಶ್ರೀ ಕ್ಷೇ.ಧ.ಗ್ರಾ.ಯೋಜನೆ ಪುರಿಯ ಒಕ್ಕೂಟ ಮತ್ತು ಊರವರ ಸಹಕಾರದೊಂದಿಗೆ ಫೆ.15ರಿಂದ ಫೆ.17ರ ವರೆಗೆ ಜರಗಲಿದೆ.
ಫೆ.15ರಂದು ಬೆಳಗ್ಗೆ ಗಣ ಹೋಮ, ನವಕ ಕಲಶಾಭಿಷೇಕ, ಮಹಾಪೂಜೆ , ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಮಹಾಪೂಜೆ ಬಳಿಕ ಧಾರ್ಮಿಕ ಸಭೆಯಲ್ಲಿ ಗುರುಪುರ ವಜ್ರದೇಹಿ ಮಠ ಶ್ರೀ ರಾಜಶೇಖರಾನಂದ ಅವರು ಆಶೀರ್ವಚನ ನೀಡಲಿರುವರು. ಸಂಜೆ ನಿಶಿಪೂರ್ಣ ಭಜನೆ ಪ್ರಾರಂಭ, ಫೆ.16ರಂದು ಶನಿವಾರ ಬೆಳಗ್ಗೆ ಭಜನಾ ಮಂಗಲ, ರಾತ್ರಿ ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ನಡೆಯಲಿದೆ.ಫೆ.17ರಂದು ರಾತ್ರಿ ಶ್ರೀ ಹನುಮಗಿರಿ ಮೇಳದವರಿಂದ ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ರೋಹಿತ್ ಪೂಜಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

