ಮಂಗಳೂರು: ಮೈಸೂರು ರಂಗಾಯಣದ ಕಲಾವಿದರು ಅಭಿನಯಿಸುವ ಕುವೆಂಪು ಮಹಾಕಾವ್ಯ ಶ್ರೀರಾಮಾಯಣ ದರ್ಶನಂ ಆಧಾರಿತ ನಾಟಕ ಇಂದು(ಮಂಗಳವಾರ) ಸಂಜೆ 5 ರಿಂದ ಮಂಗಳೂರು ಪುರಭವನದಲ್ಲಿ ಪ್ರದರ್ಶನಗೊಳ್ಳಲಿದೆ.
5 ಗಂಟೆ ಅವಧಿಯ ಈ ನಾಟಕವು ಆಯತಿ ಮಂಗಳೂರು ಆಯೋಜನೆಯಲ್ಲಿ ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗವಿದೆ.

ನಾಟಕದಲ್ಲಿ 50ಕ್ಕೂ ಹೆಚ್ಚು ಪರಿಣತ ಕಲಾವಿದರು ಅಭಿನಯಿಸುತ್ತಿದ್ದು, ಕುವೆಂಪು ಮಹಾಕಾವ್ಯವನ್ನು ಜಗದೀಶ ಮನೆವಾರ್ತೆ ಮತ್ತು ಕೃಷ್ಣಕುಮಾರ ನಾರ್ಣಕರ್ಜೆ ಅವರು ರಂಗರೂಪಕ್ಕೆ ಇಳಿಸಿದ್ದಾರೆ. ಹೆಗ್ಗೋಡಿನ ಕೆ.ಜಿ.ಮಹಬಲೇಶ್ವರ ಅವರು ನಿರ್ದೇಶಿಸಿದ್ದಾರೆ. ಎಚ್.ಕೆ.ದ್ವಾರಕನಾಥ್ ಅವರು ರಂಗ ವಿನ್ಯಾಸಗೊಳಿಸಿದ್ದು, ಪ್ರಮೋದ್ ಶಿಗ್ಗಾಂವ್ ವಸ್ತ್ರ ಮತ್ತು ಪರಿಕರ ವಿನ್ಯಾಸದ ಜವಾಬ್ದಾರಿ ಹೊತ್ತಿದ್ದಾರೆ. ಶ್ರೀನಿವಾಸ್ ಭಟ್ ಸಂಗೀತ ನಿರ್ದೇಶನ, ಮಹೇಶ್ ಕಲ್ಲತ್ತಿ ಅವರ ಬೆಳಕಿನ ವಿನ್ಯಾಸವಿದೆ.
ನಾಟಕಕ್ಕೆ 200 ರೂ.ಪ್ರವೇಶ ಶುಲ್ಕ ನಿಗದಿಪಡಿಸಲಾಗಿದ್ದು, ಕಲಾಸಕ್ತರು ಪ್ರೋತ್ಸಾಹಿಸುವಂತೆ ಆಯತಿ ಬಳಗದ ವಿದ್ಧು ಉಚ್ಚಿಲ್ ಮನವಿ ಮಾಡಿದ್ದಾರೆ.
ಇಂದೆ ಬೆಳಗ್ಗಿನಿಂದಲೇ ನಾಟಕದ ಟಿಕೇಟ್ ಗಳು ಪುರಭವನದ ಕೌಂಟರ್ ನಲ್ಲಿ ಲಭ್ಯವಿದೆ ಎಂದು ಅವರು ತಿಳಿಸಿದ್ದಾರೆ.