Tuesday, July 8, 2025

ಸೆ.17ರಿಂದ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ

ಬಂಟ್ವಾಳ: ಪುರಸಭೆಯು  ಆಸ್ತಿ ತೆರಿಗೆಯ ಜೊತೆ ಕಸ ನಿರ್ವಹಣಾ ಶುಲ್ಕವನ್ನು  ಅಡ್ವಾನ್ಸ್   ಆಗಿ ವಸೂಲಿ ಮಾಡುವ ಕ್ರಮವನ್ನು ಕೈ ಬಿಡಬೇಕು ಎಂದು ಒತ್ತಾಯಿಸಿ ಬಂಟ್ವಾಳ ತಾಲೂಕು ಸಮಾನಮನಸ್ಕ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ಬಂಟ್ವಾಳ ಪುರಸಭಾ ಕಚೇರಿ ಮುಂದೆ ಸೆ.17 ರಿಂದ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ ನಡೆಸಲಿದೆ.                                    ಬುಧವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಮಿತಿ ಸಂಚಾಲಕ ಬಿ.ಶೇಖರ್ ಅಂದು ಬೆಳಿಗ್ಗೆ 9.30 ಕ್ಕೆ ರಥಬೀದಿಯಲ್ಲಿರುವ ಸ್ವರ್ಣ ಸೌಧದ ಮುಂಭಾಗದಲ್ಲಿ ಪುರವಾಸಿಗಳು,ವರ್ತಕರು ಸಭೆಸೇರಿ ಅಲ್ಲಿಂದ ಮೆರವಣಿಗೆ ಮೂಲಕ ಪುರಸಭಾ ಕಚೇರಿಯವರೆಗೆ ಸಾಗಿ ಧರಣಿ ಆರಂಭಿಸಲಾಗುವುದು ಎಂದು ಹೇಳಿದರು. ತೆರಿಗೆಯ ಜೊತೆ ಕಸ ಸಂಗ್ರಹದ ಶುಲ್ಕ ವಸೂಲಿ ಮಾಡುವ ಪುರಸಭೆಯ ಆಡಳಿತಾಧಿಕಾರಿ ಹಾಗೂ ಮುಖ್ಯಾಧಿಕಾರಿಯವರ ಜನವಿರೋಧಿ ನೀತಿಯನ್ನು ವಿರೋಧಿಸಿ ಈಗಾಗಲೇ ಜಿಲ್ಲಾಧಿಕಾರಿವರಿಗೆ ಮನವಿ ಸಲ್ಲಿಸಿದ್ದಲ್ಲದೆ ಪ್ರತಿಭಟನೆಯನ್ನು ಕೂಡ ಮಾಡಲಾಗಿತ್ತು,ಆದರೆ  ಇದಕ್ಕೆ ಸ್ಪಂದಿಸದ ಹಿನ್ನಲೆಯಲ್ಲಿ ಈ ಕ್ರಮವನ್ನು ಕೈ ಬಿಡುವವರೆಗೂ ಅನಿಧಿಷ್ಠಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಅವರು ತಿಳಿಸಿದರು.  ಏಕಪಕ್ಷೀಯ ನಿರ್ಧಾರ:               ಪುರಸಭೆಯ ಈ ಹಿಂದಿನ ಆಡಳಿತಾವಧಿಯಲ್ಲಿ ಈ ಬಗ್ಗೆ ಚರ್ಚೆಯಾಗಿದ್ದು, ಬಿಟ್ಟರೆ ತೆರಿಗೆ ಜೊತೆ ಶುಲ್ಕ ವಸೂಲಿಯ ಬಗ್ಗೆ ಯಾವುದೇ ನಿರ್ಣಯ ದಾಖಲಾಗಿಲ್ಲ,ಇದು ಪುರಸಭಾಧಿಕಾರಿಗಳ ಏಕಪಕ್ಷೀಯ ನಿರ್ಧಾರವಾಗಿದೆ  ಎಂದು ಪುರಸಭಾ ಸದಸ್ಯ ಮೊನೀಶ್ ಆಲಿ ತಿಳಿಸಿದರು.ಚುನಾಯಿತ ಪ್ರತಿನಿಧಿಗಳ ಜೊತೆ ಕನಿಷ್ಠ ಚರ್ಚಿಸದೆ ಈ ಕ್ರಮ ಕೈಗೊಂಡಿರುವುದನ್ನು ಖಂಡಿಸಿದ ಅವರು,ಪುರಸಭಾ ವ್ಯಾಪ್ತಿಯ ಕೆಲ ವಾಡ್೯ಗಳಿಗೆ ಈಗಲೂ ಕಸ ಸಂಗ್ರಹದ ವಾಹನಗಳು ಹೋಗುವಂತ ಸ್ಥಿತಿಯಲ್ಲಿಲ್ಲ,ಸಮರ್ಪಕ ತ್ಯಾಜ್ಯ ವಿಲೇವಾರಿಯು ಆಗದಿರುವ ಈ ಹಂತದಲ್ಲಿ ಪುರವಾಸಿಗಳಿಂದ ಕಸದ ಶುಲ್ಕವನ್ನು ತೆರಿಗೆಯ ಜೊತೆ ಸಂಗ್ರಹಿಸುವುದು ಸಮರ್ಥನಿಯವಲ್ಲ,ಪುರವಾಸಿಯೊಬ್ಬ ದೃಢಪತ್ರ ಬೇಕೆಂದು ಕಚೇರಿಗೆ ತೆರಳಿದರೆ ಅಧಿಕಾರಿಗಳು ಕಸದ ಶುಲ್ಕ ಪಾವತಿಸದೆ ದೃಢಪತ್ರ ನೀಡದ ಉದಾಹರಣೆಯು ಇದೆ ಎಂದ ಅವರು ಇದೀಗ ನೀರಿನ ಶುಲ್ಕವನ್ನು ಮನಬಂದಂತೆ ಏರಿಸಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಆರೋಪಿಸಿದರು. ಪುರಸಭೆಯ ಮುಖ್ಯಾಧಿಕಾರಿಯವರು  ಶ್ರೀಮಂತರ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದ ರಾಮಣ್ಣ ವಿಟ್ಲ  ಇನ್ನಾದರೂ ಬಡವರ ಬಗ್ಗೆ ಕಾಳಜಿ ತೋರಲಿ ಎಂದು ಸಲಹೆ ನೀಡಿದರು.ಪುರಸಭಾ ಸದಸ್ಯರಾದ ಗಂಗಾಧರ ಪೂಜಾರಿ,ಮಾಜಿ ಸದಸ್ಯರಾದ ಬಿ.ಮೋಹನ್, ಜಗದೀಶ್ ಕುಂದರ್ ,ಸಮಿತಿ ಸಂಚಾಲಕ ಪ್ರಭಾಕರ ದೈವಗುಡ್ಡೆ ಮೊದಲಾದವರಿದ್ದರು.

More from the blog

ಕೋವಿಡ್‌ ಲಸಿಕೆ ಹೃದಯಾಘಾತಕ್ಕೆ ನೇರ ಕಾರಣ ಅಲ್ಲ: ದಿನೇಶ್‌ ಗುಂಡೂರಾವ್‌ ಸ್ಪಷ್ಟನೆ..

ಕೋವಿಡ್‌ ಲಸಿಕೆ ಹೃದಯಾಘಾತಕ್ಕೆ ನೇರ ಕಾರಣ ಅಲ್ಲ ಎಂದು ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ. ಹೃದಯಾಘಾತ ಕುರಿತು ಸಮೀಕ್ಷೆ ನಡೆಸಿದ ತಾಂತ್ರಿಕ ಸಲಹಾ ಸಮಿತಿಯಿಂದ ವರದಿ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಕೋವಿಡ್‌ ಲಸಿಕೆ...

ಸರಪಾಡಿ : 34ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಚೇತನ್ ಬಜ ಆಯ್ಕೆ..

ಬಂಟ್ವಾಳ : ಶರಭೇಶ್ವರ ದೇವಸ್ಥಾನ ಸರಪಾಡಿ ಇದರ 34ನೇ ವರುಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ 3ನೇ ಬಾರಿ ಚೇತನ್ ಬಜ ಆಯ್ಕೆಯಾಗಿದ್ದಾರೆ.    

ಸೌಹಾರ್ದ ಬದುಕು ಕಟ್ಟೋಣ : ಡಾ.ಎನ್.ಇಸ್ಮಾಯಿಲ್..

ಮಂಗಳೂರು : ನಮ್ಮೊಳಗಿನ ಜಾತಿ, ಧರ್ಮ, ಭಾಷೆಯ ವೈವಿಧ್ಯತೆಯನ್ನು ಜೊತೆಗಿರಿಸಿಕೊಂಡು ನಾವೆಲ್ಲರೂ ಒಂದೇ ಅನ್ನುವ ಸೌಹರ್ದತೆಯ ಸಮಾಜವನ್ನು ಕಟ್ಟಬೇಕಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿ ಯುವಜನರ ಜವಬ್ದಾರಿ ಮಹತ್ವವಾದುದು ಎಂದು ನಿವೃತ್ತ ಪ್ರಾಂಶುಪಾಲರಾದ ಡಾ.ಎನ್.ಇಸ್ಮಾಯಿಲ್...

Bantwal: ಅಪ್ರಾಪ್ತ ಬಾಲಕ ನೇಣಿಗೆ ಶರಣು:ಕಾರಣ ನಿಗೂಡ

ಬಂಟ್ವಾಳ: ಅಪ್ರಾಪ್ತ ಬಾಲಕನೊರ್ವ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತುಂಬೆ ಗ್ರಾಮದ ಪರ್ಲಕ್ಕೆ ಎಂಬಲ್ಲಿ ಜುಲೈ 7 ರಂದು ಸಂಜೆ ವೇಳೆ ನಡೆದಿದೆ. ತುಂಬೆ ಪರ್ಲಕ್ಕೆ ನಿವಾಸಿ ಕರುಣಾಕರ ಗಟ್ಟಿ ಅವರ...