ಪುಂಜಾಲಕಟ್ಟೆ: ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ (ರಿ.) ಪುಂಜಾಲಕಟ್ಟೆ ಇದರ ವತಿಯಿಂದ ನ.5 ರಂದು ಸಂಜೆ 6.30ಗಂಟೆಗೆ ಪುಂಜಾಲಕಟ್ಟೆ ಉತ್ಸವ ಕಾರ್ಯಕ್ರಮ ಪಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ನಡೆಯಲಿದೆ.


ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ನ ಸ್ಥಾಪಕಾಧ್ಯಕ್ಷ ಯಂ.ತುಂಗಪ್ಪ ಬಂಗೇರವರ ನೇತೃತ್ವದಲ್ಲಿ, ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷ ಎಂ.ಪ್ರಶಾಂತ್ ಪುಂಜಾಲಕಟ್ಟೆ ರವರ ಅಧ್ಯಕ್ಷತೆಯಲ್ಲಿ ರಾಜೇಶ್ ಕಣ್ಣೂರ್ ಇವರ ಸಂಯೋಜನೆಯೊಂದಿಗೆ ರಾಜ್ಯಮಟ್ಟದ ಗ್ರೂಪ್ ಡ್ಯಾನ್ಸ್ ಸ್ಪರ್ಧಾ ಕಾಯಕ್ರಮ ಸ್ವಸ್ತಿಕ್ ಡ್ಯಾನ್ಸ್ ಬ್ಲಾಸ್ಟ್-2022 ಆಯೋಜಿಸಲಾಗಿದೆ.
ರಾಜ್ಯಮಟ್ಟದ ಗ್ರೂಪ್ ಡ್ಯಾನ್ಸ್ ವಿಜೇತರಿಗೆ ಪ್ರಥಮ 25,000 ಮತ್ತು ಸ್ವಸ್ತಿಕ್ ಡ್ಯಾನ್ಸ್ ಬ್ಲಾಸ್ಟ್ ಟ್ರೋಫಿ, ದ್ವಿತೀಯ 15,000 ಮತ್ತು ಸ್ವಸ್ತಿಕ್ ಡ್ಯಾನ್ ಬ್ಲಾಸ್ಟ್ ಟ್ರೋಫಿ, ತೃತಿಯ 10,000 ಮತ್ತು ಸ್ವಸ್ತಿಕ್ ಡ್ಯಾನ್ಸ್ ಬ್ಲಾಸ್ಟ್ ಟ್ರೋಫಿ ನೀಡಲಾಗುತ್ತದೆ.
ಸ್ಪರ್ಧಾ ಸೂಚನೆಗಳು:
1) ಸ್ವಸ್ತಿಕ್ ಡ್ಯಾನ್ಸ್ ಬ್ಲಾಸ್ಟ್ ಸ್ಪರ್ಧೆಗೆ ಕನಿಷ್ಠ 8 ಜನ
2) ಡ್ಯಾನ್ಸ್ ಸ್ಪರ್ದಿಗಳಿಗೆ ತಮ್ಮ ಸಂಗೀತ ಸಿಡಿ /ಪೆನ್ ಡ್ರೈವ್ ಗಳನ್ನು ತಮ್ಮ ಸ್ಪರ್ಧಾ ಕಾರ್ಯಕ್ರಮದ ಮೊದಲು ಧ್ವನಿವರ್ಧಕರಲ್ಲಿ ನೀಡಬೇಕು.
3) ಸ್ಪರ್ದಾಳುಗಳು ಯಾವುದೇ ತರಹದ ಬೆಂಕಿ ಸುಡುಮದ್ದು ಉಪಯೋಗಿಸುವಂತಿಲ್ಲ. ನೃತ್ಯದ ಸಾಹಸ ಮಾಡುವಾಗ ಜಾಗರೂಕರಾಗಿರಬೇಕು. ಯಾವುದೇ ಅನಾಹುತಗಳಿಗೆ ಸಂಘಟಕರು ಜವಾಬ್ದಾರರಲ್ಲ.
4) ಭಾಗವಹಿಸುವ ಸ್ಪರ್ದಾಳುಗಳು ಯಾವುದೇ ಜಾತಿ ಮತ ಧರ್ಮದ ನಿಂದನೆಗೆ ಆಸ್ಪದವಿರುವುದಿಲ್ಲ. ಎಲ್ಲಾ ಸ್ಪರ್ಧೆಗಳ ಅಂತಿಮ ತೀರ್ಮಾನ ಸಂಘಟಕರದ್ದಾಗಿರುತ್ತದೆ.
ಇನ್ನು ಸ್ಪರ್ದಾಳುಗಳು ತಮ್ಮ ಹೆಸರನ್ನು ನ.03 ರ ಒಳಗೆ ನೊಂದಾಯಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಕ್ಲಬಿನ ಸಂಚಾಲಕ ರಾಜೇಶ್.ಪಿ.ಪುಂಜಾಲಕಟ್ಟೆ 9901098038 ಸಂಪರ್ಕಿಸಿ












