ಬಂಟ್ವಾಳ: ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ, ಶ್ರೀ ಮುರುಘೇಂದ್ರ ವನಿತಾ ಸಮಾಜ ಇವರ ನೇತೃತ್ವದಲ್ಲಿ ಶ್ರೀ ಕ್ಷೇ.ಧ.ಗ್ರಾ.ಯೋಜನೆ ಪಿಲಾತಬೆಟ್ಟು ಮತ್ತು ಕುಕ್ಕಳ ಒಕ್ಕೂಟ ಹಾಗೂ ಶ್ರೀ ಕ್ಷೇತ್ರ ಒಡಿಯೂರು ಗ್ರಾಮ ವಿಕಾಸ ಯೋಜನೆ ಪಿಲಾತಬೆಟ್ಟು ಇವರ ಸಹಭಾಗಿತ್ವದಲ್ಲಿ ಕೆಸರ್‌ಡ್ ಒಂಜಿ ದಿನ ಕಾರ್ಯಕ್ರಮ ಪುಂಜಾಲಕಟ್ಟೆ ಹೆಗ್ಡೆಬೆಟ್ಟು ಗದ್ದೆಯಲ್ಲಿ ನ.14ರಂದು ನಡೆಯಲಿದೆ.
ಪ್ರಗತಿಪರ ಕೃಷಿಕರಾದ ಕಟ್ಟೆಮನೆ ಉದಯಕುಮಾರ್ ಜೈನ್ ಮತ್ತು ಸಹೋದರರು ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಜಿ.ಪಂ. ನಿಕಟಪೂರ್ವಸದಸ್ಯ ಬಿ.ಪದ್ಮಶೇಖರ ಜೈನ್ ಅಧ್ಯಕ್ಷತೆ ವಹಿಸಲಿರುವರು. ಡಾ.ಗೌತಮ್ ಎಂ.ಕೆ.ಅಜಿಲ ಆಟೋಟ ಸ್ಪರ್ಧೆಗಳಿಗೆ ಚಾಲನೆ ನೀಡುವರು. ಸಂಜೆ ನಡೆಯುವ ಸಮಾರೋಪದಲ್ಲಿ ಜಿ.ಪಂ.ನಿಕಟಪೂರ್ವ ಸದಸ್ಯ ಎಂ.ತುಂಗಪ್ಪ ಬಂಗೇರ ಅಧ್ಯಕ್ಷತೆ ವಹಿಸಲಿರುವರು.ಉದ್ಯಮಿ ಹರೀಂದ್ರ ಟಿ.ಪೈ ಬಹುಮಾನ ವಿತರಿಸುವರು. ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿರುವರು.
ಕಾರ್ಯಕ್ರಮದಲ್ಲಿ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


