ಪುಂಜಾಲಕಟ್ಟೆ: ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್‌ಸ್ಕೂಲ್ ಪ್ರೌಢಶಾಲಾ ವಿಭಾಗ ಮತ್ತು ಹಳೆ ವಿದ್ಯಾರ್ಥಿ ಸಂಘ ಇದರ ಸಹಯೋಗದಲ್ಲಿ ವನ ಮಹೋತ್ಸವ ಪ್ರಯುಕ್ತ ತರಗತಿಗೊಂದು ತೆಂಗಿನ ಮರ ಯೋಜನೆಯಂತೆ ಶಾಲಾ ಆವರಣದಲ್ಲಿ ತೆಂಗಿನ ಸಸಿ ನೆಡುವ ಕಾರ್ಯಕ್ರಮ ಶುಕ್ರವಾರ ನಡೆಯಿತು.


ಬೆಳ್ತಂಗಡಿ ಮಾಜಿ ಶಾಸಕ, ಶಾಲಾ ಹಳೆ ವಿದ್ಯಾರ್ಥಿ ಪ್ರಭಾಕರ ಬಂಗೇರ ಅವರು ಪ್ರೌಢಶಾಲಾ ವಿಭಾಗದ ಹಳೆವಿದ್ಯಾರ್ಥಿ ಸಂಘದ ಸ್ಥಾಪಕಾಧ್ಯಕ್ಷ ನೃಪರಾಜ ಬಂಗೇರ ಅವರಿಗೆ ತೆಂಗಿನ ಸಸಿ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಶಾಲಾ 60ನೇ ವರ್ಷದ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿ ಸಂಘ ಮುಂದಿನ ಪೀಳಿಗೆಯ ಬಗ್ಗೆ ಕಳಕಳಿಯಿಂದ ಶಾಲಾ ಆವರಣದಲ್ಲಿ ತೆಂಗಿನ ಸಸಿ ನೆಡುವುದು ಅರ್ಥ ಪೂರ್ಣ ಕಾರ್ಯಕ್ರಮವಾಗಿದೆ. ಈ ಸಸಿಗಳನ್ನು ಪೊಷಣೆ ಮಾಡುವ ಅರಿವು ವಿದ್ಯಾರ್ಥಿಗಳಿಗೆ ಉಂಟಾಗಿ ಇದರ ಜವಾಬ್ದಾರಿ ವಹಿಸುವಂತಾಗಲಿ ಎಂದು ಹೇಳಿದ ಅವರು, ಶಾಲಾ ಅಭಿವೃದ್ಧಿಯಲ್ಲಿ ಹಳೆ ವಿದ್ಯಾರ್ಥಿಗಳು ಊರವರು ಕೈಜೋಡಿಸುವುದು ಕರ್ತವ್ಯ ಎಂದು ಹೇಳಿದರು.
ನಿವೃತ್ತ ಪ್ರಾಂಶುಪಾಲ ನಿ.ಸುಬ್ರಹ್ಮಣ್ಯ ಮಧ್ಯಸ್ಥ, ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯ ತಾಲೂಕು ಅಧ್ಯಕ್ಷ ಅಬ್ದುಲ್ ಲತೀಫ್ ಸಾಹೇಬ್, ಮಡಂತ್ಯಾರು ಗ್ರಾ.ಪಂ. ಅಧ್ಯಕ್ಷೆ ಶಶಿಪ್ರಭಾ, ಸದಸ್ಯೆ ಪಾರ್ವತಿ, ತಾ.ಪಂ. ನಿಕಟಪೂರ್ವ ಸದಸ್ಯ ಜೋಯೆಲ್ ಮೆಂಡೊನ್ಸಾ, , ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಮೋನಪ್ಪ ಕೆ., ಪ್ರೌಢಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗಿರೀಶ್ ಅನಿಲಡೆ, ಪ್ರಾಥಮಿಕ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಜಯರಾಮ ಶೆಟ್ಟಿ, ಪ್ರಾಥಮಿಕ ಅಂಗ್ಲ ಮಾಧ್ಯಮ ಸಮಿತಿ ಅಧ್ಯಕ್ಷ ದಿವಾಕರ ಶೆಟ್ಟಿ, ಸಂಘದ ಗೌರವ ಸಲಹೆಗಾರ ಪ್ರವೀಣ್ ಕುಮಾರ್ ದೋಟ,ಶಿಕ್ಷಕಿ ಶಾಂತಾ ಎಸ್., ಹಿರಿಯ ಹಳೆ ವಿದ್ಯಾರ್ಥಿಗಳಾದ ಮಹಮ್ಮದ್ ಪಿ., ಭಾರತ್ ಸೇವಾದಳದ ಜಿಲ್ಲಾಧ್ಯಕ್ಷ ಫ್ರಾನ್ಸಿಸ್ ವಿ.ವಿ., ನಿವೃತ್ತ ಯೋಧರಾದ ಕಾಂತಪ್ಪ ಗೌಡ,ನೆಲ್ಸನ್ ಲಸ್ರಾದೊ, ಸಂಘದ ಮಂಜಪ್ಪ ಮೂಲ್ಯ, ಪದಾಧಿಕಾರಿಗಳಾದ ಧರ್ಣಪ್ಪ ಗೌಡ, ಉದಯ ಕುಮಾರ್ ಶೆಟ್ಟಿ, ಪುಷ್ಪಲತಾ, ರಾಜೇಂದ್ರ ಕೆ.ವಿ., ರತ್ನದೇವ್,ಪದ್ಮನಾಭ ಸಾಲ್ಯಾನ್, ದಿನಕರ್ ಶೆಟ್ಟಿ, ಜಯರಾಜ್,ರಮೇಶ್ ಶೆಟ್ಟಿ,,ಲ್ಯಾನ್ಸಿ ಪಿಂಟೊ,ಸುರೇಶ್ ಶೆಟ್ಟಿ, ಮೋಹನ ಸಾಲ್ಯಾನ್, ಪಿ.ಎಂ.ಪ್ರಭಾಕರ, ಮೋಹನ ಆಚಾರ್ಯ,ಉಮೇಶ್ ಪೂಜಾರಿ, ಕುಶಾಲಪ್ಪ ಗೌಡ, ರವೀಶ್ವರ ಮತ್ತಿತರರು ಉಪಸ್ಥಿತರಿದ್ದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ಯಾಮ ಪ್ರಸಾದ್ ಸಂಪಿಗೆತ್ತಾಯ ಸ್ವಾಗತಿಸಿದರು. ಶಿಕ್ಷಕ ಹರಿಪ್ರಸಾದ್ ಪ್ರಾರ್ಥಿಸಿದರು. ಉಪಪ್ರಾಂಶುಪಾಲ ಉದಯಕುಮಾರ್ ಬಿ. ಜೈನ್ ವಂದಿಸಿದರು. ಶಿಕ್ಷಕ ಧರಣೇಂದ್ರ ಕುಮಾರ್ ಜೈನ್ ಕೆ. ಕಾರ್ಯಕ್ರಮ ನಿರೂಪಿಸಿದರು.

