ಮಂಗಳೂರು ವಿಲ್ಲಪುರಂ ರಾಷ್ಟ್ರೀಯ ಹೆದ್ದಾರಿಯ ಪುಂಜಾಲಕಟ್ಟೆ ಆರಕ್ಷಕ ಠಾಣೆ ಸಮೀಪದಲ್ಲಿರುವ, ಮಾರ್ಗದ ಬಳಿ ಬೆಳೆದು ನಿಂತ ಮಹಾ ವೃಕ್ಷವೊಂದು ಬೀಳುವ ಹಂತದಲ್ಲಿದ್ದು, ಅನೇಕ ವಾಹನಗಳು ಮತ್ತು ಪಾದಾಚಾರಿಗಳು ಸಂಚರಿಸುವ ಜನನಿಬಿಡ ರಸ್ತೆಯಲ್ಲಿ ಪ್ರಾಣಕ್ಕೆ ಕುತ್ತು ತರುವ ಪರಿಸ್ಥಿತಿಯನ್ನು ಕಂಡ ಸ್ಥಳೀಯರು ಜಿ.ಪಂ. ಸದಸ್ಯ ಯಂ. ತುಂಗಪ್ಪ ಬಂಗೇರರ ಗಮನಕ್ಕೆ ತಂದರು.

ಆರಕ್ಷಕ ಠಾಣೆಗೆ ಮಾಹಿತಿ ನೀಡಿದಾಗ ಅಲ್ಲಿಂದ ಯಾವ ಸ್ಪಂದನೆಯೂ ದೊರಕಲಿಲ್ಲ. ಬಳಿಕ ಯಂ.ತುಂಗಪ್ಪ ಬಂಗೇರ ಪಿಲಾತಬೆಟ್ಟು ವ್ಯ. ಸೇ. ಸ. ಸಂಘದ ಉಪಾಧ್ಯಕ್ಷರ ಉಮೇಶ್ ಪೂಜಾರಿ, ಮುಗರೋಡಿ ಕನ್ಸ್ ಸ್ಟ್ರಕ್ಷನ್ ನವರಿಗೆ ತಿಳಿಸಿ ಸ್ಥಳೀಯರ ಸಹಕಾರದಿಂದ ವೃಕ್ಷವನ್ನು ಕಡಿದುರುಳಿಸಿ ಸಂಭಾವ್ಯ ದುರಂತವನ್ನು ತಪ್ಪಿಸಿದರು.
