Thursday, June 26, 2025

ಬುರೂಜ್ : ಅಂತರಾಷ್ಟ್ರೀಯ ಮಟ್ಟದ ಕರಾಟೆ 1 ಬೆಳ್ಳಿ 1 ಕಂಚು

ಪುಂಜಾಲಕಟ್ಟೆ: ಮೂಡುಪಡುಕೋಡಿ ರಝಾನಗರದ ಬುರೂಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 5ನೇ ತರಗತಿಯ ವಿದ್ಯಾರ್ಥಿ ಚಿಂತನ್ ಮುಂಬೈನಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ 25ನೇ ಯುರೋ-ಏಷ್ಯಾ ಡಬ್ಲೋ.ಎಫ್.ಎಸ್.ಕೆ.ಓ. ಮುಕ್ತ ಕರಾಟೆ ಚಾಂಪಿಯನ್ ಶಿಪ್‌ನ ಕುಮಿಟೆ ಮತ್ತು ಕಟಾ ವಿಭಾಗದಲ್ಲಿ ಸ್ಪರ್ಧಿಸಿ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದು ಶಾಲೆಗೆ ಹಾಗೂ ಊರಿಗೆ ಕೀರ್ತಿ ತಂದಿರುತ್ತಾರೆ.

ಹೇಮಲತಾ ಮತ್ತು ಯಶೋಧರ ದಂಪತಿಗಳ ಸುಪುತ್ರನಾಗಿರುವ ಇವರು ಕರಾಟೆ ಜನಾಬ್ ಮೊಹಮ್ಮದ್ ನದೀಮ್, ಮೊಹಮ್ಮದ್ ಸರ್ಪ್‌ರಾಝ್ ಮತ್ತು ಮೊಹಮ್ಮದ್ ಶಾಕಿರ್ ಇವರಿಂದ ತರಬೇತಿ ಪಡೆಯುತ್ತಿದ್ದಾರೆ. ಇವರಿಗೆ ಶಾಲಾ ಸಂಚಾಲಕ ಜನಾಬ್ ಶೇಕ್ ರಹ್ಮತ್ತುಲ್ಲಾ, ಮುಖ್ಯ ಶಿಕ್ಷಕಿ ಶ್ರೀಮತಿ ಜಯಶ್ರೀ.ಬಿ. ಹಾಗೂ ಶಿಕ್ಷಕ ವೃಂದ ಇವರ ಸಾಧನೆಯನ್ನು ಶ್ಲಾಘಿಸಿದರು.

More from the blog

School Holiday : ಭಾರೀ ಮಳೆ ಮುನ್ಸೂಚನೆ : ನಾಳೆ ಬೆಳ್ತಂಗಡಿ ತಾಲೂಕಿನ ಶಾಲೆಗಳಿಗೆ ರಜೆ..

ಬೆಳ್ತಂಗಡಿ: ತಾಲೂಕಿನಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯ ಹಿನ್ನಲೆ ಬೆಳ್ತಂಗಡಿ ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಖಾಸಗಿ ವಿದ್ಯಾಸಂಸ್ಥೆಗಳಿಗೆ ಜೂನ್ 26ರಂದು ರಜೆ ಘೋಷಣೆ ಮಾಡಲಾಗಿದೆ. ಮುಂಜಾಗೃತ ಕ್ರಮವಾಗಿ ತಹಶೀಲ್ದಾರ್ ರವರ ತಾಲೂಕು ವಿಪತ್ತು...

Bantwal Police :ಜೂನ್ 26 ರಂದು ” ಮಾದಕ ದ್ರವ್ಯ ಮುಕ್ತ ಸಮಾಜಕ್ಕಾಗಿ ” ಅಭಿಯಾನ 2025 ಕಾರ್ಯಕ್ರಮ

ಬಂಟ್ವಾಳ: ದ.ಕ.ಜಿಲ್ಲಾ ಪೋಲೀಸ್ ಇಲಾಖೆ ಹಾಗೂ ಬಂಟ್ವಾಳ ವೃತ್ತದ ಪೋಲೀಸ್ ಇಲಾಖೆಯ ವತಿಯಿಂದ ಬಿಸಿರೋಡಿನಲ್ಲಿ ಜೂನ್ 26 ರಂದು " ಮಾದಕ ದ್ರವ್ಯ ಮುಕ್ತ ಸಮಾಜಕ್ಕಾಗಿ " ಅಭಿಯಾನ 2025 ಕಾರ್ಯಕ್ರಮ ನಡೆಯಲಿದೆ...

Kalladka : ಕಲ್ಲಡ್ಕ ಪ್ಲೈ ಓವರ್ ಸಂಪೂರ್ಣವಾಗಿ ಸಂಚಾರಕ್ಕೆ ಮುಕ್ತ..

ಬಂಟ್ವಾಳ : ಬಂಟ್ವಾಳ ತಾಲೂಕಿನ ಕಲ್ಲಡ್ಕದ ಪ್ಲೈ ಓವರ್ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಿಸಿರೋಡು - ಅಡ್ಡಹೊಳೆ ಅತೀ ಉದ್ದದ ಪ್ಲೈ ಓವರ್ ಸಂಪೂರ್ಣವಾಗಿ ಸಂಚಾರಕ್ಕೆ ಮುಕ್ತವಾಗಿದೆ. ಕಳೆದ 25 ದಿನಗಳ ಹಿಂದೆ...

ಇಡ್ಕಿದು ಗ್ರಾ. ಪಂ ಸಭಾಂಗಣದಲ್ಲಿ ರಾಜಕೀಯ ಸಭೆ ನಡೆಸಲು ಅನುಮತಿ ವಿಚಾರ : ಪಿಡಿಒ ಅಮಾನತು

ವಿಟ್ಲ: ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ರಾಜಕೀಯ ಸಭೆ ನಡೆಸಲು ಅವಕಾಶ ನೀಡಿದ‌ ಆರೋಪದ ಹಿನ್ನೆಲೆ ಯಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೋಕುಲ್ ದಾಸ್ ಭಕ್ತ ರವರನ್ನು ಅಮಾನತು...