ಬಂಟ್ವಾಳ: ದನಗಳನ್ನು ವಧೆ ಮಾಡಿ ಅಕ್ರಮವಾಗಿ ಮಾಂಸ ಮಾರಟಕ್ಕಾಗಿ ಸಾಗಾಣಿಕೆ ಮಾಡುವ ಸಮಯದಲ್ಲಿ ಮೂವರು ಆರೋಪಿಗಳನ್ನು ಪುಂಜಾಲಕಟ್ಟೆ ಕಟ್ಟೆ ಪೋಲೀಸರು ಬಂಧಿಸಿ, ಮಾಂಸ ಸಹಿತ ವಾಹನವನ್ನು ವಶಪಡಿಸಿಕೊಂಡು ಪ್ರಕರಣ ದಾಖಲು ಮಾಡಿದ ಘಟನೆ ರಾತ್ರಿ ವೇಳೆ ನಡೆದಿದೆ. ಅರೆಕಳ ನಿವಾಸಿ ಕಾಸಿಂ ಮತ್ತು ಕಕ್ಕ್ಯೆಪದವು ಉಳಿ ನಿವಾಸಿ ಅಬ್ದುಲ್ ಹಾರೀಶ್, ಕಾವಳಕಟ್ಟೆ ನಿವಾಸಿ ಹಸನ್ ಸಾಹೇಬ್ ಬಂಧಿತ ಆರೋಪಿಗಳು ವಶಪಡಿಸಿಕೊಂಡ ಸೊತ್ತುಗಳ ಮೌಲ್ಯ 6.60.ಲಕ್ಷ. ಪಿಲಾತಬೆಟ್ಟು ಗ್ರಾಮದ ಪುಂಜಾಲಕಟ್ಟೆ ನಂದಗೋಕುಲ ಕಲ್ಯಾಣ ಮಂಟಪ ದ ಬಳಿ ಪುಂಜಾಲಕಟ್ಟೆ ಠಾಣಾ ಪೋಲೀಸರು ವಾಹನ ತಪಾಸಣೆ ಮಾಡುತ್ತಿರುವ ವೇಳೆ ಬೆಳ್ತಂಗಡಿ ಕಡೆಯಿಂದ ಬಂಟ್ವಾಳ ಕಡೆಗೆ ಪಿಕ್ ಆಪ್ ವಾಹನದಲ್ಲಿ ಪರವಾನಿಗೆ ರಹಿತವಾಗಿ ಹಿಂಸಾತ್ಮಕ ವಾಗಿ ಎರಡು ದನಗಳನ್ನು ವಧೆ ಮಾಡಿ ಮಾಂಸವನ್ನು ಮಾರಾಟ ಮಾಡಲು ಸಾಗಾಣಿಕೆ ಮಾಡುವ ಉದ್ದೇಶದಿಂದ ಬರುತ್ತಿದ್ದಾಗ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ ಬಳಿಕ ಪ್ರಕರಣ ದಾಖಲಿಸಲಾಗಿದೆ . ಪುಂಜಾಲಕಟ್ಟೆ ಎಸ್. ಐ. ಸೌಮ್ಯ ಮತ್ತು ಸಿಬ್ಬಂದಿ ಗಳಾದ ಎ.ಎಸ್.ಐ ಬಾಸ್ಕರ್, ಪ್ರಶಾಂತ್, ಸಾಬುಮಿರ್ಜಿ, ಮತ್ತಿತರರು ಕಾರ್ಯಚರಣೆ ನಡೆಸಿದ್ದಾರೆ.

