Wednesday, February 12, 2025

ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ (ರಿ.) ಉಚಿತ ಸಾಮೂಹಿಕ ವಿವಾಹ : ಸ್ವಸ್ತಿ ಸಿರಿ ಪ್ರಶಸ್ತಿ ಪ್ರದಾನ

ಬಂಟ್ವಾಳ: ಪುಂಜಾಲಕಟ್ಟೆಯ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ನ 40ನೇ ಸಂಭ್ರಮಾಚರಣೆಯ ಪ್ರಯುಕ್ತ 16ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜಿ.ಪಂ.ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ ಅವರ ನೇತ್ರತ್ವದಲ್ಲಿ ರವಿವಾರ ಇಲ್ಲಿನ ಬಂಗ್ಲೆ ಮೈದಾನದಲ್ಲಿ ಜರಗಿತು.

ಕೃಷ್ಣ ಭಟ್ ಕಾರ್ಕಳ ಅವರ ಪೌರೋಹಿತ್ಯದಲ್ಲಿ , ಮಧ್ಯಾಹ್ನ 11.21ರ ಶುಭ ಮುಹೂರ್ತದಲ್ಲಿ 6 ಜೋಡಿ ವಧು-ವರರಿಗೆ ಶಾಸ್ತ್ರೊಕ್ತವಾಗಿ ಸಾಮೂಹಿಕ ವಿವಾಹ ನಡೆಯಿತು.

ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಪಿಲಾತಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಶಾರದಾ ಅವರು ಉದ್ಘಾಟಿಸಿದರು.

ಸಾಧಕರಿಗೆ ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ ಮತ್ತು ಸ್ವಸ್ತಿಕ್ ಸಂಭ್ರಮ ಪುರಸ್ಕಾರ ಗೈದ ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಅವರು ಮಾತನಾಡಿ, ಕ್ರೀಡೆ ಮತ್ತು ಸಾಮಾಜಿಕ ಚಟುವಟಿಕೆಯ ಮೂಲಕ ಗುರುತಿಸಿರುವ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್, ದಾನಿಗಳ ಸಹಕಾರದಿಂದ ನಡೆಸುವ ಸಾಮೂಹಿಕ ವಿವಾಹ ಕಾರ್ಯ ಪುಣ್ಯದ ಕೆಲಸ, ಸಾಧಕರನ್ನು ಗುರುತಿಸಿ ಸಮ್ಮಾನಿಸುತ್ತಿರುವುದು ಅಭಿನಂದನೀಯವಾಗಿದೆ ಎಂದರು.

ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ದ.ಕ.ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್,ಸಹಕಾರ ರತ್ನ ಲ.ಎ.ಸುರೇಶ್ ರೈಮಾತನಾಡಿ ಶುಭಹಾರೈಸಿದರು.

ಮುಂಬ ಉದ್ಯಮಿ ಕಕ್ಯಪದವು ನಾರಾಯಣ ಶೆಟ್ಟಿ ,ಉದ್ಯಮಿ ಜಯಚಂದ್ರ ಬೊಳ್ಮಾರ್, ಮಾವಿನಕಟ್ಟೆ ಉದ್ಯಮಿ ಅಬ್ದುಲ್ ಕುಂಞಿ, ಬೆಳ್ತಂಗಡಿ ಮಂಜುಶ್ರೀ ಜೆಸಿಐ ಅಧ್ಯಕ್ಷ ರಂಜಿತ್ ಎಚ್.ಡಿ.,ಕರ್ನಾಟಕ ತುಳುಸಾಹಿತ್ಯ ಅಕಾಡೆಮಿ ಸದಸ್ಯ ಮೋಹನದಾಸ ಕೊಟ್ಟಾರಿ,ಗುತ್ತಿಗೆದಾರ ಮೋಹನ್ ಶೆಟ್ಟಿ ನರ್ವಲ್ದಡ್ಕ, ಲ್ಯಾಂಪ್ ಸೊಸೈಟಿ ಅಧ್ಯಕ್ಷ ಸುಂದರನಾಯ್ಕ್, ಕೇರಳ ರಾಜ್ಯ ತುಳುಸಾಹಿತ್ಯ ಅಕಾಡೆಮಿ ಸದಸ್ಯ ಅಜಿತ್ ಕುಮಾರ್ , ಬಡಗಕಜೆಕಾರು ಗ್ರಾ.ಪಂ. ಅಧ್ಯಕ್ಷ ದೇವದಾಸ ಅಬುರ, ಉದ್ಯಮಿ ಇರ್ವತ್ತೂರು ಶೇಖರ ಪೂಜಾರಿ, ಪಿಲಾತಬೆಟ್ಟು ಪ್ರಾ.ಕೃ.ಸ.ಸಂಘದ ಉಪಾಧ್ಯಕ್ಷ ರವಿಶಂಕರ ಹೊಳ್ಳ, ಲಕ್ಷ್ಮೀಶ್ ಉಡುಪಿ, ಶಂಕರ ಶೆಟ್ಟಿ ಬೆದ್ರಮಾರ್,ಗಿರೀಶ್ ಸಾಲ್ಯಾನ್ ಹೆಗ್ಡೆಬೆಟ್ಟು ಗುತ್ತು, ,ಕ್ಲಬ್ ನ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಸಂಚಾಲಕ ರಾಜೇಶ್ ಪಿ.ಪುಂಜಾಲಕಟ್ಟೆ,ಗೌರವಾಧ್ಯಕ್ಷ ಅಬ್ದುಲ್ಲಾ ಪಿ., ಕಾರ್ಯದರ್ಶಿ ಜಯರಾಜ್ ಅತ್ತಾಜೆ,ಮಾಜಿ ಅಧ್ಯಕ್ಷ ಮಾಧವ ಬಂಗೇರ, ಕ್ರೀಡಾ ಸಂಚಾಲಕ ಅಬ್ದುಲ್ ಹಮೀದ್ , ಹರೀಶ್ಚಂದ್ರ ಶೆಟ್ಟಿಗಾರ್ ಮೊದಲಾದವರಿದ್ದರು.

ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪಾಡಿಗುತ್ತು ಅವರು ನೂತನ ವಧು-ವರರಿಗೆ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಸಂತೋಷ್ ಕುಮಾರ್ ತುಂಬೆ(ಶಿಕ್ಷಣ ) , ಅನ್ವೇಷ್ ಆರ್.ಶೆಟ್ಟಿ (ಯಕ್ಷಗಾನ), ಸದಾನಂದ ಅಮೀನ್ ಮಲ್ಪೆ (ಉದ್ಯಮ),ರಾಜು ಮಣಿಹಳ್ಳ(ದೈವ ನರ್ತನ), ಹಂಝ ಬಸ್ತಿಕೋಡಿ(ಸಮಾಜ ಸೇವೆ) ಅವರಿಗೆ ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮನೋಜ್ ಕನಪಾಡಿ(ಕಲೆ),ಭಾಸ್ಕರ ರಾವ್‌ಬಿ.ಸಿ.ರೋಡ್(ಸಂಗೀತ) ,ಹೇಮಚಂದ್ರ ಸಿದ್ದಕಟ್ಟೆ( ಸಂಘಟನೆ), ಸಂದೀಪ್ ಸಾಲ್ಯಾನ್(ಪತ್ರಕರ್ತ), ಚಂದ್ರಪ್ಪ ಮದ್ದಡ್ಕ (ಶಿಕ್ಷಣ)ಅವರಿಗೆ ಸ್ವಸ್ತಿಕ್ ಸಂಭ್ರಮ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ತುಳು ಸಾಹಿತ್ಯ ಅಕಾಡೆಮಿ ಸದಸ್ಯಮೋಹನದಾಸ ಕೊಟ್ಟಾರಿ, ಯಕ್ಷವಾಸ್ಯಂ ಸಂಚಾಲಕಿ ಸಾಯಿಸುಮ ನಾವಡ ಕಾರಿಂಜ ಅವರನ್ನು ಅಭಿನಂದಿಸಲಾಯಿತು. ಬೆಳಗ್ಗೆ ನಡೆದ ಕುಣಿತ ಭಜನೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಎಂ.ತುಂಗಪ್ಪ ಬಂಗೇರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.  ಮಾಜಿ ಅಧ್ಯಕ್ಷ ಪ್ರಭಾಕರ ಪಿ.ಎಂ.ಸ್ವಾಗತಿಸಿದರು.ಕಲಾವಿದ ಎಚ್ಕೇ ನಯನಾಡು ಕಾರ್ಯಕ್ರಮ ನಿರೂಪಿಸಿದರು. ಮಧ್ಯಾಹ್ನದ ಬಳಿಕ ಪುಂಜಾಲಕಟ್ಟೆ ನಾರಾಯಣ ಗುರು ವಸತಿ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ನಡೆಯಿತು,

ಬೆಳಗ್ಗೆ ಪುಂಜಾಲಕಟ್ಟೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದಿಂದ ಮದುವೆ ಮಂಟಪದವರೆಗೆ ವೈಭವಯುತವಾದ ವಧು-ವರರ ದಿಬ್ಬಣ ಮೆರವಣಿಗೆ ನಡೆಯಿತು. ಸಿದ್ದಕಟ್ಟೆ ಪ್ರಾ.ಕೃ.ಸ.ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಅವರು ದಿಬ್ಬಣ ಮೆರವಣಿಗೆಗೆ ಚಾಲನೆ ನೀಡಿದರು.

More from the blog

ಬೇಲಿ ವಿವಾದ : ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ತಾ.ಪಂ.ಅಧಿಕಾರಿ ವರ್ಗ ಕಚೇರಿ ಮುಂಭಾಗದ ಜಾಗಕ್ಕೆ ಕಬ್ಬಿಣದ ರಾಡ್ ಅಳವಡಿಸಿ ಬೇಲಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಾ.ಪಂ.ಗೆ ಹಠಾತ್...

ವಿಟ್ಲ ಪಿಎಂ ಶ್ರೀ ಸರಕಾರಿ ಪ್ರೌಢ ಶಾಲೆಯಲ್ಲಿ ಮೆಟ್ರಿಕ್ ಮೇಳ

ವಿಟ್ಲ: ವಿಟ್ಲ ಪಿ ಎಂ ಶ್ರೀ ಸರಕಾರಿ ಪ್ರೌಢ ಶಾಲೆ (ಆರ್ ಎಂ ಎಸ್ ಎಂ)ವಿಟ್ಲ ಇದರ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬುಧವಾರ ಮೆಟ್ರಿಕ್ ಮೇಳ ಕಾರ್ಯಕ್ರಮ ನಡೆಯಿತು. ಮೆಟ್ರಿಕ್ ಮೇಳವನ್ನು ವಿಟ್ಲ ಪಟ್ಟಣ...

ಚಾಲಕನಿಗೆ ಮೂರ್ಚೆ ರೋಗ ಬಂದು ಡಿವೈಡರ್ ಮೇಲೆ ಹತ್ತಿದ ಲಾರಿ

ಬಂಟ್ವಾಳ: ರಾ.ಹೆ.75ರ ತುಂಬೆ ಸಮೀಪ ಚಾಲಕನಿಗೆ ಮೂರ್ಛೆ ರೋಗ ಬಂದು ಲಾರಿಯೊಂದು ಡಿವೈಡರ್ ಮೇಲೆ ಹತ್ತಿ ಸುಮಾರು 100 ಮೀ.ನಷ್ಟು ಚಲಿಸಿ ನಿಂತಿದ್ದು,‌ ಸೀಟಿನಲ್ಲಿ ಬಿದ್ದಿದ್ದ ಚಾಲಕನನ್ನು ಸ್ಥಳೀಯರು ತುಂಬೆ ಆಸ್ಪತ್ರೆಗೆ ‌ಕರೆದುಕೊಂಡು...

ನೇಣು ಬಿಗಿದು ಯುವಕ ಆತ್ಮಹತ್ಯೆ

ಬಂಟ್ವಾಳ: ಖಿನ್ನತೆಯಿಂದ ಅವಿವಾಹಿತ ವ್ಯಕ್ತಿಯೊರ್ವನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಅಮ್ಟಾಡಿ ನಿವಾಸಿ ಮೆಕ್ಸಿನ್ ತಾವ್ರೋ ಅವರ ಮಗ ಜೀವನ್  ತಾವ್ರೋ ( 37) ಆತ್ಮಹತ್ಯೆ ಮಾಡಿಕೊಂಡ ಯುವಕ. ‌‌‌ಜೀವನ್ ಅವರು ಅಗಾಗ...